ಜಿಲ್ಲಾಸುದ್ದಿ

ಎಚ್‌ಐವಿ ಜಾಗೃತಿ ಮೂಡಿಸಿದ ಯುವಜನೋತ್ಸವ: ಮ್ಯಾರಥಾನ್‌ಗೆ ಚಾಲನೆ

ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ವತಿಯಿಂದ ಎಚ್‌ಐವಿ/ಏಡ್ಸ್ ಯುವಜನೋತ್ಸವ 2026-27ರ ಅಂಗವಾಗಿ ಮ್ಯಾರಥಾನ್ ಸ್ಪರ್ಧೆ ಆಯೋಜಿಸಲಾಯಿತು.


ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆದ ಮ್ಯಾರಥಾನ್‌ಗೆ ವಿಭಾಗೀಯ ಸಹ ನಿರ್ದೇಶಕ ಡಾ. ಶಂಕ್ರಪ್ಪ ಮೈಲಾರಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಉಪನಿರ್ದೇಶಕರಾದ ಡಾ. ಶರಣಬಸಪ್ಪ ಗಣಜಲಖೇಡ್, ಡಾ. ಎ.ಎಸ್. ರುದ್ರವಾಡಿ ಹಾಗೂ ಜಿಲ್ಲಾ DAPCO ಅಧಿಕಾರಿ ಡಾ. ಮಹಮ್ಮದ್ ಗಫಾರ್ ಉಪಸ್ಥಿತರಿದ್ದರು.


ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಜಗತ್ ವೃತ್ತದ ಮಾರ್ಗವಾಗಿ ಗೋವಾ ಹೋಟೆಲ್, ಆನಂದ ಹೋಟೆಲ್ ಮಾರ್ಗದಲ್ಲಿ ಸಂಚರಿಸಿ ಮತ್ತೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಮರಳಿದರು. ಈ ಮೂಲಕ ಯುವಜನರಲ್ಲಿ ಎಚ್‌ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಂದೇಶ ಸಾರಲಾಯಿತು.


ಸ್ಪರ್ಧೆಯಲ್ಲಿ ಕುಮಾರ್ ಅಜಯ್ ಹಾಗೂ ಕುಮಾರಿ ಅಂಬಿಕಾ ಪ್ರಥಮ ಬಹುಮಾನ ಪಡೆದರು. ಕುಮಾರ್ ಸಾಗರ್ ಹಾಗೂ ಕುಮಾರಿ ಸ್ವಪ್ನ ದ್ವಿತೀಯ, ಕುಮಾರ್ ಇಮ್ರಾನ್ ಹಾಗೂ ಕುಮಾರಿ ಸಂಗೀತ ತೃತೀಯ ಬಹುಮಾನ ಪಡೆದರು.


ಕಾರ್ಯಕ್ರಮದಲ್ಲಿ DAPCO ಮೇಲ್ವಿಚಾರಕ ಮಲ್ಲಿಕಾರ್ಜುನ್ ಬಿರಾದಾರ, ವಂದಿಶಿದರು, ಅರ್ಚನಾ, NTEP ಮೇಲ್ವಿಚಾರಕರು ಹಾಗೂ ಸಿಬ್ಬಂದಿ, DAPCU ಸಿಬ್ಬಂದಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, NSS ತಂಡಗಳು, ರೆಡ್ ರಿಬ್ಬನ್ ಕ್ಲಬ್ ಅಧಿಕಾರಿಗಳು, NGO ಪ್ರತಿನಿಧಿಗಳು ಸೇರಿದಂತೆ ಸುಮಾರು 150ರಿಂದ 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಜನೋತ್ಸವಕ್ಕೆ ಬೆಂಬಲ ನೀಡಿದರು. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button