ಜಿಲ್ಲಾಸುದ್ದಿ

ಇಬ್ಬರು ಪುತ್ರಿಯರೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಕಲಬುರಗಿ, ಅ.1– ಇಬ್ಬರು ಪುತ್ರಿಯರೊಂದಿಗೆ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಿಲ್ಲೆಯ ಆಳಂದ ತಾಲ್ಲೂಕಿನ ಇಕ್ಕಳಕಿ ಗ್ರಾಮದಲ್ಲಿ ವರದಿಯಾಗಿದೆ.

ಮೃತರನ್ನು ಶ್ರೀಮತಿ ಗೌರಮ್ಮ (52) ಹಾಗೂ ಅವರ ಪುತ್ರಿಯರಾದ ಭಾಗ್ಯಶ್ರೀ (25) ಮತ್ತು ಅಂಬಿಕಾ (21) ಎಂದು ಗುರುತಿಸಲಾಗಿದೆ.

ತಾಯಿ ಗೌರಮ್ಮ ಹಾಗೂ ಪುತ್ರಿ ಭಾಗ್ಯಶ್ರೀ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಪುತ್ರಿ ಅಂಬಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅಂಬಿಕಾ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಾದನಹಿಪ್ಪರಗಾ ಎಸ್‌ಬಿಐ ಬ್ಯಾಂಕ್‌ನಲ್ಲಿ ಗೌರಮ್ಮ ಅವರು ₹2.13 ಲಕ್ಷ ಸಾಲ ಹೊಂದಿದ್ದರು. ಅಲ್ಲದೆ, ಖಾಸಗಿಯಾಗಿಯೂ ಸುಮಾರು ₹4 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಕೆಲಕಾಲದಿಂದ ಮನಸ್ತಾಪ ಹಾಗೂ ಮಾನಸಿಕ ಒತ್ತಡ ಉಂಟಾಗಿತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ಕುರಿತು ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button