ಜಿಲ್ಲಾಸುದ್ದಿ

ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ: 35 ಕ್ವಿಂಟಾಲ್‌ಗೂ ಅಧಿಕ ಅಕ್ಕಿ ಜಪ್ತಿ, ಪ್ರಕರಣ ದಾಖಲು

ಜೇವರ್ಗಿ ಪಟ್ಟಣದ ಹೊರವಲಯದ ಗೋದಾಮಿನ ಮೇಲೆ ದಾಳಿ; ₹1.21 ಲಕ್ಷ ಮೌಲ್ಯದ 71 ಚೀಲ ಅಕ್ಕಿ ವಶಕ್ಕೆ

ಕಲಬುರಗಿ, ಸೆ.1: ಜೇವರ್ಗಿ ಪಟ್ಟಣದ ಹೊರವಲಯದಲ್ಲಿರುವ ಸಿದ್ದಶ್ರೀ ಪೆಟ್ರೋಲ್ ಪಂಪ್ ಹಿಂಭಾಗದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 35 ಕ್ವಿಂಟಾಲ್ 70 ಕೆ.ಜಿ. ಪಡಿತರ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಲಾದ ಅಕ್ಕಿಯ ಒಟ್ಟು ಮೌಲ್ಯ ₹1,21,380 ಎಂದು ತಿಳಿಸಲಾಗಿದೆ.

ಆಗಸ್ಟ್ 29ರಂದು ಖಚಿತ ಮಾಹಿತಿ ಮೇರೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಮಾರುತಿ ಬ್ಯಾಕೋಡ್, ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್‌ಐ ಗಜಾನಂದ ಬಿರಾದಾರ ಹಾಗೂ ಆಹಾರ ನಿರೀಕ್ಷಕ ಪ್ರಶಾಂತ ಪೂಜಾರಿ ಅವರ ನೇತೃತ್ವದ ತಂಡ ಗೋದಾಮಿನ ಮೇಲೆ ದಾಳಿ ನಡೆಸಿತು.

ದಾಳಿ ವೇಳೆ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 71 ಚೀಲಗಳಲ್ಲಿದ್ದ ಒಟ್ಟು 35 ಕ್ವಿಂಟಾಲ್ 70 ಕೆ.ಜಿ. ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾರ್ವಜನಿಕರಿಗೆ ವಿತರಣೆ ಮಾಡಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಲೋಹಿತ್ ಎಂಬ ವ್ಯಕ್ತಿಯ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿತನ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1977ರ ಕಲಂ 3 ಮತ್ತು 7ರ ಅಡಿಯಲ್ಲಿ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 240/2026 ದಾಖಲಿಸಲಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

Related Articles

Leave a Reply

Your email address will not be published. Required fields are marked *

Back to top button