ಜಿಲ್ಲಾಸುದ್ದಿ

ಕಲಬುರ್ಗಿಯಲ್ಲಿ ನಾಳೆ ರೋಟರಿ ಕ್ಲಬ್ ಭವ್ಯ ಪದಗ್ರಹಣ ಸಮಾರಂಭ:ಜಲ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ

ಕಲಬುರ್ಗಿ, ಜು.೩- ನಗರದ ಅಪ್ಪಾ ಪಬ್ಲಿಕ್ ಸ್ಕೂಲ್‌ನ ಪೂಜ್ಯ ಬಸವರಾಜ್ ಅಪ್ಪಾ ಮೆಮೋರಿಯಲ್ ಹಾಲ್‌ನಲ್ಲಿ ಇದೇ ಜುಲೈ ೫ರಂದು ಭಾನುವಾರ ಸಂಜೆ ೫-೩೦ಕ್ಕೆ ರೋಟರಿ ಕ್ಲಬ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಭವ್ಯ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಹತ್ತು ಹಲವು ವಿಧಾಯಕ ಕಾರ್ಯಕ್ರಮಗಳಲ್ಲಿ ಜಲ ಸಂರಕ್ಷಣಾ ಅಭಿಯಾನದ ಪ್ರಮುಖ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಚುನಾಯಿತ ಅಧ್ಯಕ್ಷ ರೋಟರಿಯನ್ ರಮೇಶ್ ಜಿ. ತಿಪ್ಪನೂರ್ (ಬಂಧು) ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾನಿಧ್ಯವನ್ನು ಮುಗುಳನಾಗಾವಿಯ ಸಂಸ್ಥಾನ ಕಟ್ಟಿಮನಿ ಹಿರೇಮಠದ ಅಭಿನವ ಸಿದಲಿಂಗ ಶಿವಾಚಾರ್ಯರು ವಹಿಸುವರು. ಮುಖ್ಯ ಅತಿಥಿಗಳಾಗಿ ಸೇವಾ ಭಾರತಿ ಉತ್ತರ ಪ್ರಾಂತ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ರಘು ಅಕಮಂಚಿ ಅವರು ಆಗಮಿಸುವರು ಎಂದರು.

ಸನ್ಮಾನಿತರಾಗಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯರ್ಶಿ ಬಸವರಾಜ್ ದೇಶಮುಖ್ ಅವರು ಆಗಮಿಸುವರು. ರೋಟರಿ ಕ್ಲಬ್ ಪದಗ್ರಹಣದ ಕಾರ್ಯಕ್ರಮಕ್ಕಾಗಿ ರೋಟರಿ ಜಿಲ್ಲಾ ಗವರ್ನರ್ ಪಿ. ಕೇಶವರೆಡ್ಡಿ ಅವರು ೩೧೬೦-೨೦೨೬-೨೭ನೇ ಸಾಲಿನ ರವರು ಚುನಾಯಿತ ಅಧ್ಯಕ್ಷರಾದ ರೋಟರಿಯನ್ ರಮೇಶ ಜಿ. ತಿಪ್ಪನೂರ್(ಬಂಧು) ಹಾಗೂ ಚುನಾಯಿತ ಕಾರ್ಯದರ್ಶಿ ರೋಟರಿಯನ್ ಡಾ. ಬಿ.ಎಸ್. ದೇಸಾಯಿ ಹಾಗೂ ಆಡಳಿತ ಪದಾಧಿಕಾರಿಗಳಿಗೆ ಪದಗ್ರಹಣ ಮಾಡುವರು. ಇನ್ನರ್ ವೀಲ್ ಪದಗ್ರಹಣ ಕಾರ್ಯಕ್ರಮಕ್ಕೆ ರೋಟರಿ ಫಸ್ಟ್ ಲೇಡಿ ಶ್ರೀಮತಿ ಪಿ. ಶ್ವೇತಾ ಕೇಶವರೆಡ್ಡಿ ಅವರು ಚುನಾಯಿತ ಅಧ್ಯಕ್ಷೆ ಶ್ರೀಮತಿ ಜ್ಯೋತಿ ರಾಠೋಡ ಹಾಗೂ ಚುನಾಯಿತ ಕಾರ್ಯದಶಿ ಶ್ರೀಮತಿ ಓ.ಎ ಚನ್ನಮ್ಮ ಹಾಗೂ ಆಡಳಿತ ಪದಾಧಿಕಾರಿಗಳಿಗೆ ಪದಗ್ರಹಣ ಮಾಡುವರು ಎಂದು ಅವರು ಹೇಳಿದರು.

ಇಂಡಕ್ಷನ್ ಅಧಿಕಾರಿ ರೋಟರಿಯನ್ ಮಣಿಲಾಲ್ ಪಿ. ಶಹಾ ಪಿ.ಡಿ.ಜಿ. ಅವರು ನೂತನ ಸದಸ್ಯರುಗಳಿಗೆ ನೇಮಕ ಮಾಡುವರು. ಡಾ. ಜ್ಯೋತಿ ಆರ್. ತೆಗನೂರ್ ಅವರು ಇಂಡಕ್ಷನ್ ಇನ್ನರ್ ವೀಲ್ ಸದಸ್ಯರುಗಳನ್ನು ನೇಮಕ ಮಾಡುವರು. ಗೌರವಾನ್ವಿತ ಅತಿಥಿಗಳಾಗಿ ರೋಟರಿಯನ್ ಡಾ. ಗೌತಮ್ ಜಾಹಗೀರದಾರ್, ಮಾಣಿಕ ಪವಾರ್, ಡಾ. ಸುಧಾ ಹಾಲಕಾಯಿ ಮತ್ತು ಮತ್ತು ಹಿಂದಿನ ಅಧ್ಯಕ್ಷ ಉದಯ ಪಿ. ಹೊನಗುಂಟಿಕರ್ (೨೦೨೫-೨೬ನೇ ಸಾಲಿನ), ಹಿಂದಿನ ಕಾರ್ಯದರ್ಶಿ ಮಲ್ಕಣ್ಣ ಕಣ್ಣಿ (೨೦೨೫-೨೬ನೇ ಸಾಲಿನ) ಮತ್ತು ಇನ್ನರ್ ವೀಲ್ ಹಿಂದಿನ ಅಧ್ಯಕ್ಷೆ ಕಲ್ಯಾಣೇಶ್ವರಿ ಚಕ್ಕಿ (೨೦೨೫-೨೬ನೇ ಸಾಲಿನ) ಹಿಂದಿನ ಕಾರ್ಯದರ್ಶಿ ಶ್ರೀಮತಿ ಶಿವಲೀಲಾ ಮಾಮಣಿ ಅವರು ಭಾಗವಹಿಸುವರು ಎಂದು ಅವರು ತಿಳಿಸಿದರು.

ಪದಾಧಿಕಾರಿಗಳು ಶಾಶ್ವತವಾದ ಪ್ರಭಾವವನ್ನು ಸೃಷ್ಟಿಸುವುದು ಎಂಬ ಘೋಷವಾಕ್ಯದೊಂದಿಗೆ ಕ್ಲಬ್ ನೇತೃತ್ವ ವಹಿಸಲಿದ್ದಾರೆ. ಪದಗ್ರಹಣದ ಸಂದರ್ಭದಲ್ಲಿ ನಗರದ ಕೆಲವು ಬಡ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ನೋಟಬುಕ್ ಹಾಗೂ ಶಿಕ್ಷಣ ಸಲಕರಣೆಗಳನ್ನು ಉಚಿತವಾಗಿ ರೋಟರಿ ಕ್ಲಬ್ ವತಿಯಿಂದ ವಿತರಿಸಲಾಗುವುದು ಎದ ಅವರು ತಿಳಿಸಿದರು.

ಅದೇ ರೀತಿ ಈ ವರ್ಷದ ಯೋಜನೆಗಳಂತೆ ಕಿವುಡ ಮತ್ತು ಮೂಕ, ಅಂಧ ಮಕ್ಕಳಿಗೆ ಸಹಾಯ ಮಾಡುವುದು. ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸುವುದು. ನಿರ್ಗತಿಕರ ತಂಗುದಾಣ, ವೃದ್ಧಾಶ್ರಮ, ಅಬಲಾಶ್ರಮ, ನಂದಗೋಕುಲಗಳಿಗೆ ಸಹಾಯ ಮಾಡುವುದು. ಬೇಸಿಗೆ ಮತ್ತು ತುರ್ತು ಸಂದರ್ಭಗಳಲ್ಲಿ ನಗರದ ವಿವಿಧ ಜನ ನಿಬಿಡ ವೃತ್ತಗಳಲ್ಲಿ ರೋಟರಿ ಕ್ಲಬ್ ವತಿಯಿಂದ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವುದು. ನಮ್ಮ ಅವಧಿಯಲ್ಲಿ ಆರೋಗ್ಯ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ವಿವರಿಸಿದರು.

ಚುನಾಯಿತ ಕಾರ್ಯದರ್ಶಿ ಡಾ. ಬಿ.ಎಸ್. ದೇಸಾಯಿ ಅವರು ಮಾತನಾಡಿ, ಈ ವರ್ಷ ೫೨ ಸಾಪ್ತಾಯಿಕ ಸಭೆಗಳನ್ನು ಶೇಕಡಾ ೯೦ಕ್ಕಿಂತ ಹೆಚ್ಚು ಹಾಜರಾತಿಯೊಂದಿಗೆ ನಡೆಸಲಾಗುವುದು. ಕನಿಷ್ಠ ೩೦ ಸೇವಾ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಪಾರದರ್ಶಕತೆಗಾಗಿ ಎಲ್ಲ ಯೋಜನೆ ಮತ್ತು ದಾಖಲೆಗಳನ್ನು ಮಾಡಲಾಗುವುದೆಂದು. ಪ್ರಮುಖವಾಗಿ ಆರೋಗ್ಯವಂತ ಕಲಬುರ್ಗಿಯನ್ನು ಮಾಡಲು ಕೊಳಗೇರಿ ಪದೇಶಗಳಲ್ಲಿ ಪ್ರತಿ ತಿಂಗಳು ಉಚಿತ ವೈದಕೀಯ ಮತ್ತು ತಪಾಸಣಾ ಶಿಬಿರಗಳನ್ನು ನಡೆಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ತರಗತಿಗಳು ಮಾಡಲಾಗುವುದು. ಗಿಡಗಳ ನೆಡುವಿಕೆ ಮತ್ತು ಜಲಸಂರಕ್ಷಣಾ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮಕ್ಕಿಂತ ಮುಂಚೆ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಪದಗ್ರಹಣ ಜರುಗುವ ಸಭಾ ಭವನದವರೆಗೆ ಮೆರವಣಿಗೆ ಜರುಗಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಿದ್ದಲಿಂಗ ಹತ್ತಿ, ಶಂಕರ್ ಕೋಡ್ಲಾ, ಮಲ್ಲಿಕಾರ್ಜುನ್ ಕಣ್ಣಿ, ಮಲ್ಲಿಕಾರ್ಜುನ್ ಉಜ್ಜಾ, ಅರ್ಜುನ್ ಜಮಾದಾರ್, ಶಿವರಾಜ್ ಬಿರಬಟ್ಟೆ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button