ಜಿಲ್ಲಾಸುದ್ದಿ

ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ನಾಯಕತ್ವದ ಗುಣ: ಹೊಗೊಂಡ

ಅಫಜಲಪುರ, ಸೆ.೧೫- ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಹಾಗೂ ನಾಯಕತ್ವದ ಗುಣ ಬೆಳೆಯಬೇಕಾದರೆ ಸ್ಕೌಟ್ಟ್ಸ ಗೈಡ್ಸ ಹಾಗೂ ರೋವರ್ ರೇಂಜರ್ ತರಬೇತಿ ಮುಖ್ಯ ಎಂದು ಕಲಬುರಗಿ ಜಿಲ್ಲೆಯ ಸ್ಕೌಟ್ಸ ಗೈಡ್ಸ ಮತ್ತು ರೋವರ್ ರೇಂಜರನ ಕಾರ್ಯದರ್ಶಿ ಪೀರಪ್ಪ ಹೂಗೊಂಡ ಅವರು ಹೇಳಿದರು.

ತಾಲ್ಲೂಕಿನ ಮಹಾಂತಪೂರದ ಶ್ರೀ ಮಹಾಂತ ಜ್ಯೋತಿ ವಿದ್ಯಾ ಪೀಠದ ಅಡಿಯಲ್ಲಿ  ನಡೆಯುತ್ತಿರುವ  ಶ್ರೀ ಮಹಾಂತೇಶ್ವರ ಪ್ರೌಢಶಾಲೆ  ಮತ್ತು ಪದವಿ  ಪೂರ್ವ ಕಾಲೇಜಿನಲ್ಲಿ ರವಿವಾರ ಹಮ್ಮಿಕೊಂಡಿದ್ದ  ಭಾರತೀಯ ಸ್ಕೌಟ್ದ ಗೈಡ್ಸ ಹಾಗೂ ರೋವರ ರೆಂಜರ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಕೌಟ್ಸ್ ಗೈಡ್ಸನ ಮುಖ್ಯ ಸಂದೇಶವೇ “ಸೇವೆಗೆ ಸದಾ ಸಿದ್ಧ ಎಂಬ ಮನೋಭಾವವಾಗಿದೆ.  ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿದ್ದ ವೀರಮಹಾಂತ ಶಿವಾಚಾರ್ಯರರು ಮಾತನಾಡಿ, ಈ ಏರಡು ಘಟಕಗಳು ಉತ್ತಮ ಕಾರ್ಯನಿರ್ವಹಣೆ ಮಾಡಿ ಸಮಾಜಕ್ಕೆ ಮತ್ತು ನಾಡಿಗೆ ಉತ್ತಮ ನಾಯಕರನ್ನು ಕೊಡುಗೆಯಾಗಿ ನೀಡಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚನಬಸಯ್ಯ ಹಿರೇಮಠ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದಯಾನಂದ ಬಂದರವಾಡ ಕಮಲ ಪ್ರೌಢಶಾಲೆಯ ಮುಖ್ಯಗುರುಗಳಾದ ಬಾಳಪ್ಪ ಜರಕುಂಟೆ ಅತಿಥಿಗಳಾಗಿದ್ದರು.

ಸಿದ್ಧರಾಮ ರಾಜಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಉಪನ್ಯಾಸಕ ಅಜಿತಕುಮಾರ ಭಕರೆ ಅತಿಥಿಗಳಿಗೆ ಸ್ಕೌಟ್ಸ ಗೈಡ್ಸ ಸ್ಕ್ರಾಪ ನೀಡುವುದರ ಮೂಲಕ ಸ್ವಾಗತಿಸಿದರು. ಕುಮಾರಿ ಧಾನಮ್ಮ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು ಹಾಗೂ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ವೀರಣ್ಣ ಡಿ. ಪಟ್ಟಣ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಕಲ ಬೋಧಕ ಮತ್ತು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button