ಜಿಲ್ಲಾಸುದ್ದಿ

ಜಿಲ್ಲಾಧಿಕಾರಿಗಳಿಂದ ಆರ್‌.ಬಿ.ಐ ಜಾಗೃತಿ ಪೋಸ್ಟರ್‌ಗಳ ಅನಾವರಣ

ಕಲಬುರಗಿ,ಜೂ.27-ಅಂತರರಾಷ್ಟ್ರೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ದಿನಾಚರಣೆ ಅಂಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಎಂಎಸ್‌ಎಂಇ ವಲಯದ ಮಹತ್ವದ ಯೋಜನೆಗಳು ಹಾಗೂ ಬ್ಯಾಂಕಿಂಗ್ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಪೋಸ್ಟರ್‌ಗಳನ್ನು ಶುಕ್ರವಾರ ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್ ತಮ್ಮ‌ ಕಚೇರಿಯಲ್ಲಿ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲೀಡ್ ಬ್ಯಾಂಕ್ ಕಚೇರಿಯ ಮುಖ್ಯ ವ್ಯವಸ್ಥಾಪಕ ಅಂಬ್ರೀಶ್ ಜಿ. ತೆಗನೂರ ಉಪಸ್ಥಿತರಿದ್ದು, ಎಂಎಸ್‌ಎಂಇ ಉದ್ಯಮಿಗಳು ಹಾಗೂ ಸಾರ್ವಜನಿಕರು ವಿವಿಧ ಬ್ಯಾಂಕಿಂಗ್ ಸೌಲಭ್ಯಗಳ ಮಾಹಿತಿವುಳ್ಳ ಪೋಸ್ಟರ್ ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊರತಂದಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಭಾರತೀಯ ರಿಸರ್ವ್ ಬ್ಯಾಂಕ್ ಸಿದ್ಧಪಡಿಸಿರುವ ಈ ಜಾಗೃತಿ ಪೋಸ್ಟರ್‌ಗಳು ಉದ್ಯಮ್ ನೋಂದಣಿಯ ಪ್ರಯೋಜನಗಳು, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಸಾಲ ಅರ್ಜಿಗಳನ್ನು ವಿಲೇವಾರಿ ಮಾಡುವ ಕುರಿತು ಮಾರ್ಗಸೂಚಿಗಳು, ಮೇಲಾಧಾರ ರಹಿತ ಸಾಲಗಳ ಮಿತಿ, ಸಾಲಗಳ ಪೂರ್ವಪಾವತಿ ಮೇಲಿನ ಶುಲ್ಕಗಳಿಗೆ ಸಂಬಂಧಿಸಿದ ನಿಯಮಗಳು, ಎಂಎಸ್‌ಎಂಇಗಳಿಗೆ ಲಭ್ಯವಿರುವ ವಿವಿಧ ಬ್ಯಾಂಕಿಂಗ್ ಸೌಲಭ್ಯಗಳು ಹಾಗೂ ಪ್ರಮುಖ ಮಾರ್ಗಸೂಚಿಗಳ ಬಗ್ಗೆ ಅರಿವು ಮೂಡಿಸಲಿವೆ.

Related Articles

Leave a Reply

Your email address will not be published. Required fields are marked *

Back to top button