ಕಲಬುರಗಿಯಲ್ಲಿ ಸೆ.20ರಂದು ಶರಣತತ್ವ ಚಿಂತನಾ ಸಮಾವೇಶ

ಕಲಬುರಗಿ, ಸೆ.19: ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ 13ನೇ ವರ್ಷಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸೆ.20ರಂದು ಬೆಳಿಗ್ಗೆ 11.15ಕ್ಕೆ ನಗರದ ಕನ್ನಡ ಭವನದಲ್ಲಿ ‘ಶರಣತತ್ವ ಚಿಂತನಾ ಸಮಾವೇಶ’ ಎಂಬ ವೈಚಾರಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಬಸವಾದಿ ಶರಣರ ತತ್ವಗಳು ಮನುಷ್ಯನ ದೈನಂದಿನ ಬದುಕಿಗೆ ದಾರಿದೀಪವಾಗಿದ್ದು, ಮೌಲ್ಯಾಧಾರಿತ ಜೀವನಕ್ಕೆ ಪ್ರೇರಣೆ ನೀಡುತ್ತವೆ. ಶರಣರು ತಮ್ಮ ಅನುಭವದ ಮೂಲಕ ವಚನಗಳನ್ನು ರಚಿಸಿ, ಕಾಯಕದ ಮೂಲಕ ಬದುಕು ಕಟ್ಟಿಕೊಂಡಿದ್ದರು. ಸರ್ವ ಜನಾಂಗದವರನ್ನು ಪ್ರೀತಿಸುವ ಮೂಲಕ ಶರಣ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಇಂದಿನ ಯುವಜನತೆಯಲ್ಲಿ ಶರಣರ ಸಂದೇಶವನ್ನು ಬಿತ್ತುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ್ ತಿಳಿಸಿದ್ದಾರೆ.
ಹಿರಿಯ ಸಾಹಿತಿ ಡಾ. ಕೆ.ಎಸ್. ನಾಯಕ್ ಸಮಾವೇಶ ಉದ್ಘಾಟಿಸುವರು. ಮಾಜಿ ಮೇಯರ್ ವರ್ಷಾ ರಾಜೀವ್ ಜಾನೆ, ಮಣೂರ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರೂಕ್ ಮಣೂರ, ಸಾಹಿತಿಗಳಾದ ಡಾ. ಜಗನ್ನಾಥ ತರನಳ್ಳಿ, ಮುಡುಬಿ ಗುಂಡೇರಾವ್ ಹಾಗೂ ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಚಿತ್ತಾಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಪ್ರತಿನಿಧಿ ಸೈಯ್ಯದ್ ನಜೀರುದ್ದೀನ್ ಮುತವಲ್ಲಿ, ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ ಹಾಗೂ ಶರಣರಾಜ ಛಪ್ಪರಬಂದಿ ಉಪಸ್ಥಿತರಿರುವರು.
ದಂಪತಿ ದರ್ಪಣ ಗೌರವ
ಆದರ್ಶ ಶರಣ ದಂಪತಿಗಳಾದ ಕಾವೇರಿ ಡಾ. ಶರಣಬಸಪ್ಪ ಕಾರಭಾರಿ, ಭಾಗ್ಯಶ್ರೀ ಹನುಮಗೌಡ, ಜ್ಯೋತಿ ಲಕ್ಷ್ಮೀ ಸಂಜುಶೆಟ್ಟಿ, ಗಿರಿಜಾ ರುದ್ರಗೌಡ ಪಾಟೀಲ, ಸಂಗೀತಾ ಚಂದ್ರಶೆಟ್ಟಿ ಕಾಡಾದಿ, ಸುಷ್ಮಾವತಿ ಡಾ. ಶರಣು ಹೊನ್ನಗೆಜ್ಜೆ, ನೀಲಮ್ಮ ಸುನೀಲ ವಾಡಿ ಹಾಗೂ ಸಂಗಮ್ಮ ರೇವಣಸಿದ್ಧಯ್ಯ ಮಠ ಅವರಿಗೆ ‘ದಂಪತಿ ದರ್ಪಣ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಗುವುದು.
ಕಾಯಕ ರತ್ನ ಗೌರವ
ಕಾಯಕದ ಜತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹೇಶಕುಮಾರ ಭಾವಿಕಟ್ಟಿ, ಜಗನ್ನಾಥ ಬಂಡಿ, ಜೈದೀಪ್ ಅಡವಿರಾಜ ಕೊಡಲಿ, ಗುರುಬಸಪ್ಪ ಪಾಟೀಲ, ಪಂಡಿತ ಗೋವಿಂದ ಸರಸಂಬಾ, ಸಿದ್ಧಲಿಂಗೇಶ್ವರ ಕೊನೆಕ, ಶಿವರಾಜ ಮಾಲಿಪಾಟೀಲ ತೇಗಲತಿಪ್ಪಿ, ಶಾಂತಾಬಾಯಿ ಹಿರೇಮಠ, ಡಾ. ಮಾಲಿನಿ ಡೇರೇದ, ನಿಂಗನಗೌಡ ಪಾಟೀಲ ಯಲಗೋಡ, ಭಾಗ್ಯಶ್ರೀ ಪಾಟೀಲ ಕಲ್ಲಹಂಗರಗಾ, ಮಲ್ಲಿಕಾರ್ಜುನ ನೆಲೂರ್, ಎ.ಆರ್. ದತ್ತಾ, ಅಮರೇಶ್ವರ ನೂಲಾ, ನಾಗೇಂದ್ರಪ್ಪ ದಂಡೋತಿಕರ್ ಹಾಗೂ ರಾಜೇಂದ್ರ ಮಾನೆ ಅವರಿಗೆ ‘ಕಾಯಕ ರತ್ನ ಗೌರವ ಪುರಸ್ಕಾರ’ ನೀಡಿ ಸತ್ಕರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.



