ಸಂಗೀತದಿಂದ ಶಾಂತಿ ನೆಮ್ಮದಿ: ಸಿದ್ದಲಿಂಗಯ್ಯ ಶಾಸ್ತ್ರಿಗಳು

ಕಲಬುರಗಿ, ಸೆ.2- ಸಂಗೀತದಿಂದ ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ. ಆಧ್ಯಾತ್ಮಿಕ ಸಂಸ್ಕಾರವನ್ನು ನೀಡುವ ಸಂಗೀತವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ವೇದಮೂರ್ತಿ ಸಿದ್ದಲಿಂಗಯ್ಯ ಶಾಸ್ತ್ರಿಗಳು ಹೇಳಿದರು.
ನಗರದ ಶ್ರೀ ಶಿವಲಿಂಗ ಮಂದಿರ ಆವರಣದಲ್ಲಿ ಶ್ರೀ ದೇವಿ ಸರಸ್ವತಿ ಕಲಾಬಳಗ ಸಂಘದ ವತಿಯಿಂದ ಆಯೋಜಿಸಿದ್ದ ಸುಗಮ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಾವಿದರ ಸಂಗೀತವನ್ನು ಆಲಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.
ಯೋಗಿರಾಜೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶ್ರೀಶೈಲ ಭೈರಾಮಡಗಿ, ರಾಜಶೇಖರ ಸ್ವಾಮಿ ಆತ್ಮಗೇರಿ, ಶಿವರಾಯ ಗಣಪತಿ, ಶ್ರೀಮತಿ ಕಲಾವತಿ ಭೈರಾಮಡಗಿ, ಶ್ರೀಮತಿ ಉಮಾಬಾಯಿ, ಶ್ರೀಮತಿ ನೀಲಮ್ಮ ಪೂಜಾರಿ, ಶ್ರೀಮತಿ ಗಂಗಾಬಾಯಿ ಮಾಡಬೂಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಗಮ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ನಿತ್ಯಾನಂದ ಸ್ವಾಮಿ ಬಳಬಟ್ಟಿ ಮಠ, ಶಿವಾನಂದ ತಾವರಖೇಡ, ಬಸವರಾಜ್ ಮಾಡ್ಯಾಳ್, ಕು. ಸಾಕ್ಷಿ ಪಾಟೀಲ, ಲಕ್ಷ್ಮೀಕಾಂತ ಹೂಗಾರ, ಸೂರ್ಯಕಾಂತ ಶಾಸ್ತ್ರಿ, ಈರಯ್ಯ ಸ್ವಾಮಿ ಹಾಗೂ ಶ್ರೀಶೈಲ ಯಳಸಂಗಿ ಅವರು ಸುಗಮ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಶರಣಪ್ಪ ಸಾಗನೂರ ವಂದಿಸಿದರು.



