ಸಾರಿಗೆ

ಡೆಮು ರೈಲಿನ ಹಿಂದಿನ ವೇಳಾಪಟ್ಟಿ ಪುನಃ ಜಾರಿಗೆ ಒತ್ತಾಯ

ಬೀದರ್–ಕಲಬುರಗಿ ಹಾಗೂ ಬೀದರ್–ಹೈದರಾಬಾದ್ ರೈಲುಗಳ ವೇಳಾಪಟ್ಟಿ ಬದಲಾವಣೆಗೆ ಸಂಸದರ ಮೂಲಕ ಮನವಿ

ಬೀದರ್, ಜು.20: ಬೀದರ್–ಕಲಬುರಗಿ ಮಧ್ಯೆ ಸಂಚರಿಸುವ ಡೆಮು ರೈಲಿಗೆ ಹಿಂದಿನ ವೇಳಾಪಟ್ಟಿಯನ್ನೇ ಪುನಃ ಜಾರಿಗೆ ತರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಯುವ ಬ್ರಿಗೇಡ್ ಜಿಲ್ಲಾ ಅಧ್ಯಕ್ಷ ಉದಯ ನಾಯಕ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸಂಸದ ಸಾಗರ್ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಪ್ರಸ್ತುತ ಡೆಮು ರೈಲು ತಡವಾಗಿ ಸಂಚರಿಸುತ್ತಿರುವುದರಿಂದ ಇತರೆ ರೈಲುಗಳನ್ನು ಹಿಡಿದು ಮುಂದಿನ ಪ್ರಯಾಣ ಮಾಡುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಹೀಗಾಗಿ, ಡೆಮು ರೈಲಿನ ಹಿಂದಿನ ವೇಳಾಪಟ್ಟಿಯನ್ನು ಮರು ಜಾರಿಗೆ ತಂದು ಪ್ರಯಾಣಿಕರ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಅಲ್ಲದೆ, ಬೀದರ್–ಹೈದರಾಬಾದ್ ಅಂತರನಗರ ರೈಲನ್ನು ಹಿಂದಿನಂತೆ ಬೆಳಿಗ್ಗೆ 7 ಗಂಟೆಗೆ ಬೀದರ್‌ನಿಂದಲೇ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button