ಜಿಲ್ಲಾಸುದ್ದಿ

ಅಫಜಲಪುರದ ಹಿರಿಯ ವೈದ್ಯ ಡಾ. ಸಿ.ವಿ. ಟಕ್ಕಳಕಿ ನಿಧನ

೭೭ನೇ ವಯಸ್ಸಿನಲ್ಲಿ ಕೊನೆಯುಸಿರು; ವೈದ್ಯಕೀಯ ಕ್ಷೇತ್ರದ ಗಣ್ಯರು, ಸಾರ್ವಜನಿಕರಿಂದ ಸಂತಾಪ

ಅಫಜಲಪುರ, ಅ. ೨೩: ಪಟ್ಟಣದ ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ವೈದ್ಯ ಡಾ. ಸಿ.ವಿ. ಟಕ್ಕಳಕಿ (೭೭) ಅವರು ತೀವ್ರ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಅವರ ಅಗಲಿಕೆಯಿಂದ ಅಫಜಲಪುರ ಪಟ್ಟಣದ ವೈದ್ಯಕೀಯ ವಲಯ ಹಾಗೂ ಸಾರ್ವಜನಿಕ ವಲಯದಲ್ಲಿ ಶೋಕ ಆವರಿಸಿದೆ.

ಡಾ. ಟಕ್ಕಳಕಿ ಅವರು ಅಫಜಲಪುರದಲ್ಲಿ ವೈದ್ಯಕೀಯ ಕ್ಷೇತ್ರದ ಮೂಲಕ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಪಟ್ಟಣದ ಜನರಿಗೆ ಚಿರಪರಿಚಿತರಾಗಿದ್ದ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು ಹಾಗೂ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ.

ಮೃತರ ಅಂತ್ಯಕ್ರಿಯೆಯನ್ನು ಶನಿವಾರ ಮಧ್ಯಾಹ್ನ ೧ ಗಂಟೆಗೆ ಅಫಜಲಪುರ ಪಟ್ಟಣದ ಹೊರವಲಯದಲ್ಲಿರುವ ಚಿಕ್ಕ ಅಳ್ಳಗಿ ರಸ್ತೆಯಲ್ಲಿನ ಅವರ ಸ್ವಂತ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಂತ್ಯಕ್ರಿಯೆಯಲ್ಲಿ ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಡಾ. ಸಿ.ವಿ. ಟಕ್ಕಳಕಿ ಅವರ ನಿಧನಕ್ಕೆ ಶಾಸಕ ಎಂ.ವೈ. ಪಾಟೀಲ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ, ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ, ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಕರಜಗಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಚಂದ್ರಶೇಖರ ನಿಂಬಾಳ, ಚಂದ್ರಾಮಪ್ಪ ಬಳ್ಳಗುಂಡಿ, ಮಹಾದೇವ ಕಲಕೇರಿ, ಕಂಟೆಪ್ಪ ಬಳ್ಳೂರಗಿ, ಪಾಶಾ ಮಣ್ಣೂರ, ಅರವಿಂದ ಹಾಳಕಿ, ಮಂಜೂರ ಅಹ್ಮದ್ ಪಟೇಲ್, ಸಿದ್ರಾಮಪ್ಪ ಮನ್ಮಿ, ಮಲ್ಲಿಕಾರ್ಜುನ ಶೆಟ್ಟಿ, ಸದಾಶಿವ ಮೇತ್ರಿ, ರವಿ ಶೆಟ್ಟಿ, ಮಲ್ಲಯ್ಯ ಹೊಸಮಠ, ಸಂಗ್ರಾಮಗೌಡ ಪಾಟೀಲ ಹಾಗೂ ನಿಂಗನಗೌಡ ಪಾಟೀಲ ಸೇರಿದಂತೆ ಹಲವರು ಮೃತರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಅಫಜಲಪುರದಲ್ಲಿ ಹಿರಿಯ ವೈದ್ಯರಾಗಿ ಗುರುತಿಸಿಕೊಂಡಿದ್ದ ಡಾ. ಟಕ್ಕಳಕಿ ಅವರ ಸೇವೆ ಹಾಗೂ ಜನರೊಂದಿಗಿನ ಒಡನಾಟವನ್ನು ಸ್ಮರಿಸಿದ ಗಣ್ಯರು, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button