ಕಲ್ಯಾಣ ಕರ್ನಾಟಕ

ಕಲಬುರ್ಗಿಯಲ್ಲಿಂದು ೩೭೧ನೇ(ಜೆ) ಕಲಂ ಸಾಧನೆಯ ಆಶಯ ಅಭಿಯಾನ ಆರಂಭ

ಕಲಬುರ್ಗಿ, ಸೆ.೧೫- ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ನಾಳೆಯಿಂದ ೩೭೧ನೇ (ಜೆ) ಕಲಂ ಸಾಧನೆ ಆಶಯದ ಅಭಿಯಾನ ಶರಣಬಸವೇಶ್ವರ ವಿಶ್ವವಿದ್ಯಾಲಯದಿಂದ ಆರಂಭಗೊಳ್ಳಲಿದ್ದು ಈ ಅಭಿಯಾನವನ್ನು  ಗೃಹ ಮತ್ತು ೩೭೧ನೇ(ಜೆ) ಕಲಂ ಸಂಪುಟ ಉಪ ಸಮಿತಿಯ ಅಧ್ಯಕ್ಷ ಪ್ರಿಯಾಂಕ್ ಖರ್ಗೆಯವರು ಸೆಪ್ಟೆಂಬರ್ ೧೬ರಂದು ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಎಸ್.ಬಿ. ಕಾಲೇಜ್ ಕ್ಯಾಂಪಸ್ ಶರಣಬಸವೇಶ್ವರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ್ ದೇಸಮುಖ, ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ÷್ಮಣ ದಸ್ತಿಯವರು ತಿಳಿಸಿದ್ದಾರೆ. 

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ೩೭೧ನೇ(ಜೆ) ಕಲಂ ಜಾರಿಯಾಗಿ ೧೩ ವರ್ಷಗಳು ಗತಿಸಿರುವ ಹಿನ್ನಲೆಯಲ್ಲಿ ಇದರಿಂದಾಗಿರುವ ಸಾಧನೆ ಮತ್ತು ಆಶಯಗಳು ವಿಶೇಷವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ವಿಶೇಷ ಸ್ಥಾನಮಾನದಿಂದ ಸಿಗುವ ಲಾಭಗಳ ಕುರಿತು ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಭಿಯಾನ ಹೋರಾಟ ಸಮಿತಿ ಹಮ್ಮಿಕೊಂಡಿದೆ. ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಡಾ. ಅಜಯಸಿಂಗ, ಸಂಸದ ರಾಧಾಕೃಷ್ಣ ದೊಡ್ಡಮನಿ, ಖ್ವಾಜಾ ಬಂದೇನವಾಜ್ ದರ್ಗಾದ ಹಜರತ್ ಹಾಫೀಜ್ ಡಾ. ಸೈಯದ್ ಮಹಮ್ಮದ್ ಅಲಿ ಅಲ್-ಹುಸೇನಿ-ಸಾಹೆಬ್, ಮಹಾಪೌರ ಶೇಖ್ ಅಜಮಲ್ ಗೋಲಾ, ಶಾಸಕರಾದ ಬಿ.ಆರ್. ಪಾಟೀಲ್, ಎಂ.ವೈ. ಪಾಟೀಲ್, ಖನೀಜ್ ಫಾತಿಮಾ, ಅಲ್ಲಂಪ್ರಭು ಪಾಟೀಲ್, ಬಸವರಾಜ್ ಮತ್ತಿಮೂಡ, ಡಾ. ಅವಿನಾಶ್ ಜಾಧವ್, ಡಾ. ಶಶಿಲ ನಮೋಶಿ, ಡಾ. ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಜಗದೇವ್ ಗುತ್ತೇದಾರ್ ಸೇರಿದಂತೆ ಆಯಾ ಕ್ಷೇತ್ರದ ಗಣ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಆಗಮಿಸಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಈ ಮಹತ್ವದ ಅಭಿಯಾನ ಕಾರ್ಯಕ್ರಮಕ್ಕೆ ನಗರದ ಆಯಾ ಕಾಲೇಜುಗಳ, ಪ್ರಾಚಾರ್ಯರು, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಸಮಿತಿ ಈಗಾಗಲೆ ಮನವರಿಕೆ ಮಾಡಿದೆ. ಅದರಂತೆ, ಬರುವ ದಿನಗಳಲ್ಲಿ  ಆಯಾ ಕಾಲೇಜುಗಳಲ್ಲಿ ೩೭೧ನೇ(ಜೆ) ಕಲಂ ಜಾಗೃತಿ ಅಭಿಯಾನ ನಡೆಸಿ, ಬರುವ ೨೦೨೭ನೇ ಜನೆವರಿ ೧ರಂದು ೩೭೧ನೇ(ಜೆ) ಕಲಂ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ೩೭೧ನೇ(ಜೆ) ಕಲಂ ಉತ್ಸವ ಸರ್ಕಾರದಿಂದಲೇ ಆಚರಿಸಬೇಕೆಂದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಳ್ಳಲಾಗಿದೆ. ಈ ಮಹತ್ತರ  ಇತಿಹಾಸಿಕ ದಿನಾಚರಣೆಯು ಸರ್ಕಾರ ಆಚರಣೆಗೆ ಮುಂದಾಗಬೇಕೆAದು ಅವರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button