ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಪ್ರಥಮ: ವಿಭಾಗ ಮಟ್ಟಕ್ಕೆ ಮಹಾಂತೇಶ್ವರ ಶಾಲಾ ವಿದ್ಯಾರ್ಥಿನಿಯರು

ಅಫಜಲಪುರ: ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೆ.21ರಂದು ನಡೆದ 2026–27ನೇ ಸಾಲಿನ ಪ್ರೌಢಶಾಲಾ ಕ್ರೀಡಾಕೂಟದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯದಲ್ಲಿ ಅಫಜಲಪುರದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಶಾಲೆಯ ಕ್ರೀಡಾ ಶಿಕ್ಷಕ ಅನಿಲ್ ಹೊನಳ್ಳಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ಉತ್ತಮ ಪ್ರದರ್ಶನ ನೀಡಿ ಈ ಸಾಧನೆ ಮಾಡಿದ್ದಾರೆ.
ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಲ್ಲಿ ಈಶ್ವರಿ ಬಗಲಿ, ಕಾವೇರಿ ಚವಾಣ್, ಶಿವಲೀಲಾ ಬಗಲಿ, ಪಲ್ಲವಿ ಬಳೂರಗಿ, ಖುಷಿ ಜಮಾದಾರ್, ಕಾಂಚನ ಪಾಣೆಗಾರ, ಲಕ್ಷ್ಮೀ ಪೂಜಾರಿ, ಮಾನವಿ ಜಮಾದಾರ್ ಹಾಗೂ ವಿಜಯಲಕ್ಷ್ಮೀ ಕ್ಷೇತ್ರಿ ಇದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಶಾಲೆಯ ಮುಖ್ಯಶಿಕ್ಷಕ ಚಂದ್ರಕಾಂತ ಗುಂಡದ ಹಾಗೂ ಶಿಕ್ಷಕರಾದ ಶ್ರೀಕಾಂತ ಪಾಟೀಲ, ಶ್ರೀಕಾಂತ ಧೂಳೆ, ಮಲ್ಲಮ್ಮ ಚಿಂಚೋಳಿ, ಸತೀಶ ವಾಲಿ, ಸಿದ್ದರಾಮ ಜಮಾದಾರ, ಪ್ರಶಾಂತ ಪಾಟೀಲ, ಮಹೇಶ ನಾಗಶೆಟ್ಟಿ, ಅರ್ಚನಾ ದೇವಿ ಕಟ್ಟಿ, ಶೈಲಾಶ್ರೀ ಬಿರಾದಾರ, ರೂಪ ರೂಗಿ ಹಾಗೂ ಕ್ರೀಡಾ ಶಿಕ್ಷಕ ಅನಿಲ್ ಹೊನಳ್ಳಿ ಅವರು ವಿಭಾಗ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದ್ದಾರೆ.



