ದಲಿತ ಸಂಘರ್ಷ ಸಮಿತಿ ಮತ್ತಷ್ಟು ಬಲಪಡಿಸಲು ನಾಗಣ್ಣ ಬಡಿಗೇರ್ ಕರೆ
ದಲಿತರ ಮೇಲಿನ ದೌರ್ಜನ್ಯ ತಡೆಗೆ ಸಂಘಟಿತ ಹೋರಾಟ ಅಗತ್ಯ: ನಾಗಣ್ಣ ಬಡಿಗೇರ್

ಜೇವರ್ಗಿ, ಆ.19: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸಮಿತಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗಣ್ಣ ಬಡಿಗೇರ್ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಿತಿಯ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಗಟ್ಟಲು ಸಂಘಟಿತ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ದಲಿತ ಸಮುದಾಯದ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಂಘಟನೆಯನ್ನು ತಳಮಟ್ಟದಿಂದಲೇ ಬಲಪಡಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರು ಸಂಘಟನೆಯ ಆಶಯಗಳನ್ನು ಜನರಿಗೆ ತಲುಪಿಸುವ ಮೂಲಕ ದೌರ್ಜನ್ಯಗಳ ವಿರುದ್ಧ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ನಾಗಣ್ಣ ಬಡಿಗೇರ್ ತಿಳಿಸಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಭಾಗೀಯ ಸಂಚಾಲಕ ಶ್ರೀನಿವಾಸ್ ಖೇಳಗಿ, ಕಲಬುರಗಿ ಜಿಲ್ಲಾ ಸಂಚಾಲಕ ಸಂಜೀವಕುಮಾರ ಜವಳಕರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಬಾಬುರಾವ್ ಶಳ್ಳಗಿ ಹಾಗೂ ಶ್ರೀಹರಿ ಕರಕಳ್ಳಿ ಭಾಗವಹಿಸಿದ್ದರು.
ತಾಲೂಕು ಸಂಚಾಲಕ ಸಿದ್ದು ಕೆರೂರು, ಸಂಘಟನಾ ಸಂಚಾಲಕರಾದ ರೇವಣಸಿದ್ದ ಬಿರಾಳ, ಯಶವಂತರಾಯ ಬಡಗೇರ್, ಜೈಭೀಮ್ ನರಿಬೋಳ್, ಬಸವರಾಜ ವಚರನಳ್ಳಿ, ಶರಣಬಸಪ್ಪ ಲಖಣಪುರ, ಬೀರ್‌ಲಿಂಗ ಕಲೂರ್, ಸಚಿನ್ ಮಂದೇವಾಲ್, ಖಲೀಲ್ ಮಂದ್ರವಾಡ, ಮಲ್ಲಿನಾಥ ಹೆಗಡೆ, ತಿಪ್ಪಣ್ಣ ಅಣಬಿ, ಯಡ್ರಾಮಿ ಸಂಚಾಲಕರಾದ ಮಾಡಿವಾಳ ಸಾಗರ, ಮೌನೇಶ್ ಅಂಬರಖೇಡ್, ಯಲ್ಲಪ್ಪ ನೆದಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



