ಉಡಚಣ ಮಠಕ್ಕೆ ಬೀಗ: ಶ್ರೀಗಳ, ಗ್ರಾಮಸ್ಥರ ನಡುವಿನ ಜಗಳಕ್ಕೆ ಹೊಸ ತಿರುವು..!

ಅಫಜಲಪುರ, ಜೂ.೨೯- ಕಳೆದ ಸುಮಾರು ೧೮ ತಿಂಗಳಿAದ ಶ್ರೀ ಶಂಕರಲಿAಗೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶಾಂತಲಿAಗ ಶಿವಾಚಾರ್ಯರು ಮತ್ತು ಉಡಚಾಣ ಗ್ರಾಮಸ್ಥರ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯ ರವಿವಾರ ಹೊಸ ತಿರುವು ಪಡೆದಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಮಠಕ್ಕೆ ಆಡಳಿತ ಮಂಡಳಿ ಬೀಗ ಜಡಿಯಲಾಗಿದೆ.
ಪೀಠಾಧಿಪತಿ ಶಾಂತಲಿAಗ ಶಿವಾಚಾರ್ಯರ ನಡೆ-ನುಡಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಹೊಸ ಪೀಠಾಧಿಪತಿಯನ್ನು ನೇಮಕ ಮಾಡಬೇಕು ಎಂದು ಹಲವು ತಿಂಗಳುಗಳಿAದ ಆಗ್ರಹಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಶಾಸಕ ಎಂ.ವೈ. ಪಾಟೀಲ್ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರ ಸಮ್ಮುಖದಲ್ಲಿ ಗ್ರಾಮಸ್ಥರ ಸಭೆ ಕರೆಯಲಾಗಿತ್ತು. ಸಭೆಗೆ ಹಾಜರಾಗುವಂತೆ ಆಡಳಿತ ಮಂಡಳಿ ನೋಟಿಸ್ ನೀಡಿದ ಬಳಿಕ ಪೀಠಾಧಿಪತಿಗಳು ಅನಾರೋಗ್ಯದ ಕಾರಣ ನೀಡಿ ಮಠ ತೊರೆದಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ಮಾತನಾಡಿ, ಮಠಾಧೀಶರು ಗ್ರಾಮಸ್ಥರು ಮತ್ತು ಭಕ್ತರನ್ನು ಒಗ್ಗೂಡಿಸಿಕೊಂಡು ಸಾಗಬೇಕು. ಆದರೆ ಆಡಳಿತದ ಕುರಿತು ಗ್ರಾಮಸ್ಥರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವುದು ದುರದೃಷ್ಟಕರ. ಮಠದ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಗಳ ಸುಗಮ ನಿರ್ವಹಣೆಗಾಗಿ ಹೊಸ ಆಡಳಿತ ಮಂಡಳಿ ರಚಿಸುವುದು ಅಗತ್ಯ ಎಂದರು.
ಸಭೆಯಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನಗೌಡ ಪಾಟೀಲ್, ಗಡೇಪ್ಪ ಮೇತ್ರಿ, ಪ್ರಕಾಶ್ ಜಮಾದಾರ್, ಉಮೇಶ್ ಮೋನಳ್ಳಿ, ಶಂಕರಲಿAಗ ಮೇತ್ರಿ, ಶಿವಶರಣಪ್ಪ ಪಡಶೆಟ್ಟಿ, ಶಿವಾನಂದ ಗಾಡಿ ಸಾಹುಕಾರ, ಸಿದ್ದಣ್ಣ ಅಳ್ಳಗಿ, ರಮೇಶ್ ಪೂಜಾರಿ, ಪುಟ್ಟು ಹೂಗಾರ, ವಿಶ್ವನಾಥ ಮಠಪತಿ, ಕಾಶಿನಾಥ ನಿಲಂಗಿ, ಗುರುರಾಜ ಮೇತ್ರಿ ಸೇರಿದಂತೆ ಹಲವಾರು ಗ್ರಾಮಸ್ಥರು ಹಾಗೂ ಮುಖಂಡರು ಉಪಸ್ಥಿತರಿದ್ದರು.



