ಜಿಲ್ಲಾಸುದ್ದಿ

ಹಣ, ಮೊಬೈಲ್ ಇದ್ದ ವ್ಯಾನಿಟಿ ಬ್ಯಾಗ್‌ ವಾರಸುದಾರರಿಗೆ ಮರಳಿಸಿದ ಆಟೋ ಚಾಲಕ

ಕಲಬುರಗಿ, ಸೆ.21: ಮಹಿಳೆಯೊಬ್ಬರು ಕಳೆದುಕೊಂಡಿದ್ದ ಮೊಬೈಲ್‌ ಫೋನ್ ಹಾಗೂ ₹22 ಸಾವಿರ ನಗದು ಇದ್ದ ವ್ಯಾನಿಟಿ ಬ್ಯಾಗ್‌ ಪತ್ತೆಹಚ್ಚಿದ ಆಟೋ ಚಾಲಕನೊಬ್ಬರು ಯಾವುದೇ ಸ್ವಾರ್ಥವಿಲ್ಲದೆ ಬ್ರಹ್ಮಪುರ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ನಗರದ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೂಪರ್ ಮಾರ್ಕೆಟ್ ರಸ್ತೆಯಲ್ಲಿ ಮಹಿಳೆಯೊಬ್ಬರು ಮೊಬೈಲ್‌ ಫೋನ್ ಹಾಗೂ ₹22 ಸಾವಿರ ನಗದು ಇದ್ದ ವ್ಯಾನಿಟಿ ಬ್ಯಾಗ್‌ ಕಳೆದುಕೊಂಡಿದ್ದರು.

ಇದನ್ನು ಗಮನಿಸಿದ ಆಟೋ ಚಾಲಕ ಬ್ಯಾಗ್‌ ಪತ್ತೆಹಚ್ಚಿ, ಅದರಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದ ಬಳಿಕ ಬ್ರಹ್ಮಪುರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಬ್ಯಾಗ್‌ನಲ್ಲಿ ಮೊಬೈಲ್‌ ಫೋನ್, ₹22 ಸಾವಿರ ನಗದು ಸೇರಿದಂತೆ ಮಹಿಳೆಗೆ ಸೇರಿದ ಇತರೆ ವಸ್ತುಗಳಿದ್ದವು.

ಪೊಲೀಸರು ಪರಿಶೀಲನೆ ನಡೆಸಿ, ಬ್ಯಾಗ್‌ ಅನ್ನು ಅದರ ವಾರಸುದಾರ ಮಹಿಳೆಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು. ಕಳೆದುಕೊಂಡಿದ್ದ ವಸ್ತುಗಳು ಮರಳಿ ದೊರೆತ ಹಿನ್ನೆಲೆಯಲ್ಲಿ ಮಹಿಳೆ ಸಂತಸ ವ್ಯಕ್ತಪಡಿಸಿದರು.

ಆಟೋ ಚಾಲಕನ ಪ್ರಾಮಾಣಿಕತೆ ಹಾಗೂ ಮಾನವೀಯ ಕಾರ್ಯವನ್ನು ಬ್ರಹ್ಮಪುರ ಠಾಣೆಯ ಪೊಲೀಸರು ಶ್ಲಾಘಿಸಿ, ಠಾಣೆಯಲ್ಲಿ ಸನ್ಮಾನಿಸಿದರು. ಕಳೆದುಕೊಂಡ ವಸ್ತುಗಳನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ವಾರಸುದಾರರಿಗೆ ತಲುಪಿಸುವ ಉದ್ದೇಶದಿಂದ ಪೊಲೀಸರಿಗೆ ಒಪ್ಪಿಸಿದ ಆಟೋ ಚಾಲಕನ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

Leave a Reply

Your email address will not be published. Required fields are marked *

Back to top button