ಜಿಲ್ಲಾಸುದ್ದಿಸಾಧಕರು

ವಿ.ಎನ್. ಕಾಗಲಕರ್ ಪ್ರಶಸ್ತಿಗೆ ಐವರು ಹಿರಿಯ ಪತ್ರಕರ್ತರ ಆಯ್ಕೆ: ನಾಳೆ ಪತ್ರಿಕಾ ದಿನಾಚರಣೆ

ಕಲ್ಯಾಣ ಕರ್ನಾಟಕದ ಹಿರಿಯ ಪತ್ರಕರ್ತರಿಗೆ ಗೌರವ; 25 ಮಂದಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ

ಕಲಬುರಗಿ, ಜು. 26: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ವಿ.ಎನ್. ಕಾಗಲಕರ್ ಪ್ರಶಸ್ತಿಗೆ ಐವರು ಹಿರಿಯ ಪತ್ರಕರ್ತರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ 25 ಪತ್ರಕರ್ತರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಜಕುಮಾರ ಉದನೂರ್ ತಿಳಿಸಿದ್ದಾರೆ.

ಪ್ರತಿಷ್ಠಿತ ವಿ.ಎನ್. ಕಾಗಲಕರ್ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಪ್ರಭಾಕರ ಜೋಶಿ, ಚಂದ್ರಕಾಂತ ಹುಣಸಗಿ, ಪ್ರವೀಣರಡ್ಡಿ, ದೇವಿಂದ್ರಪ್ಪ ಆವಂಟಿ ಹಾಗೂ ಚಂದ್ರಶೇಖರ ಕೌಲಗಾ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ವೇಳೆ ವಾರ್ಷಿಕ ಪ್ರಶಸ್ತಿಗೆ ಸಂಗಮನಾಥ ರೇವತಗಾಂವ, ಬ್ರಹ್ಮಾನಂದ ಅರಳಿ, ರಮೇಶ ಮೇಳಕಂದಾ, ಬಾಬುರಾವ ಕೋಬಾಳ, ನಾಗರಾಜ ಗದ್ದಿ, ಸೋಮೇಶಗೌಡ, ಶಿವಕುಮಾರ ಕುಸಾಳೆ, ಭೀಮಣ್ಣ ಬಾಲಯ್ಯ, ದತ್ತಾತ್ರೇಯ ಪಾಟೀಲ್, ಮಲ್ಲಿಕಾರ್ಜುನ ಜೋಗ, ಸಂತೋಷ ನಾಡಗೇರಿ, ಮೋಹಿಜ್ ಪಟೇಲ್, ಶರಣು ಪೂಜಾರಿ, ಸಂಗಮೇಶ ಹಿರೇಮಠ, ಶಿವಕುಮಾರ ಹಳ್ಳಿಖೇಡ, ಭೀಮಪ್ಪ, ಫಿರೋಜ್ ಅಹ್ಮದ್, ದಸ್ತಗೀರ ನದಾಫ್, ಸಾ.ಸಿ. ಬೆನಕನಳ್ಳಿ, ಶರಣು ಮಹಾಗಾಂವ, ವಿಜಯಕುಮಾರ ಜಿಡಗಿ, ಮಂಜುನಾಥ ದೊಡ್ಡಮನಿ, ಮಹ್ಮದ್ ಮಶಾಕ್, ಪ್ರಕಾಶ ಜಂಗಲೆ ಹಾಗೂ ಶರಣಬಸಪ್ಪ ಅನವರ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಗಳನ್ನು ಜುಲೈ 27ರಂದು ಮಧ್ಯಾಹ್ನ 3.30 ಗಂಟೆಗೆ ನಗರದ ಪತ್ರಿಕಾ ಭವನದ ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ.

ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಡೂರು ಶ್ರೀನಿವಾಸಲು ಭಾಗವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ದಲಗೆಟ್ಟಿ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಸದಸ್ಯ ದೇವೇಂದ್ರಪ್ಪ ಕಪನೂರ ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ವಹಿಸಲಿದ್ದಾರೆ.

ಪತ್ರಿಕಾ ದಿನಾಚರಣೆ ಅಂಗವಾಗಿ ಹಿರಿಯ ಹಾಗೂ ಪ್ರತಿಭಾವಂತ ಪತ್ರಕರ್ತರನ್ನು ಸನ್ಮಾನಿಸುವ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಅವರ ಸೇವೆಯನ್ನು ಗೌರವಿಸಲಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button