ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆ: ಡಾ. ಇಂದುಶ್ರೀ

ಚಿತ್ತಾಪುರ: ಸ್ವಚ್ಛ ಭಾರತ ಅಭಿಯಾನವು ದೇಶಾದ್ಯಂತ ಸ್ವಚ್ಛತೆ ಕಾಪಾಡುವ ಹಾಗೂ ಬಯಲು ಶೌಚ ಮುಕ್ತ ಭಾರತ ನಿರ್ಮಿಸುವ ಉದ್ದೇಶದಿಂದ ಭಾರತ ಸರ್ಕಾರ ಆರಂಭಿಸಿರುವ ಬೃಹತ್ ಆಂದೋಲನವಾಗಿದೆ ಎಂದು ಪೇಟಶಿರೂರ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಇಂದುಶ್ರೀ ಎಂ.ಸಿ. ಹೇಳಿದರು.
ತಾಲೂಕಿನ ಪೇಟಶಿರೂರ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ (ಸೆ.19) ಆಯೋಜಿಸಿದ್ದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಸರ್ಕಾರವು 2014ರ ಅಕ್ಟೋಬರ್ 2ರಂದು ನವದೆಹಲಿಯ ರಾಜಘಾಟ್ನಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದು, ದೇಶವನ್ನು ನೈರ್ಮಲ್ಯ ಮತ್ತು ಸ್ವಚ್ಛತೆಯಿಂದ ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಅಭಿಯಾನವಾಗಿ ರೂಪಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆ, ಓಣಿ, ಶಾಲೆ, ಕಚೇರಿ, ಗ್ರಾಮ ಹಾಗೂ ನಗರ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಿತ್ತಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಎಲ್ಎಚ್ವಿ ಅಧಿಕಾರಿ ಶಾಂತಾಬಾಯಿ ತಳವಾರ್, ತಾಲೂಕು ಆಶಾ ಮೆಂಟರ್ ಅಧಿಕಾರಿ ರೋಜಲಿನ್ ಸೇರಿದಂತೆ ಸಂತೋಷಕುಮಾರ್ ತಳವಾರ್, ಸತೀಶ್ ನಿಲಂಗಿ, ರಮೇಶ್ ಜಿ.ಆರ್., ಸುಧಾರಾಣಿ ಎಂ., ಶ್ರೀನಿವಾಸ್ ರಾಠೋಡ್, ಸುಚಿತ್ರಾ ಇಳ್ಳಿ, ರೂಪಾ ಬೈರಾಮಡಗಿ, ಮಲ್ಲಮ್ಮ ರಮೇಶ್ ಕೊಂಡೆದ, ಇಂದುಬಾಯಿ ಶಿರೂರ್, ಸಂಗೀತಾ ಎಸ್. ಕುಂಬಾರ್, ನಿಂಗಣ್ಣ ಬಾಗಲಿ, ವಸಂತ್ ಚವ್ಹಾಣ, ಸಂತೋಷ್ ಜಾದವ್, ಸಿದ್ದಣ್ಣ ವಡಗೇರಿ, ಬೆಳ್ಳಪ್ಪ ಹುಗ್ಗಿ, ಅನಿಲ್ ಕೊಡಸಾ, ಶಿವಾನಂದ ಕುಂಬಾರ ಸೇರಿದಂತೆ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.



