ಶಿಕ್ಷಣಸಮಾಜ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಸಮಾಜದ ಪ್ರಗತಿಗೆ ಶಿಕ್ಷಣವೇ ಶಕ್ತಿ ಎಂದ ಶ್ರೀ ರೇವಣಸಿದ್ಧ ಶಿವಾಚಾರ್ಯರು

ಜಂಗಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ; ಸಮಾಜದ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ವಿಶೇಷ ನಿಗಮ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ

ಕಲಬುರಗಿ, ಆ. 3: ಶಿಕ್ಷಣದ ಮೂಲಕವೇ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಜಂಗಮ ಸಮಾಜದ ವಿದ್ಯಾರ್ಥಿಗಳು ಶಿಸ್ತು, ಬದ್ಧತೆ ಮತ್ತು ಪರಿಶ್ರಮದಿಂದ ಉನ್ನತ ಸಾಧನೆ ಮಾಡಬೇಕು ಎಂದು ಶ್ರೀನಿವಾಸ ಸರಡಗಿ ಸಂಸ್ಥಾನದ ಡಾ. ರೇವಣಸಿದ್ಧ ಶಿವಾಚಾರ್ಯರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಜಂಗಮ ಸಮಾಜದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಜಂಗಮ ಸಮಾಜಕ್ಕೆ ತನ್ನದೇ ಆದ ಗೌರವ, ಘನತೆ ಮತ್ತು ಪರಂಪರೆ ಇದೆ. ಸಮಾಜವನ್ನು ಸರಿದಾರಿಗೆ ತರುವಲ್ಲಿ ಜಂಗಮರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಶಿಕ್ಷಣದಿಂದ ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಹೇಳಿದರು.

ಜಂಗಮ ಸಮಾಜ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಇನ್ನಷ್ಟು ಅಭಿವೃದ್ಧಿಯಾಗಬೇಕಿದ್ದು, ಸರ್ಕಾರ ಸಮಾಜದ ಅಭಿವೃದ್ಧಿಗಾಗಿ ವಿಶೇಷ ನಿಗಮವನ್ನು ಸ್ಥಾಪಿಸಬೇಕು ಹಾಗೂ ಸಮಾಜಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಬಿಜಾಸ್ಪೂರ ಗ್ರೂಪ್‌ನ ಪ್ರಶಾಂತ್ ಬಿಜಾಸ್ಪೂರ, ಬಿಲ್ವ ಆಸ್ಪತ್ರೆಯ ಮುಖ್ಯಸ್ಥ ಡಾ. ರೇಣುಕ ಪ್ರಸನ್ನ ಚಿಕ್ಕಮಠ, ಪ್ರಥಮ ದರ್ಜೆ ಗುತ್ತಿಗೆದಾರ ಗೋಳಯ್ಯ ಹಿರೇಮಠ, ಹೈಕೋರ್ಟ್ ವಕೀಲ ಅಮರೇಶ್ ರಾವೂರಮಠ, ಯುವ ಉದ್ಯಮಿ ರಾಚೋಟಯ್ಯ ಹಿರೇಮಠ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ನೌಕರರ ಸಂಘದ ಗೌರವಾಧ್ಯಕ್ಷೆ ಶ್ರೀಮತಿ ಗೌರವಮ್ಮ ಹಿರೇಮಠ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಡಿಗ್ಗಾಂವಕರ (ಪಿಂಟು ಸ್ವಾಮಿ) ವಹಿಸಿದ್ದರು. ಕೆ.ಎಸ್. ಹಿರೇಮಠ, ಸೋಮಶೇಖರ ಹಿರೇಮಠ, ಗುರುಬಾಯಿ ವಸ್ತ್ರದ್, ಜ್ಯೋತಿ ಹಿರೇಮಠ, ಭದ್ರಯ್ಯ ಸಾಲಿಮಠ, ರುದ್ರಮುನಿ ಕೊಂಚೂರ್, ವಿ.ಆರ್. ಸ್ವಾಮಿ, ಆನಂದ ಹಿರೇಮಠ, ಶಿವು ಹಿರೇಮಠ, ವಿಶ್ವನಾಥ ಸಾಲಿಮಠ, ಮೃತ್ಯುಂಜಯ ಪಲ್ಲಾಪೂರಮಠ, ಗಂಗಾಧರ, ರೇವಯ್ಯ ಸರಡಗಿ, ಚೆನ್ನು ಹಿರೇಮಠ, ಸಿದ್ದಲಿಂಗಯ್ಯ ಸ್ಥಾವರಮಠ, ಕುಮಾರಸ್ವಾಮಿ, ಬಸವರಾಜ ಮಠಪತಿ, ಶ್ರೀಶೈಲ, ಕವಿತಾ ಶಟಗಾರಮಠ, ಮಹೇಶ್ ಮಠ, ಈರವ್ವ ಹಿರೇಮಠ, ಅನ್ನಪೂರ್ಣ ಹಿರೇಮಠ, ಕರಣಯ್ಯ ಶಾಸ್ತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರುದ್ರಯ್ಯ ಕೊಡಲಹಂಗರಗಾ ಸ್ವಾಗತಿಸಿದರು. ವೀರು ಸ್ವಾಮಿ ನಿರೂಪಣೆ ನಡೆಸಿದರು. ಶಿವು ಹಾಗರಗುಂಡಗಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button