ರಾಜಕೀಯ

ರಹೀಂಖಾನ್‌ಗೆ ಸಚಿವ ಸ್ಥಾನಕ್ಕಾಗಿ ತಿರುಪತಿಯಲ್ಲಿ ವಿಶೇಷ ಪೂಜೆ

ಸಚಿವ ಸ್ಥಾನ ದೊರೆಯಲಿ ಎಂದು ವೆಂಕಟೇಶ್ವರ ಸ್ವಾಮಿಗೆ ಪ್ರಾರ್ಥನೆ; ಕಾಂಗ್ರೆಸ್ ಮುಖಂಡರ ವಿಶ್ವಾಸ ವ್ಯಕ್ತ

ಬೀದರ್, ಜು.27: ಶಾಸಕ ರಹೀಂಖಾನ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯಲಿ ಎಂದು ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನ್ಸನ್ ಘೋಡೆ ಅವರು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ರಹೀಂಖಾನ್ ಅವರ ಭಾವಚಿತ್ರ ಹಿಡಿದು ಸಚಿವ ಸ್ಥಾನ ಲಭಿಸುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು.

ನಂತರ ಮಾತನಾಡಿದ ಜಾನ್ಸನ್ ಘೋಡೆ, ರಹೀಂಖಾನ್ ಅವರು ಜನನಾಯಕರಾಗಿದ್ದು, ಈ ಹಿಂದೆ ಸಚಿವರಾಗಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರಿಗೆ ಮತ್ತೊಮ್ಮೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಧಮ್ಮದೀಪ್, ಆಕಾಶ್ ರಿಕ್ಕೆ, ಸಂತೋಷ್, ಸಂಜೀವ್, ಅಜಯ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button