ಸಮಾಜಸಾಂಸ್ಕೃತಿಕ

ಆಗಸ್ಟ್ 1ರಂದು ಕಲಬುರಗಿಯಲ್ಲಿ ಅನ್ನಾಭಾವು ಸಾಟೆ ಜಯಂತ್ಯುತ್ಸವ

ಕನ್ನಡ ಭವನದಲ್ಲಿ ಅದ್ದೂರಿ ಆಚರಣೆ; ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟನೆ, ಗಣ್ಯರ ಭಾಗಿ

ಕಲಬುರಗಿ, ಜು.29: ಸಾಹಿತ್ಯ ಸಾಮ್ರಾಟ್ ಅನ್ನಾಭಾವು ಸಾಟೆ ಅವರ ಜಯಂತ್ಯುತ್ಸವವನ್ನು ಆಗಸ್ಟ್ 1ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕನ್ನಡ ಭವನದ ಸುವರ್ಣ ಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ನ್ಯಾಯವಾದಿ ಬಸಣ್ಣ ಸಿಂಗೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಲಿದ್ದು, ನಿವೃತ್ತ ಮುಖ್ಯ ಎಂಜಿನಿಯರ್ ಬಿ.ಬಿ. ರಾಮಪುರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಮೇಯರ್ ಶ್ರೀಮತಿ ವರ್ಷಾ ರಾಜೀವ್ ಜಾನೆ, ಚಿಂತಕ ಆರ್.ಕೆ. ಹುಡಗಿ, ನಿವೃತ್ತ ನ್ಯಾಯಾಧೀಶ ಜಿ.ಕೆ. ಗೋಖಲೆ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಶ್ರೀಮತಿ ಚಂದ್ರಿಕಾ ಪರಮೇಶ್ವರ್, ನ್ಯಾಯವಾದಿ ಬಸಣ್ಣ ಸಿಂಗೆ, ಮುಖಂಡರಾದ ನಾಗರಾಜ ಗುಂಡಗುಟ್ಟಿ ಹಾಗೂ ಶ್ಯಾಮ್ ನಾಟೀಕಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಅರುಣ್ ಜೋಳದಕೂಡ್ಲಿಗಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎ.ಬಿ. ಹೊಸಮನಿ, ದತ್ತಾತ್ರೇಯ ಇಕ್ಕಳಕಿ, ಬಿ.ಬಿ. ರಾಮಪುರ, ಅಲ್ತಾಫ್ ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button