ಜಿಲ್ಲಾಸುದ್ದಿ

ವಿಪತ್ತು ನಿರ್ವಹಣೆಗೆ ಆಪದ್ ಮಿತ್ರರ ಸನ್ನದ್ಧತೆ 300 ಸ್ವಯಂಸೇವಕರಿಗೆ ರಕ್ಷಣಾ ಕಿಟ್ ವಿತರಣೆ

ಕಲಬುರಗಿ, ಸೆ. 30: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕೇಂದ್ರ ಪುರಸ್ಕೃತ ‘ಆಪದ್ ಮಿತ್ರ’ ಯೋಜನೆಯಡಿ ಜಿಲ್ಲೆಯ 300 ಸ್ವಯಂಸೇವಕರಿಗೆ ರಕ್ಷಣಾ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ಗಳನ್ನು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಬುಧವಾರ ತಮ್ಮ ಕಚೇರಿಯಲ್ಲಿ ವಿತರಿಸಿದರು.

ಪ್ರವಾಹ, ಚಂಡಮಾರುತ, ಭೂಕುಸಿತ, ಭೂಕಂಪ ಸೇರಿದಂತೆ ವಿವಿಧ ರೀತಿಯ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ಜನರ ರಕ್ಷಣೆಗೆ ತುರ್ತಾಗಿ ಧಾವಿಸಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ಜಿಲ್ಲೆಯ 300 ಸ್ವಯಂಸೇವಕರನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಆಯ್ಕೆ ಮಾಡಲಾಗಿದೆ.

ಸ್ವಯಂಸೇವಕರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗಿದೆ.ವಿಪತ್ತು ಪರಿಸ್ಥಿತಿಯಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ನೆರವಾಗುವ ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ‘ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್‌’ಗಳನ್ನು ಆಯ್ದ ಸ್ವಯಂಸೇವಕರಿಗೆ ಜಿಲ್ಲಾಧಿಕಾರಿ ಸಾಂಕೇತಿಕವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿಶ್ವನಾಥ, ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿ ಮಲ್ಲಿಕಾರ್ಜುನ ಉದನೂರ, ಆನಂದ ಸಿರಗಾಪೂರ, ಯುಸುಫ್ ರಾಜಾಪುರ ಮತ್ತು ಮಹಿಮೂದ್ದಿನ್ ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button