ಜಿಲ್ಲಾಸುದ್ದಿ

ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಪ್ರಯತ್ನ: ವಿನೋದಕುಮಾರ ಅಪ್ಪೆ ಭರವಸೆ

ಬೀದರ್, ಅ.5– ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಗುಂಪಾ ರಿಂಗ್‌ ರಸ್ತೆವರೆಗೆ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ ಅಪ್ಪೆ ಭರವಸೆ ನೀಡಿದರು.

ನಗರದ ಕುಂಬಾರವಾಡ ಕಮಾನಿನ ಸಮೀಪದ ಮಹೇಶ್ ಫಂಕ್ಷನ್‌ ಹಾಲ್‌ನಲ್ಲಿ ಇತ್ತೀಚೆಗೆ ನಡೆದ ರಾಮಪುರ ಬ್ಯಾಂಕ್ ಕಾಲೊನಿ ಗಾಂಧಿ ಗೆಳೆಯರ ಬಳಗದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧಿ ಗೆಳೆಯರ ಬಳಗದ ಪಾದಚಾರಿ ಮಾರ್ಗದ ಬೇಡಿಕೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಬೀದರ್ ಶಾಸಕ ರಹೀಂಖಾನ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಗಾಂಧಿ ಗೆಳೆಯರ ಬಳಗವು ರಾಮಪುರ ಬ್ಯಾಂಕ್ ಕಾಲೊನಿಯ ಅಭಿವೃದ್ಧಿ ಉದ್ದೇಶದಿಂದ ಹುಟ್ಟಿಕೊಂಡಿದ್ದು, ಕಳೆದ ೧೯ ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ವತಿಯಿಂದ ಕಾಲೊನಿಯಲ್ಲಿ ರಸ್ತೆ, ಚರಂಡಿ, ದಾರಿದೀಪ, ಸಸಿ ನೆಡುವಿಕೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಹಿಂದೆ ಕಾಲೊನಿಯಲ್ಲಿ ಸಾರ್ವಜನಿಕರು ಓಡಾಡಲು ಸೂಕ್ತ ರಸ್ತೆ ಇಲ್ಲದ ಸಂದರ್ಭದಲ್ಲಿ ಬಳಗದ ಸದಸ್ಯರೆಲ್ಲರೂ ಒಗ್ಗೂಡಿ ನಿವೇಶನ ಖರೀದಿಸಿ ರಸ್ತೆ ನಿರ್ಮಿಸಿದ ಕಾರ್ಯವನ್ನು ಅವರು ಸ್ಮರಿಸಿದರು.

ಕಾಲೊನಿಯ ಉದ್ಯಾನವನದ ನಿರ್ವಹಣೆ ಹಾಗೂ ಬಳಗದ ಸದಸ್ಯರ ಸಾಧಕ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಉತ್ತೇಜಿಸಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ಪ್ರಭು ಪಾಟೀಲ ಹಾಗೂ ರಾಜಾರಾಮ ಚಟ್ಟಾ ಅವರಿಗೆ ಕಾಲೊನಿ ನಿವಾಸಿಗಳ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಯಿತು. ಬಳಗದ ಸಾಧಕ ಸದಸ್ಯರನ್ನು ಸನ್ಮಾನಿಸಿ, ಸದಸ್ಯರಿಗೆ ಪ್ರವಾಸಿ ಚೀಲಗಳನ್ನು ವಿತರಿಸಲಾಯಿತು.

ಉದ್ಯಮಿ ಉಮೇಶ್ ಬಿರಾದಾರ ಅವರು ಬಸವೇಶ್ವರ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.

ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಧನರಾಜ ಹಂಗರಗಿ, ವಿಶ್ವಕರ್ಮ ಬ್ಯಾಂಕ್ವೆಟ್ ಹಾಲ್ ಮಾಲೀಕ ಪಾಂಡುರಂಗ ಪಾಂಚಾಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷ ಸಂತೋಷ ಪಾಟೀಲ, ಸಹ ಕಾರ್ಯದರ್ಶಿ ರಾಚಯ್ಯ ಸ್ವಾಮಿ, ಶಿವರಾಜ ಶ್ರೀಮಂಗಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಳಗದ ಸದಸ್ಯ ರಘುನಾಥರಾವ್ ಮೇತ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಶಿವಶಂಕರ ಸ್ವಾಮಿ ವಾರ್ಷಿಕ ವರದಿ ಮಂಡಿಸಿದರು. ಬಸವಣ್ಣ ಮಠ ನಿರೂಪಿಸಿದರು. ದೇವೇಂದ್ರ ದಿಗ್ಜಿ ಸ್ವಾಗತಿಸಿದರು. ಗಂಗಾಧರ ತಡಕಲ್ ವಂದಿಸಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button