ಬೀದರ್‌ನಲ್ಲಿ ಜುಲೈ 7ಕ್ಕೆ ಪಿಪಲ್ಸ್ ಹಿಲಿಂಗ್ ಟ್ರೀ ಆಸ್ಪತ್ರೆ ಕಟ್ಟಡ ಉದ್ಘಾಟನೆ

ಬೀದರ್, ಜು.4- ನಗರದ ಗುರು ನಾನಕ ಸ್ಕೂಲ್ ರಸ್ತೆಯ ನೆಹರು ಕ್ರೀಡಾಂಗಣದ ಬಳಿ ಜುಲೈ 7ರಂದು ಪಿಪಲ್ಸ್ ಹಿಲಿಂಗ್ ಟ್ರೀ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಜರುಗಲಿದೆ. ಅಂದು ಮಧ್ಯಾಹ್ನ 12.30 ಗಂಟೆಗೆ ಜರುಗಲಿರುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯದ ಆರೋಗ್ಯ ಸಚಿವಯು ಟಿ ಖಾದರ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಈಶ್ವರ ಖಂಡ್ರೆ, ಮಾಜಿ ಸಚಿವ ಶಾಸಕ ರಹೀಂಖಾನ್, ಸಂಸದ ಸಾಗರ ಖಂಡ್ರೆ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಪ್ರಭು ಚವ್ಹಾಣ, ಮಾಜಿ ಸಂಸದ ಭಗವಂತ ಖೂಬಾ, ಶಾಹೀನ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಬಂಡೆಪ್ಪ ಖಾಶೆಂಪೂರ್, ಮಾಜಿ ಪರಿಷತ್ ಸದಸ್ಯ ವಿಜಯಸಿಂಗ್, ಕನಚೂರ್ ಗ್ರೂಪ್ ಅಧ್ಯಕ್ಷ ಡಾ. ಹಾಜಿ ಯುಕೆ ಮೋನು ಸಾಹಬ್ ಅವರು ಭಾಗವಹಿಸುವರು
ಗೌರವ ಅತಿಥಿಗಳಾಗಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಬುಡಾ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಕಾಂಗ್ರೆಸ್ ಮುಖಂಡ ಅಬ್ದುಲ್ ಮನ್ನಾನ ಸೇಠ್, ಡಿಎಚ್‌ಓ ಡಾ. ಧ್ಯಾನೇಶ್ವರ್ ನಿರಗೂಡೆ, ಗುರುನಾನಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ರೇಷ್ಮಾ ಕೌರ್, ಬ್ರಿಮ್ಸ ನಿರ್ದೇಶಕ ಡಾ. ಶಾಂತಲಾ ಆರ್. ಕೌಜಲಗಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಹ್ಮದ್ ಅಹೆಮದೊದ್ದಿನ್, ಜಿಲ್ಲಾ ಅಗ್ನಿ ಶಾಮಕ ದಳ ಅಧಿಕಾರಿ ಮುಜಮ್ಮಿಲ್ ಪಟೇಲ್ ಅವರು ಪಾಲ್ಗೊಳ್ಳುವರು.
ಐಎಂಎ ಅಧ್ಯಕ್ಷ ಡಾ. ವಿಜಯ ಬಲ್ಲೂರಕರ್, ಡಾ. ದಿಲೀಪ್ ಡೊಂಗರೆ, ಡಾ. ಸೈಯದ್ ಹುಸಾಮೋದ್ದಿನ್ ಉಜೈರ್, ಡಾ. ಚಂದ್ರಕಾಂತ ಗುದಗೆ, ಡಾ. ಮಕ್ಸೂದ ಚಂದಾ, ಡಾ. ರಜನೀಶ ವಾಲಿ, ಅಯಾಜ್ ಉಲ್ ಹಕ್, ಮಾರುತಿ ಬೌದ್ಧೆ, ಮಹ್ಮದ ಜಾವೇದ ಗುತ್ತಿಗೆದಾರ, ವಿಸ್ಡಂನ ಮುಖ್ಯಸ್ಥ ಮಹ್ಮದ ಆಸಿಫೋದ್ದಿನ್, ಡಾ. ಎಂ.ಎ. ಜಬ್ಬಾರ್, ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಆನಂದ ದೇವಪ್ಪ, ವಿಶೇಷ ಅತಿಥಿಗಳಾಗಿ ವಕೀಲ ಸಂಘದ ಅಧ್ಯಕ್ಷ ಸಂಜಯ ಮಠಪತಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸೋಮಶೇಖರ್ ಬಿರಾದಾರ್ ಚಿದ್ರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ, ಮಾಜಿ ಮೇಯರ್ ಮಹ್ಮದ ಗೌಸ್, ಲಿಂಗಾಯತ ಸಮಾಜದ ಮುಖಂಡರಾದ ಶ್ರೀಕಾಂತ ಸ್ವಾಮಿ, ಮಹಾನಗರ ಪಾಲಿಕೆ ಸದಸ್ಯರಾದ ಪ್ರಶಾಂತ ದೊಡ್ಡಿ, ಮಹ್ಮದ ಇರ್ಷಾದ್ ಅಲಿ, ಮಹ್ಮದ ಸಮೀರ್, ಮಹ್ಮದ ಗುಲಾಮ ಅಲಿ, ಮೋಹನ್, ಮಹ್ಮದ ರಿಯಾಜ್, ಅಬ್ದುಲ್ ಅಜೀಜ್ ಮುನ್ನಾ, ಮಹ್ಮದ ನವಾಜ ಖಾನ್, ಶಶಿಧರ ಹೋಸಳ್ಳಿ, ಉಲ್ಲಾಸಿನಿ ಮುದಾಳೆ, ರಾಜು ಚಿಂತಾಮಣಿ, ಸೈಯದ್ ಮುಬಶಿರ್ ಅಲಿ, ಮಹ್ಮದ ಮೌಜಮ ಅಲಿ, ಶೇಖ್ ಸಲೀಮ್, ಮಹ್ಮದ ಅಶ್ಪಾಕ ಅಹ್ಮದ್ ಪಾಲ್ಗೋಳ್ಳುವರು ಎಂದು ಆಸ್ಪತ್ರೆಯ ವೈದ್ಯರಾದ ಡಾ. ಇರ್ಷಾದ ನವೀದ್, ಡಾ. ಸೈಯದ್ ಅಬರಾರ್ ಖಾದ್ರಿ ಹಾಗೂ ಆಸ್ಪತ್ರೆಯ ಸಿಇಓ ಸಿರಾಜುದ್ದಿನ್ ಎಸ್.ಕೆ., ಅವರು ತಿಳಿಸಿದ್ದಾರೆ.



