ಬಾಲಕಿ ಅಪಹರಿಸಿ ಲಾಡ್ಜ್ನಲ್ಲಿ ಅತ್ಯಾಚಾರ: ಆರೋಪಿಗೆ ೧೦ ವರ್ಷ ಜೈಲು ಶಿಕ್ಷೆ

ಕಲಬುರ್ಗಿ, ಜು.೮- ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಲಾಡ್ಜ್ನಲ್ಲಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬoಧಿಸಿದoತೆ ಆರೋಪಿ ತಾಲ್ಲೂಕಿನ ಬೇಲೂರಿನ ಆಟೋ ಚಾಲಕ ಗುಂಡಪ್ಪ ತಂದೆ ಗೋವಿಂದಪ್ಪ ಕುಶಾಳಕರ್ (೨೬) ಎಂಬಾತನಿಗೆ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ- ಎಫ್‌ಟಿಎಸ್‌ಸಿ-೧ರ ನ್ಯಾಯಾಧೀಶ ಎಸ್.ಎಲ್. ಚವ್ಹಾಣ್ ಅವರು ಹತ್ತು ವರ್ಷಗಳ ಜೈಲು ಶಿಕ್ಷೆ ಹಾಗೂ ೫೦,೦೦೦ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದರು.
ಪೋಕ್ಸೋ ಕಾಯ್ದೆಯಡಿ ೧೦ ವರ್ಷ ಜೈಲು ಶಿಕ್ಷೆ ಹಾಗೂ ೨೫೦೦೦ರೂ.ಗಳ ದಂಡ, ದಂಡ ಕೊಡಲು ತಪ್ಪಿದಲ್ಲಿ ಆರು ತಿಂಗಳು ಸಾದಾ ಶಿಕ್ಷೆ ವಿಧಿಸಿದರು. ಕಲಂ ೩೬೩ ಐಪಿಸಿ ಅಡಿ ಅಪರಾಧಕ್ಕೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ೨೫ ಸಾವಿರ ರೂ.ಗಳ ದಂಡ, ದಂಡ ಕೊಡಲು ತಪ್ಪಿದಲ್ಲಿ ಎರಡು ತಿಂಗಳು ಸಾದಾ ಶಿಕ್ಷೆ ವಿಧಿಸಿದರು.ಕಾನೂನು ಪ್ರಾಧಿಕಾರದಿಂದ ನೊಂದ ಬಾಲಕಿಗೆ ಐದು ಲಕ್ಷ ರೂ.ಗಳನ್ನು ಪರಿಹಾರವಾಗಿ ತೀರ್ಪಿನ ದಿನಾಂಕದಿoದ ಒಂದು ತಿಂಗಳ ಅವಧಿಯೊಳಗೆ ನೀಡಬೇಕು ಎಂದು ನ್ಯಾಯಾಧೀಶರು ಆರೋಪಿಸಿದರು.
ಸಬ್ ಅರ್ಬನ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಮಲಾನಗರದ ಬಾಲಕಿಗೆ ಪುಸಾಯಿಸಿ ಸುಲ್ತಾನಪೂರ್ ಕ್ರಾಸ್ ಹತ್ತಿರ ಕರೆಸಿ ಆಟೋದಲ್ಲಿ ಅಪಹರಣ ಮಾಡಿಕೊಂಡು ಶ್ರೀ ಸಾಯಿ ಲಾಡ್ಜ್ನಲ್ಲಿ ಕಳೆದ ೨೦೨೪ರ ಮೇ ೧೯ರಂದು ಜಬರಿ ಸಂಭೋಗ ಮಾಡಿದ ಆರೋಪಕ್ಕೆ ಸಂಬoಧಿಸಿದoತೆ ತನಿಖಾಧಿಕಾರಿ ಪಿಐ ಸಂತೋಷ್ ಎಲ್. ತಟ್ಟೆಪಳ್ಳಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಸದರಿ ಪ್ರಕರಣದಲ್ಲಿ ಸಿಬ್ಬಂದಿಗಳಾದ ಪ್ರಭುರಾಜ್, ಬ್ರಹ್ಮಾನಂದ್, ಅಮೃತರಾವ್ ಅವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ್ ಅವರು ವಾದ ಮಂಡಿಸಿದರು.



