ಜಿಲ್ಲಾಸುದ್ದಿ

ಹೊಸ ಬೈಕ್ ಖರೀದಿಸಿ ಬರುತ್ತಿದ್ದಾಗ ಭೀಕರ ಅಪಘಾತ: ಇಬ್ಬರು ಸ್ನೇಹಿತರ ದುರ್ಮರಣ

ಬೀದರ್, ಅ. ೧೦: ಬೆಂಗಳೂರಿನಿಂದ ಹೊಸ ಬೈಕ್ ಖರೀದಿಸಿ ಬೀದರ್‌ಗೆ ಬರುತ್ತಿದ್ದ ಇಬ್ಬರು ಸ್ನೇಹಿತರು ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ೯ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಬೀದರ್ ಜಿಲ್ಲೆಯ ತಾಲ್ಲೂಕಿನ ಯರನಳ್ಳಿ ಗ್ರಾಮದ ಸಾಯಿಕಿರಣ ಜೀತಪ್ಪ ಜೋಶಿ (೨೫) ಹಾಗೂ ನಾಗೇಶ ಮಾಣಿಪ್ಪ ಅಣ್ಣಾ (೨೪) ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ.

ಇಬ್ಬರು ಸ್ನೇಹಿತರು ಬೆಂಗಳೂರಿನಿಂದ ಹೊಸ ಬೈಕ್ ಖರೀದಿಸಿಕೊಂಡು ಬೀದರ್‌ಗೆ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರೂ ರಸ್ತೆಯಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತೆಲಂಗಾಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕರು ಬೀದರ್ ಮೂಲದವರು ಎಂಬುದನ್ನು ಗುರುತಿಸಿದ್ದು, ಮೃತದೇಹಗಳ ಕುರಿತು ಅಗತ್ಯ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.

ಈ ಸಂಬಂಧ ಸಂಗಾರೆಡ್ಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಹೊಸ ಬೈಕ್ ಖರೀದಿಸಿ ಸ್ವಗ್ರಾಮಕ್ಕೆ ಮರಳುವ ಸಂಭ್ರಮದಲ್ಲಿದ್ದ ಇಬ್ಬರು ಯುವಕರು ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖ ಮೂಡಿಸಿದೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button