ಅಪಘಾತದಲ್ಲಿ ಹರಳಕಟ್ಟಿ ಸಾವು: ಸಂತ್ರಸ್ತರಿಗೆ ಸಚಿವರಿಂದ ಸಾಂತ್ವನ, ನೆರವು

ಕಲಬುರ್ಗಿ, ಜೂ.೨೯- ಚಿತ್ತಾಪುರ ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಜನಳ್ಳಿ ಗ್ರಾಮದ ಪ್ರಕಾಶ್ ಹರಳಕಟ್ಟಿ ಮೃತಪಟ್ಟಿದ್ದು, ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಬಿಜನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದ ತಂದೆ ತಾಯಿ ಹಾಗೂ ಅವರ ಅಣ್ಣಂದಿರಿಗೆ ಸಾಂತ್ವನ ತಿಳಿಸಿ ವೈಯಕ್ತಿಕ ೫೦ ಸಾವಿರ ಧನಸಹಾಯ ಮಾಡಿ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರು ವಿವಿಧ ಗ್ರಾಮದಲ್ಲಿನ ಸಮಸ್ಯೆಗಳು ಸಚಿವರ ಗಮನಕ್ಕೆ ತಂದರು. ಅದಕ್ಕೆ ಸಂಬAಧಿಸಿದAತೆ ಪರಿಹಾರ ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು. ಈ ವೇಳೆಯಲ್ಲಿ ಮಳಖೇಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಪೂರಾಣಿಕ, ಗ್ಯಾರೆಂಟಿ ಅನುಷ್ಠಾನದ ಸದಸ್ಯರಾದ ಶ್ರೀನಿವಾಸ್ ಸಂಗಾವಿ, ದೇವೇಂದ್ರಪ್ಪ ಹಳಿಜೋಳ್ ಮಳಖೇಡ, ಪಿಎಸ್ಐ ಶರಣಪ್ಪ ಜಾಕನಲ್ಲಿ, ಪೊಲೀಸ್ ಸಿಬ್ಬಂದಿ ಸಂಜುಕುಮಾರ್ ಬಿರಾದರ್, ರುದ್ರಪ್ಪ ಪಿಲ್ಲಿ, ಮಲ್ಲಪ್ಪ ಮಳಖೇಡ, ಸುಂದರ ಮಂಗಾ, ಬಿಜನಳ್ಳಿ ಗ್ರಾಮದ ಮುಖಂಡರಾದ ದೇವೇಂದ್ರಪ್ಪ ಗೌಡ ಪಾಟೀಲ್, ವೈಜುನಾಥ ಒಂಟಿ ಮಳಖೇಡ, ಹಣಮಂತರಾವ್ ಪೋಲಿಸ್ ಪಾಟೀಲ್, ಮಹೇಶ್ ಕೊರವಾರ್, ಚನ್ನಪ್ಪ ಹೊಸಮನಿ, ಬಾಬುರಾವ್ ಮೂಲಿಮನಿ, ಅಣವೀರಪ್ಪ ಬಿರಾದಾರ್, ಕಲ್ಯಾಣಿ ಪೂಜಾರಿ, ರಾಕೇಶ್ ಹೊಸಮನಿ, ಮುನಿಯಪ್ಪ, ಶಂಭುಲಿAಗ, ಸುರೇಶ್ ಬಿಜನಳ್ಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



