Uncategorized

ಗೌರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಅಗ್ನಿ ಪ್ರದೀಪನ ಪೂಜೆ

ಬೀದರ್, ನ.11: ಭಾಲ್ಕಿ ತಾಲ್ಲೂಕಿನ ಬಾಜೋಳಗಾ ವ್ಯಾಪ್ತಿಯ ಓಂಕಾರ ಗ್ರೂಪ್‌ನ ಗೌರಿ ಶುಗರ್ ಆ್ಯಂಡ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನ ಘಟಕ ಸಂಖ್ಯೆ 13ರಲ್ಲಿ ಬಾಯ್ಲರ್ ಅಗ್ನಿ ಪ್ರದೀಪನ ಪೂಜೆ ಹಾಗೂ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು.

ಓಂಕಾರ ಗ್ರೂಪ್ ಅಧ್ಯಕ್ಷ ಬಾಬುರಾವ್ ಬೋತ್ರೆ ಪಾಟೀಲ್ ಹಾಗೂ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಅವರು ಬಾಯ್ಲರ್ ಪೂಜೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಯಂತ್ರಕ್ಕೆ ಕಬ್ಬು ಹಾಕುವ ಮೂಲಕ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಾಬುರಾವ್ ಬೋತ್ರೆ ಪಾಟೀಲ್ ಅವರು, ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಜಿಲ್ಲೆಯ ಇತರ ಕಾರ್ಖಾನೆಗಳಿಗಿಂತ ಹೆಚ್ಚಿನ ದರ ನೀಡಲಾಗುವುದು ಎಂದು ಭರವಸೆ ನೀಡಿದರು. ಕಬ್ಬು ಪೂರೈಸಿದ ಎಂಟು ದಿನಗಳೊಳಗೆ ರೈತರ ಬಿಲ್ ಪಾವತಿಸಲಾಗುವುದು. 2025-26ನೇ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ₹100 ನೀಡಲಾಗುವುದು. ಈ ಮೊತ್ತವನ್ನು ಎರಡು ದಿನಗಳಲ್ಲಿ ಪಾವತಿಸಲಾಗುವುದು ಎಂದು ತಿಳಿಸಿದರು.

ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಉಚಿತ ಸಕ್ಕರೆ ನೀಡಲಾಗುವುದು. ಅಲ್ಲದೆ, ಕಾರ್ಖಾನೆಯ ಪ್ರತಿಯೊಬ್ಬ ನೌಕರರಿಗೂ ತಲಾ 10 ಕೆ.ಜಿ. ಉಚಿತ ಸಕ್ಕರೆ ವಿತರಿಸಲಾಗುವುದು ಎಂದು ಘೋಷಿಸಿದರು.

ರೈತರು ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹುಲಸೂರಿನ ಶಿವಾನಂದ ಸ್ವಾಮೀಜಿ, ಮಹಾದೇವ ದೇವರು, ಮಾಜಿ ಸಚಿವ ಸಂಭಾಜಿರಾವ್ ಪಾಟೀಲ್, ಓಂಕಾರ ಗ್ರೂಪ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತೇಜಸ್ವಿನಿ ಬರ್ಗೆ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ಆಣದೂರೆ, ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಮಹಾವೀರ ಘೋಡೆಕೆ, ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕ ಕಾಶಿನಾಥ ಕಾಡಾದಿ, ಮುಖ್ಯ ಎಂಜಿನಿಯರ್ ಅವಿನಾಶ್ ಬಿರಾದಾರ, ಪ್ರಕ್ರಿಯೆ ವಿಭಾಗದ ಮುಖ್ಯಸ್ಥ ಸುಭಾಷ್ ಬಿರಾದಾರ, ವಿದ್ಯುತ್ ವಿಭಾಗದ ಪ್ರಧಾನ ವ್ಯವಸ್ಥಾಪಕ ರವಿಶಂಕರ್, ಬಾಯ್ಲರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಉಲ್ಲಾಸ್ ಭೋಸ್ಲೆ, ಡಿಸ್ಟಿಲರಿ ವ್ಯವಸ್ಥಾಪಕರಾದ ಕೃಷ್ಣ ಶೇಳಕೆ ಹಾಗೂ ನವನಾಥ ಪವಾರ್, ಮಾನವ ಸಂಪನ್ಮೂಲ ವ್ಯವಸ್ಥಾಪಕ ವೀರೇಶ್ ಎಸ್. ಹಳಿಂಗೆ, ಮುಖ್ಯ ಲೆಕ್ಕಾಧಿಕಾರಿ ಸಚಿನ್ ಕಾಸೇಕರ್, ರೈತ ಸಂಘದ ಪ್ರತಿನಿಧಿಗಳು, ಕಾರ್ಖಾನೆಯ ಅಧಿಕಾರಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button