ಚಿತ್ರ ಸುದ್ದಿಜಿಲ್ಲಾಸುದ್ದಿ

‘ಸೂರ್ಯ ಇನ್ ಗಾಂಧಿನಗರ’ದಲ್ಲಿ ಬೀದರ್‌ನ ನೇಹಾ ನಾಯಕಿ

ಬೀದರ್, ಅ.1- ಅಕ್ಟೋಬರ್ 2ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ‘ಸೂರ್ಯ ಇನ್ ಗಾಂಧಿನಗರ’ ಚಿತ್ರದಲ್ಲಿ ಬೀದರ್‌ನ ಪ್ರತಿಭೆ ನೇಹಾ ಬಸವರಾಜ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಪದವೀಧರೆಯಾಗಿರುವ ನೇಹಾ ಅವರಿಗೆ ಇದು ನಟನೆಯ ಮೊದಲ ಚಿತ್ರವಾಗಿದ್ದು, ಚಿತ್ರರಂಗದಲ್ಲಿ ಕೆಲಸ ಮಾಡಬೇಕೆಂಬ ತಮ್ಮ ಬಹುದಿನಗಳ ಆಸೆ ಈಡೇರಿದೆ. ನಿರ್ಮಾಪಕ ಗುರುರಾಜ ಅಂಕೋಲಾ ಅವರು ‘ಸೂರ್ಯ ಇನ್ ಗಾಂಧಿನಗರ’ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನೀಡಿರುವುದು ಸಂತಸ ತಂದಿದೆ ಎಂದು ನೇಹಾ ತಿಳಿಸಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊಂದಿದ್ದ ನೇಹಾ, ಹಳ್ಳಿಯಿಂದ ಬೆಂಗಳೂರಿನ ಗಾಂಧಿನಗರಕ್ಕೆ ಬರುವ ಯುವಕನೊಬ್ಬ ನಾಯಕನಾಗಲು ಎದುರಿಸುವ ಕಷ್ಟ, ನೋವು, ಕಣ್ಣೀರು ಹಾಗೂ ಗೆಲುವಿನ ಕಥೆಯನ್ನು ಚಿತ್ರ ಹೊಂದಿದೆ ಎಂದು ಹೇಳಿದ್ದಾರೆ.

ನೇಹಾ ಅವರ ತಂದೆ ಬಸವರಾಜ ಅವರು ಬೀದರ್‌ನ ಸೇಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಕರಾಗಿ, ತಾಯಿ ಸುನೀತಾ ಗೃಹಿಣಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೇಹಾ ಭರತನಾಟ್ಯ ಕಲಿತಿದ್ದು, ತಮ್ಮ ರಂಗಭೂಮಿ ಪ್ರವೇಶದ ಮೊದಲ ಹೆಜ್ಜೆ ಇದಾಗಿದೆ ಎಂದು ತಿಳಿಸಿದ್ದಾರೆ. ಬೀದರ್‌ನ ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅವರು ನೇಹಾ ಅವರಿಗೆ ಭರತನಾಟ್ಯ ಕಲಿಸಿದ ಗುರುವಾಗಿದ್ದಾರೆ.

ಗುರುರಾಜ ಅಂಕೋಲಾ ಅವರು ನಿರ್ಮಾಪಕ, ನಿರ್ದೇಶಕ ಹಾಗೂ ನಟರಾಗಿ ಕಾಣಿಸಿಕೊಂಡಿರುವ ‘ಸೂರ್ಯ ಇನ್ ಗಾಂಧಿನಗರ’ ಚಿತ್ರ ಅಕ್ಟೋಬರ್ 2ರಂದು ಬೀದರ್‌ನ ಸಪ್ನಾ ಮಲ್ಟಿಫ್ಲೆಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಜಿಲ್ಲೆಯ ಜನರು ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಚಿತ್ರತಂಡ ಮನವಿ ಮಾಡಿದೆ.

ಚಿತ್ರದಲ್ಲಿ ಬೀದರ್‌ನ ನೇಹಾ ಬಸವರಾಜ ನಾಯಕಿಯಾಗಿ ನಟಿಸಿರುವುದು ಜಿಲ್ಲೆಯ ಕಲಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಚಿತ್ರವು ಅದ್ದೂರಿ ಯಶಸ್ಸು ಕಾಣಲಿ ಎಂದು ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ, ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ವಿಶ್ವ ಹಿಂದೂ ಪರಿಷತ್ ಮುಖಂಡ ರಾಮಕೃಷ್ಣ ಸಾಳೆ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button