ಸಾಂಸ್ಕೃತಿಕ

ಕಿಶೋರ್ ಕುಮಾರ್ ಜನ್ಮದಿನ ನಿಮಿತ್ತ ಆಗಸ್ಟ್‌ 2ರಂದು ಸಂಗೀತ ಸಂಜೆ

ನಾಡಪ್ರಿಯ ಸಾಂಸ್ಕೃತಿಕ ಬಳಗದಿಂದ ವಿಶೇಷ ಕಾರ್ಯಕ್ರಮ; ಖ್ಯಾತ ಗಾಯಕರಿಂದ ಕಿಶೋರ್ ಕುಮಾರ್ ಅವರ ಅಮರ ಗೀತೆಗಳ ಗಾಯನ

ಕಲಬುರಗಿ, ಜು.29: ನಾಡಪ್ರಿಯ ಸಾಂಸ್ಕೃತಿಕ ಬಳಗದ ವತಿಯಿಂದ ಹಿಂದಿ ಚಿತ್ರರಂಗದ ದಿಗ್ಗಜ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ಅವರ 97ನೇ ಜನ್ಮದಿನದ ಅಂಗವಾಗಿ ಆಗಸ್ಟ್‌ 2ರಂದು ಸಂಜೆ 6.30ಕ್ಕೆ ನಗರದ ಕನ್ನಡ ಭವನದಲ್ಲಿ ವಿಶೇಷ ‘ಏಕ್ ಶಾಮ್ ಕಿಶೋರ್ ಕೆ ನಾಮ್’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬಳಗದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಪಾಟೀಲ್ ಹಾಗೂ ಸಹ ಕಾರ್ಯದರ್ಶಿ ನಾರಾಯಣ ಎಂ. ಜೋಶಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಮೇಶ್ ಜೋಶಿ (ವಾಯ್ಸ್ ಆಫ್ ಕಿಶೋರ್ ಕುಮಾರ್) ಹಾಗೂ ಬಹುಮುಖ ಗಾಯಕಿ ಉಷಾ ಡಿಸೋಜಾ ಅವರು ಕಿಶೋರ್ ಕುಮಾರ್ ಅವರ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಕಾರ್ಯಕ್ರಮವನ್ನು ನಟ-ನಿರ್ದೇಶಕ ನಾಗರಾಜ್ ಕುಂಬಾರ್ ಉದ್ಘಾಟಿಸಲಿದ್ದು, ಖ್ಯಾತ ವೈದ್ಯ ಡಾ. ಗಂಗಾಧರ ರುದ್ರವಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನೂತನ ವಿದ್ಯಾಲಯ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಸದಾಶಿವ ಜಿಡ್ಡಿಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ನಾಡಪ್ರಿಯ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಕೆ.ಪಿ. ಗಿರಿಧರ ಅತಿಥಿಯಾಗಿ ಉಪಸ್ಥಿತರಿರುವರು. ಉಪಾಧ್ಯಕ್ಷೆ ಡಾ. ಅಂಬುಜಾ ಮುಳಖೇಡ್ಕರ್ ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ಕಿಶೋರ್ ಕುಮಾರ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಗೀತ ಸಂಜೆಯ ಸವಿಯನ್ನು ಅನುಭವಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button