ಶಿಕ್ಷಣ

ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಐಟಿಐ ಫಿಟ್ಟರ್ ಟ್ರೈನಿ ಹುದ್ದೆಗೆ ವಾಕ್-ಇನ್ ಪರೀಕ್ಷೆ

2023-25ರ ಐಟಿಐ ಫಿಟ್ಟರ್ ಉತ್ತೀರ್ಣರಿಗೆ ಅವಕಾಶ; ತಿಂಗಳಿಗೆ ₹22 ಸಾವಿರ ಸ್ಟೈಫಂಡ್

ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಟ್ರೈನಿ (ಐಟಿಐ ಫಿಟ್ಟರ್) ಹುದ್ದೆ ಭರ್ತಿಗಾಗಿ 2023, 2024 ಹಾಗೂ 2025ನೇ ಸಾಲಿನಲ್ಲಿ ಫಿಟ್ಟರ್ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ನೀಡಲಾಗುತ್ತಿದ್ದು, ಕಾರ್ಯಕ್ಷಮತೆಯ ಆಧಾರದ ಮೇಲೆ ತರಬೇತಿ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸುವ ಅವಕಾಶವಿದೆ. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ₹22,000 ಸ್ಟೈಫಂಡ್ ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಜುಲೈ 30, 2026ರಂದು (ಗುರುವಾರ) ಬೆಳಿಗ್ಗೆ 9.30ಕ್ಕೆ ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆಯಲಿರುವ ವಾಕ್-ಇನ್ ಆಪ್ಟಿಟ್ಯೂಡ್ ಹಾಗೂ ಟ್ರೇಡ್ ಪರೀಕ್ಷೆಗೆ ಹಾಜರಾಗಬಹುದು.

ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ವೇಳೆ 10ನೇ ತರಗತಿ ಮತ್ತು ಐಟಿಐ ಮೂಲ ಅಂಕಪಟ್ಟಿಗಳು, ಅವುಗಳ ಜೆರಾಕ್ಸ್ ಪ್ರತಿಗಳು, ಆಧಾರ್ ಕಾರ್ಡ್ ಹಾಗೂ ಎರಡು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕು.

ಅರ್ಜಿ ನಮೂನೆಗಳು ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 08472-270608 ಅಥವಾ 9788078048 ಸಂಖ್ಯೆಗೆ ಸಂಪರ್ಕಿಸಬಹುದು.

Related Articles

Leave a Reply

Your email address will not be published. Required fields are marked *

Back to top button