ಶಿಕ್ಷಣಸಾಧಕರು

ಕಲಬುರಗಿಯಲ್ಲಿ ಜುಲೈ 19 ರಂದು ಜಿಲ್ಲಾ ಶಿಕ್ಷಕರ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಶಿಕ್ಷಕ ಸಾಹಿತಿ ರಾಜೇಂದ್ರ ಕೋರಬ ಝಳಕಿ ರವರ ಪರಿಚಯ

ಮೂರು ದಶಕಗಳ ಶಿಕ್ಷಕ ಸೇವೆ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ, ನೂರಾರು ವಚನಗಳು ಹಾಗೂ ಅನೇಕ ಕೃತಿಗಳ ಮೂಲಕ ಗುರುತಿಸಿಕೊಂಡ ಹಿರಿಯ ಸಾಹಿತಿ ಜುಲೈ 19ರ ಜಿಲ್ಲಾ ಶಿಕ್ಷಕರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು

ವೃತ್ತಿಯಿಂದ ಪ್ರೌಢ ಶಾಲಾ ಶಿಕ್ಷಕರಾಗಿರುವ ರಾಜೇಂದ್ರ ಝಳಕಿ ಕೋರಬಾ ಅವರು ಪ್ರವೃತ್ತಿಯಿಂದ ಸಾಹಿತಿಗಳಾಗಿ
ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಿರಿಯ ಅನುಭವಿ ಶಿಕ್ಷಕ ಸಾಹಿತಿಗಳು. ಸೌಮ್ಯ ಸಾದಾ ಸೀದಾ ಸ್ವಭಾವದವರಾದ
ರಾಜೇಂದ್ರ ಝಳಕಿ ಕೋರಬಾ ಅವರು ಆಳಂದ ತಾಲುಕಿನ ಝಳಕಿ ಬಿ ಗ್ರಾಮದವರು.
ತಂದೆ ಬಸವಣ್ಣಪ್ಪ ಕೋರಬಾ
ತಾಯಿ ಚಂದ್ರಭಾಗ ಇವರ ಉದರದಲ್ಲಿ ಝಳಕಿ (ಬಿ) ಗ್ರಾಮದಲ್ಲಿ ದಿನಾಂಕ
01/05/1967 ಜನಿಸಿದರು.
ಐದು ವರ್ಷದರಿದ್ದಾಗಲೇ ತಂದೆಯನ್ನು ಕಳೆದುಕೊಂಡ
ಇವರು ತಾಯಿಯ ಅಶ್ರಯದಲ್ಲಿಯೇ ಬೆಳೆದು ಕಷ್ಟ ಪಟ್ಟು ಓದು ಮುಂದುವರೆಸಿದರು .ಒಂದರಿಂದ ನಾಲ್ಕನೇ ತರಗತಿಯವರೆಗೆ ಹುಟ್ಟೂರಿನಲ್ಲಿ, ಐದರಿಂದ ಏಳನೆಯ ತರಗತಿಯವರೆಗೆ ಮದಗುಣಕಿ ಎಂಟರಿಂದ ಹತ್ತನೇ ತರಗತಿಯ ವರೆಗೆ ಮಾದನ ಹಿಪ್ಪರಗಾದಲ್ಲಿ ಓದಿದರು. ಮನೆಯಲ್ಲಿ ತಾಯಿ ಮಾಡುತ್ತಿರುವ ಬಳೆ ವ್ಯಾಪಾರದ ಕೆಲಸದಲ್ಲಿ ಸಹಾಯ ಮಾಡುತ ಮತ್ತು ತಮ್ಮನೊಂದಿಗೆ ಹೊಲದ ಕೆಲಸವೂ ಮಾಡುತ ಹತ್ತನೇ ಮುಗಿಸಿದ ಇವರು ಈಗಿನ ಬಿಜಾಪುರ ಜಿಲ್ಲೆಯ ಚಡಚಣ ತಾಲುಕಿನ ಹಲಸಂಗಿಯಲ್ಲಿ ಪಿಯುಸಿ ವ್ಯಾಸಂಗ ಮಾಡಿದರು. ನಂತರದಲ್ಲಿ
ಕಲಬುರಗಿ ನಗರದ ನೂತನ ವಿದ್ಯಾಲಯದಲ್ಲಿ ಬಿ ಎ ಪದವಿ ಪಡೆದರು.ಇಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ಪ್ರೊ.ವಸಂತ ಕುಷ್ಟಗಿ, ಡಾ.ಸ್ವಾಮೀರಾವ ಕುಲ್ಕರ್ಣಿ ಅವರ ಶಿಷ್ಯರಾಗಿ ಅವರಿಂದ ಪ್ರೇರಣೆಯಿಂದ ಪ್ರಭಾವಿತರಾಗಿ ಸಾಹಿತ್ಯ ಕೃಷಿ ಆರಂಭಿಸಿ ಕಾಲೇಜಿನಲ್ಲಿ ನಡೆಯುವ ಅಂತರ ತರಗತಿ ಮಟ್ಟದಲ್ಲಿ ಭಾಗವಹಿಸಿ 40 ಸ್ಪರ್ದಾಳಿಗಳಲ್ಲಿ ಕವಿತಾ ವಾಚನ ಮಾಡಿ ಪ್ರಥಮ ಸ್ಥಾನ ಪಡೆದುಕೊಂಡರು. ಇದೇ ವೇದಿಕೆ ಸಾಹಿತ್ಯ ಕೃಷಿಗೆ ಉತ್ತೇಜನ ನೀಡಿತು.
ಗುಲಬರ್ಗಾ ವಿಶ್ವ ವಿದ್ಯಾಲಯ ಕಲಬುರ್ಗಿಯಲ್ಲಿ ಎಂ ಎ ಪದವಿ.ಕರ್ನಾಟಕ ಮುಕ್ತ ವಿ ವಿ ಮೈಸೂರ ದಿಂದ ಎಂ ಈಡಿ ಪದವಿ ಪಡೆದುಕೊಂಡು ಎರಡ್ಮೂರು ವರ್ಷ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಸರಕಾರಿ ಶಿಕ್ಷಕ ಸೇವೆ
1997 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಚಿಂಚೋಳಿ ತಾಲೂಕಿನಲ್ಲಿ ಸೇವೆ ಆರಂಭಿಸಿದ ಇವರು ನಂತರದಲ್ಲಿ ಆಳಂದ ನಗರದಲ್ಲಿ ತದನಂತರ ಜಿಡಗಾ
ಸಿ ಆರ್ ಸಿ ಆಗಿ ಕಾರ್ಯ ನಿರ್ವಹಿಸಿದರು.2011 ರಲ್ಲಿ
ಪ್ರೌಢ ಶಾಲೆಗೆ ಬಡ್ತಿ ಹೊಂದಿ ಮತ್ತೇ ಚಿಂಚೋಳಿ ತಾಲೂಕಿನ
ಗಡಿಕೇಶ್ವರ ಗ್ರಾಮದಲ್ಲಿ ಅಲ್ಲಿಂದ ಮತ್ತೆ ವರ್ಗಾವಣೆಗೊಂಡ ದಂಗಾ ಪುರದಲ್ಲಿ ಸೇವೆ ಸಲ್ಲಿಸುತ್ತಾ ಈಗ ಕಲಬುರ್ಗಿಯ ರೋಜಾ ಬಡಾವಣೆಯ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸತತ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ತುಮಕೂರು , ದಾರವಾಡ,ಗಳಲ್ಲಿ ರಾಜ್ಯ ಮಟ್ಟದ ತರಬೇತಿಗಳಲ್ಲಿ ಭಾಗವಹಿಸಿ ಕನ್ನಡ ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷರಿಗೆ ತರಬೇತಿ ನೀಡಿದ್ದಾರೆ.ಮಕ್ಕಳಿಗಾಗಿ ಚಿಣ್ಣರ ಅಂಗಳ ಕಲಿಕಾ ಹಬ್ಬ ಗಳಂಥ ಇಲಾಖಾ ಕಾರ್ಯಕ್ರಮಗಳು ಅನುಷ್ಠಾನ ಗೊಳಿಸುವಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಎಸ್ ಎಸ್ ಎಲ್ ಸಿ ಮಕ್ಕಳ ಫಲಿತಾಂಶ ಉತ್ತಮ ರೀತಿಯಲ್ಲಿ ತರಲು ಶ್ರಮಿಸಿದ್ದಕ್ಕಾಗಿ ಶಿಕ್ಷಣ ಇಲಾಖೆಯ ಎಸ್ ಎಸ್ ಎಲ್ ಸಿ ಬೋರ್ಡ್ ವತಿಯಿಂದ ಪ್ರ ಶಂಸನೆಗೆ ಪಾತ್ರರಾಗಿದ್ದಾರೆ.

ಸಾಹಿತಿಯಾಗಿ

ಕಾವ್ಯ ನಾಮ ಕೋರಾ
ವಚನಾಂಕಿತ ಚಂದ್ರರಾಜ ಎಂದು ಗುರುತಿಸಿಕೊಂಡು ತಮ್ಮ ವೈವಿದ್ಯಮಯ
ಹವ್ಯಾಸಗಳ ಮೂಲಕ ಲೇಖನ,ಕವನ,ಸಮಾಜ ಸೇವೆ
ಸಂಘಟನೆ,ಆಶಕ್ತರಿಗೆ ಸಹಾಯ ಮಾಡುವುದು,ವಿದ್ಯಾರ್ಥಿಗಳಿಗಾಗಿ ಹಾಡುಗಳನ್ನು ಹಾಡುತ್ತಾ ಹಾವ ಭಾವದೊಂದಿಗೆ ಪಾಠ ಮಾಡುವುದು,ನಸಿಸಿ ಹೋಗುತ್ತಿರುವ ಜನಪದ ಸಾಹಿತ್ಯ ಉಳಿಸಿ ಬೆಳೆಸುವ ಕಾರ್ಯದ ಜೊತೆಗೆ ಜನಪದ ಶೈಲಿಯಲ್ಲಿ ಆಸಕ್ತಿ ಮೂಡಿಸುವ ಸಾಹಿತ್ಯ ಕೃಷಿ ಮಾಡುವುದು. ಅನೇಕ ಸಂಘ ಸಂಸ್ಥೆಗಳಲ್ಲಿ ಸಂಘದ ಪದಾಧಿಕಾರಿ ಪ್ರತಿನಿಧಿಯಾಗಿ ಸಕ್ರಿಯವಾಗಿ ಭಾಗವಹಿಸುವುದು
ಕೃತಿಗಳು:- ಕಲ್ಲರಳಿನ ಕರುಳು (2000 ಸಾಲಿನಲ್ಲಿ ಕವನ ಸಂಕಲನ)
ಚಿಗುರು ಚೇತನ (2012 ಕವನ ಸಂಕಲನ)
ಬೆಳಸುಗಳು (2023)
ಪ್ರಸ್ತುತ ಸಮಸ್ಯೆಗಳನ್ನು ಕುರಿತು ಬಂಡಾಯದ ರೂಪದಲ್ಲಿ ಬರೆದ ಕೃತಿ ಇದಾಗಿದೆ.
ಅಕ್ಷರ ಅರಿವು ಮಕ್ಕಳಿಗಾಗಿಯೇ ಬರೆದ ಈ ಸಂಕಲನ ಕನ್ನಡೇತರ ಭಾಷಾ ಮಕ್ಕಳಿಗೂ ಕಲಿಯಲು ಈ ಪುಸ್ತಕ ಬಹಳ ಉಪಯುಕ್ತವಾಗಿದೆ, ಮಹತ್ವದ್ದಾಗಿದೆ.
ತಾತಾ (ಮಕ್ಕಳಲ್ಲಿ ಮೌಲ್ಯ ಬೆಳೆಸುವ ಕಿರು ನಾಟಕ 2024) ನೋಡಲು ಈ ನಾಟಕ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಒಳಗಿನ ಸಂದೇಶ ಬಹಳ ಅರ್ಥಪೂರ್ಣವಾಗಿದೆ.ಸಂಸ್ಕಾರ ಸಂಸ್ಕೃತಿಯಂತ ಮೌಲ್ಯಗಳು ಮರೆಯಾಗುತ್ತಿರುವ ಈಗಿನ ಸಂದರ್ಭದಲ್ಲಿ ತಾತನ ಪಾತ್ರ ಮೂಲಕ ಒಳ್ಳೆ ಮೌಲ್ಯದ ಬೀಜಗಳು ಬಿತ್ತುವ ಕೆಲಸ ತಾತ ಕೃತಿಯಲ್ಲಿ ಕಾಣಬಹುದು.
ನೀಲಕಂಠ ಅಭಿನಂದನ ಗ್ರಂಥದ ಪ್ರಧಾನ ಸಂಪಾದಕ(2024) ನೀಲಕಂಠ ಗ್ರಂಥ ಹೊರ ತರಲಾಗಿದೆ.
ಅರಿವೆ ಗುರು ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಕಲಬುರಗಿ ಸಹಯೋಗದೊಂದಿಗೆ ಪ್ರತಿಭಾವಂತ ಶಿಕ್ಷಕರು ಬರೆದ ಕವಿತೆಗಳು ಸಂಕಲನಿಸಿ ಆರಿವೇ ಗುರು ಪುಸ್ತಕದ ಸಂಪಾದನಾ ಮಂಡಳಿಯ ಸದಸ್ಯರಾಗಿ ಕೃತಿ ಹೊರ ತರಲಾಯಿತು
ಆದುನಿಕ ವಚನಗಳು ಪ್ರಕಟ:- ಚಂದ್ರಾರಾಜ ಎನ್ನುವ ವಚನಾಂಕಿತದಲ್ಲಿ ಸುಮಾರು 300 ಕಿಂತಲೂ ಹೆಚ್ಚು ವಚನಗಳು ಬರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಮಠದ ಮೂಲಕ ರಾಜ್ಯ ಮಟ್ಟದಲ್ಲಿ ಪ್ರಕಟವಾದ ವಚನ ಓಂಕಾರ ಕೃತಿಯಲ್ಲಿ ಇವರ ವಚನಗಳು ಪ್ರಕಟವಾಗಿವೆ.
ಆಗಿನ ಕನಕಪುರ ತಾಲುಕಿನ ಕನ್ನಡ ಸಾಹಿತ್ಯ ಸಮ್ಮೇಳನದ ವಚನ ಪ್ರಸಾದ ಪುಸ್ತಕದಲ್ಲಿ ವಚನಗಳು ಪ್ರಕಟವಾಗಿವೆ.
ಬೀದರಿನಲ್ಲಿ ಪ್ರಕಟವಾದ ವಚನಾಂಜಲಿ ಪುಸ್ತಕದಲ್ಲಿ ವಚನಗಳು ಪ್ರಕಟ ಭಾಲ್ಕಿ ಅಪ್ಪವರಿಗೆ 75 ವರ್ಷಗಳು ತುಂಬಿದ ಶುಭ ಸಂದರ್ಭದಲ್ಲಿ ಕೃತಿಯಲ್ಲಿ ಇವರ ವಚನಗಳು ಪ್ರಕಟವಾಗಿವೆ.
ಲೇಖನಗಳು ಪ್ರಕಟ:-
*ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಚನಕಾರ ಭೋಗಣ್ಣನ ಬಗ್ಗೆ ಬರೆದ ಲೇಖನ
ಸಂಯುಕ್ತ ಕರ್ನಾಟಕದಲ್ಲಿ ಸದ್ಗುರು ರೇವಣಸಿದ್ದೇಶ್ವರ ಕುರಿತು ಮತ್ತು ಶರಣ ಭೋಗೇಶ್ವರ ಕುರಿತು ಬರೆದ ಲೇಖನ ಮತ್ತು ಕವನ
ವಿಜಯವಾಣಿಯಲ್ಲಿ ಕವನಗಳು ಪ್ರಕಟ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕವನ ಪ್ರಕಟ ಹಿಂದಿನ ಸ್ಥಳೀಯ ಪತ್ರಿಕೆಗಳಾದ, ಶಾಸನ, ಗ್ರಿನೊಬಲ್ಸ್ ,ಚಿಂತಕ ,ಉದಯದಯ ವಾಣಿ ಪತ್ರಿಕೆಗಳಲ್ಲಿ ಹಲವು ಲೇಖನಗಳು.
ಇಂದಿನ ಕಲ್ಯಾಣ ಕಹಳೆ ಮಾಸ ಪತ್ರಿಕೆಯಲ್ಲಿ ಸೂರ್ಯ ನಗರಿ ಕಲಬುರಗಿ ಕುರಿತು ಲೇಖನ
ಕಲ್ಯಾಣ ಚೇತನ ಮತ್ತು ಪ್ಯಾಸೆನ್ ಪೀಪಲ್ಸ್ ದಿನ ಪತ್ರಿಕೆಗಳಲ್ಲಿ ಲ ಲೇಖನ ಕವನಗಳು ಪ್ರಕಟ
ಹೈದ್ರಾಬಾದ ಸುವರ್ಣ ಮಹೋತ್ಸವದ ಅಂಗವಾಗಿ ಕಲಬುರಗಿ ಜಿಲ್ಲೆಯ ಕುರಿತು ಬರೆದ ಲೇಖನ ಬಂದು ಎನ್ನುವ ಮಾಸ ಪತ್ರಿಕೆಯಲ್ಲಿ ಪ್ರಕಟ
ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಶಿಕ್ಷಕರ ಕವಿ ಸಮ್ಮೇಳನದಲ್ಲಿ ಕವನ ವಾಚನ
ಕಲಬುರಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ
ಮೈಸೂರಿನಲ್ಲಿ ನಡೆದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಚುಟುಕು ಕಾವ್ಯ ವಾಚನ
ಅಫಜಲಪುರ ತಾಲೂಕಿನಲ್ಲಿ ನೇತ್ರ ಶಾಸ್ತ್ರ ಚಿಕಿತ್ಸೆಯಲ್ಲಿ ಸ್ವಯಂ ಸೇವಕ ಸೇವೆ ನಾಡಿನ ಹಲವಾರು ಹಿರಿಯ ಸಾಧಕರ
ಅಭಿನಂದನ ಗ್ರಂಥಗಳಿಗೆ ಲೇಖನ, ಹಲವು ಗ್ರಂಥಗಳಿಗೆ
ವ್ಯಕ್ತಿ ವಿಶೇಷ ಲೇಖನ,ಯುವ ಸಾಹಿತಿಗಳ ಕೃತಿಗೆ ಬೆನ್ನುಡಿ ಮುನ್ನುಡಿ ಬರೆದಿದ್ದಾರೆ.
ಆಕಾಶವಾಣಿ:- ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಸ್ವರಚಿತ ಕವನ ವಾಚನ,ಚರ್ಚಾ ಕಾರ್ಯಕ್ರಮ,ಮತ್ತು ಅನೇಕ ಬೆಳಗಿನ ಚಿಂತನೆಗಳು ಪ್ರಸಾರ
ದೂರದರ್ಶನದಲ್ಲಿ ಯುಗಾದಿ ಹಾಸ್ಯ ಕವಿತೆ ವಾಚನೆ
ಝಳಕಿ ಬಿ ಗ್ರಾಮದ ಜನಪದ ಮಹಿಳಾ ಕಲಾವಿದರಿಗೆ ಆಕಾಶವಾಣಿ ಕಲಬುರ್ಗಿಯಲ್ಲಿ ಜನಪದ ಹಾಡು ಹಾಡುವ ಅವಕಾಶ ಕಲ್ಪಿಸಿ ಕೊಡುವ ಪ್ರಯತ್ನ ಆಳಂದ ತಾಲೂಕಾ ನ್ಯಾಯಾಲದಿಂದ ಝಳಕಿ ಬಿ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ ಮಾಡಿಸಿದ್ದಾರೆ.
1988 ರಲ್ಲಿ ಖ್ಯಾತ ಸಾಹಿತಿ ಮತ್ತು ಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾದ ಪ್ರೊ.ಜಿ ಎಸ್ ಸಿದ್ಧಲಿಂಗಯ್ಯ ನವರ ಸಮ್ಮುಖದಲ್ಲಿ ನೂತನ ವಿದ್ಯಾ (NV) ಸಂಸ್ಥೆಯಲ್ಲಿ ಕವನ ವಾಚನ)
1992 ರಲ್ಲಿ ಬಿಜಾಪುರ ಜಿಲ್ಲೆಯ ಬಿಜಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಗೆ ವಾಚನಕ್ಕೆ ನನ್ನ ಕವಿತೆ ಆಯ್ಕೆ
1993 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಿಂದ ಪ್ರಕಟ ಆಗುವ ಬೆಳಕಿಂಡಿ ಮಾಸ ಪತ್ರಿಕೆಯಲ್ಲಿ ಕವನ ಪ್ರಕಟ
1996 ರಲ್ಲಿ ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಮಂಗಳ ಕಲಾ ಸಾಹಿತ್ಯ ವೇದಿಕೆ ವತಿಯಿಂದ ರಾಜ್ಯ ಮಟ್ಟದ ಕವನ ವಾಚನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
1998 ರಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ವತಿಯಿಂದ ಪ್ರಶಂಸನ ಪತ್ರ
1999 ರಲ್ಲಿ ತಾಲುಕು ಚಿಂಚೋಳಿಯಲ್ಲಿ ಕಾರ್ಗಿಲ್ ಕವಿಗೋಷ್ಠಿ
2000 ರಲ್ಲಿ ಮನುಕುಲ ಕಲ್ಯಾಣ ಟ್ರಾಷ್ಟ್ ಮತ್ತೀ ಮೂಡ ಚಿತ್ತಾಪುರ ಇವರಿಂದ ಸನ್ಮಾನ
2000 ರಲ್ಲಿ ಖ್ಯಾತ ಸಮನ್ವಯ ಕವಿ ಚೆನ್ನವೀರ ಕಣವಿ ಮತ್ತು ಜಾನಪದ ವಿದ್ವಾಂಸ ಮಲ್ಲಿಕಾರ್ಜುನ ಲಠ್ಠೆ ಅವರಿಂದ ಪ್ರಶಂಸನ ಪತ್ರ
2002 ರಲ್ಲಿ ಕಲಬುರಗಿ ಆಕಾಶವಾಣಿಯಿಂದ ಕಲ್ಲರಲಿನ ಕರುಳು ಪುಸ್ತಕ ಪರಿಚಯ
2002 ರಲ್ಲಿ ಗಡಿ ಭಾಗ ಮಾದನ ಹಿಪ್ಪರಗಾದಲ್ಲಿ ನಡೆದ ಯುವ ಕವಿ ಗೋಷ್ಠಿಯ ಅಧ್ಯಕ್ಷತೆ
2003 ರಲ್ಲಿ ಆಳಂದದಲ್ಲಿ ವಿದ್ಯಾರ್ಥಿಗಳಿಗಾಗಿ ಬೇಸಿಗೆಯ ಚಿಣ್ಣರ ಅಂಗಳ ಕವಿಗೋಷ್ಠಿ ಏರ್ಪಾಡ ಮತ್ತು ನಿರೂಪಣೆ
2004 ರಲ್ಲಿ ಆಳಂದ ತಾಲೂಕಿನ ಶಿಕ್ಷಕರಿಗಾಗಿ ಸಹ ಚಟುವಟಿಕೆ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ
2005 ರಲ್ಲಿ ಆಳಂದದಲ್ಲಿ ಸಾಕ್ಷರತಾ ಸಮಿತಿವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ
2005 ರಲ್ಲಿ ಆಳಂದ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಲಹಾ ಸಮಿತಿ ಸದಸ್ಯ ಸೇವೆ
2008 ರಲ್ಲಿ ಝಳಕಿ ಬಿ ಗ್ರಾಮದಲ್ಲಿ ಆಳಂದ ತಾಲುಕು ನ್ಯಾಯಾಲಯದಿಂದ ಗ್ರಾಮೀಣ ಜನರಿಗೆ ನ್ಯಾಯ ಅರಿವು ಕಾರ್ಯಕ್ರಮಕ್ಕೆ ಸಹಕಾರ ಮತ್ತು ಕಾರ್ಯಕ್ರಮದ ನಿರೂಪಣೆ
2008 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲುಕಿನ ಅಖಿಲ ಶರಣ ಸಾಹಿತ್ಯ ಸಂಯುಕ್ತ ಆಶ್ರಯದಲ್ಲಿ ಗಡಿ ಜಾಗೃತ ಸಮಾವೇಶದಲ್ಲಿ ಕವನ ವಾಚನ
2008 ರಲ್ಲಿ ಕನ್ನಡ ಸಂಸ್ಕೃತ ಇಲಾಖೆ ಕಲಬುರಗಿ ಇವರ ವತಿಯಿಂದ ನಡೆದ ಸಂಗೀತ ಸೌರಭ ಕಾರ್ಯಕ್ರಮ ಝಳಕಿ ಬಿ ಗ್ರಾಮದಲ್ಲಿ ನಡೆಸಲು ವ್ಯವಸ್ಥೆ ನಿರೂಪಣೆ
2008 ರಲ್ಲಿ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷನಾಗಿದ್ದಾಗ
1 ರಿಂದ 10 ನೇ ತರಗತಿಯ ಮಕ್ಕಳಿಗೆ ವಿಶೇಷ ಕವಿಗೋಷ್ಠಿ
2008 ರಲ್ಲಿ ಆಳಂದ ಘಟಕದ ಮಕ್ಕಳ ಸಾಹಿತ್ಯ ವೇದಿಕೆಯಿಂದ ವಚನ ಗಾಯನ ಕಂಠ ಪಾಠ ಸ್ಪರ್ಧೆ
2008 ರಿಂದ 2015 ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾದನ ಹಿಪ್ಪರಾಗ ವಲಯದ ಗೌರವ ಕೋಶಾಧ್ಯಕ್ಷ
2009 ರಲ್ಲಿ ಆಳಂದದಲ್ಲಿ ವಿವಿಧ ಶಾಲಾ ಮಕ್ಕಳಿಗಾಗಿ ಮಕ್ಕಳ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿವಿಧ ಶಾಲಾ ಮಕ್ಕಳಿಗೆ ಕರೆ ತರುವ ಜವಾಬ್ದಾರಿ ಬಿಇಒ ಕಾರ್ಯಾಲಯದಿಂದ ವಹಿಸಲಾಗಿದೆ
2010 ರಲ್ಲಿ ಆಳಂದದ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕವಿ ನೆನಹೂ ಕವಿಗೋಷ್ಠಿಯಲ್ಲಿ ಕಾರ್ಯಕ್ರಮದಲ್ಲಿ ಕವನ ವಾಚನ
2011 ರಲ್ಲಿ ಚಿತ್ರದುರ್ಗ ಸಿರಿಗನ್ನಡ ಪ್ರಕಾಶನ ವತಿಯಿಂದ ಕನ್ನಡ ರತ್ನ ಪ್ರಶಸ್ತಿ
2014 ರಲ್ಲಿ ಮಹಾರಾಷ್ಟ್ರದ ಮೈಂದರಗಿಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಯು ಆರ್ ಅನಂತಮೂರ್ತಿಯವರ ಜನ್ಮ ದಿನದ ಅಂಗವಾಗಿ ಅನಂತಮೂರ್ತಿಯವರ ಕುರಿತು ಉಪನ್ಯಾಸ
2015 ರಲ್ಲಿ ಶಿವಮೊಗ್ಗದಲ್ಲಿ ಕೋಲಿ ಗಂಗಾಮತ ಸಮಾಜದ ಗಂಗಾ ದ್ವನಿ ಪುಸ್ತಕದ ಸಂಪಾದಕ ಮಂಡಳಿಯ ಸದಸ್ಯ ರಾಗಿದ್ದ ಪ್ರಯುಕ್ತ ಸನ್ಮಾನ
2016 ರಿಂದ 2021 ರವರೆಗೆ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ವಲಯದ ಗೌರವ ಕಾರ್ಯದರ್ಶಿಯಾಗಿ
2018 ರಲ್ಲಿ ಆಳಂದ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಜಿಡಗ ಘಟಕದ ಅಧ್ಯಕ್ಷ
2018 ರಲ್ಲಿ ಸೇಡಮ್ ತಾಲುಕಿನ ಮೇದಕ್ ನ ಚೆನ್ನಕೇಶವ ಉತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಶಸ್ತಿ
2018 ರಲ್ಲಿ ಧಂಗಾಪುರ ಶಾಲೆಯ sslc ವಾರ್ಷಿಕ ಪರೀಕ್ಷೆ ಫಲಿತಾಂಶ ಶೇಕಡಾ 97 ಬಂದ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತರಿಂದ ಪ್ರಶಂಸನಿಯ ಪತ್ರ
2018 ರಲ್ಲಿ ಬಿಜಾಪುರ ಜಿಲ್ಲೆಯ ಆಯೇರಿ ಸಂಸ್ಥಾನದ ವತಿಯಿಂದ ರಾಷ್ಟ್ರೀಯ ಬಸವ ರತ್ನ ಪ್ರಶಸ್ತಿ ಪುರಸ್ಕೃತ
2019 ರಲ್ಲಿ ರಾಯಚೂರಿನ ಮಂತ್ರಾಲಯದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವನ ವಾಚನ
2022 ರಿಂದ 2027 ತನಕ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಕಲಬುರಗಿ ಜಿಲ್ಲಾ ಘಟಕದಲ್ಲಿ ಸಹ ಕಾರ್ಯದರ್ಶಿಯಾಗಿ ನಾಮ ನಿರ್ದೇಶನ
2023 ರಲ್ಲಿ ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
2024 ರಲ್ಲಿ ಪರಿವರ್ತನಾ ಪ್ರತಿಷ್ಠಾನ ಕಲಬುರಗಿ ಘಟಕದ ವತಿಯಿಂದ ಸನ್ಮಾನ
2024 ರಲ್ಲಿ ಜೇವರಗಿ ತಾಲೂಕಿನಲ್ಲಿ ನಡೆದ ರಾಜ್ಯ ಮಟ್ಟದ ಗಮಕ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಗಮಕ ಲೇಖನ
2024 ರಲ್ಲಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಕವನ ವಾಚನ
2024 ರಲ್ಲಿ ಕಲಬುರಗಿ ನಗರದ ಮಾತಾ ಮಾಣಿಕೇಶ್ವರಿ ಬಡಾವಣೆಯಲ್ಲಿ ದಸರಾ ಕವಿಗೋಷ್ಠಿ ಆಯೋಜನೆ ಮಾಡಲಾಯಿತು
2024 ರಲ್ಲಿ ಕನ್ನಡ ಸಾಹಿತ್ಯ ಸಂಘ ಜಗತ್ ವೃತ್ತ ಕಲಬುರ್ಗಿಯಲ್ಲಿ ದಸರಾ ಕವಿಗೋಷ್ಠಿಯಲ್ಲಿ ಕವನ ವಾಚನ
2024 ರಲ್ಲಿ ಬರಹಗಾರರ ಬಳಗ ಜಿಲ್ಲಾ ಘಟಕ ಕಲಬುರಗಿಯವರವತಿಯಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಸನ್ಮಾನ
2026 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ವತಿಯಿಂದ ಕವಿ ಶ್ರೇಷ್ಠ ಪ್ರಶಸ್ತಿ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ವಿದ್ಯಾರ್ಥಿಗಳಿಗಾಗಿ
ಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ,ವಾಚನ ಕಂಠ ಪಾಠ ಸ್ಪರ್ಧೆ,ನಾಟಕ,ಕಥೆ,ಹಾಡು
*ವಿದ್ಯಾರ್ಥಿಗಳಿಗಾಗಿ ಸುಂದರ ಬರವಣಿಗೆ,ಸ್ವರಚಿತ ಕಥೆ,ಕವನ ಬರೆಸುವುದು
*ಅಂಗವಿಕಲ ಮಕ್ಕಳಿಗೆ ಹಾಡು ಬರೆದು ಹಾಡಿಸಿ ಪ್ರೋತ್ಸಾಹ ನೀಡುವುದು ಅವರಿಗೆ ಮಕ್ಕಳ ದಿನಾಚರಣೆಯ ದಿನ ಸನ್ಮಾನಿಸುವುದು
*ವಿಶೇಷ ತರಗತಿ ತಗೆದುಕೊಂಡು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಓದುವಂತೆ ಮಾಡಿ ಕಲಿಕೆಯಲ್ಲಿ ಪ್ರಗತಿ ಸಾಧಿಸುವುದು
*ಫಲ್ಸ್ ಫೋಲಿಯೋ,ಚಿಕನ್ ಗುನ್ಯಾ ಶೌಚಾಲಯ ಬಗ್ಗೆ ಮಕ್ಕಳಲ್ಲಿ ಮತ್ತು ಸಮಾಜದಲ್ಲಿ
ಅರಿವು ಮೂಡಿಸಲು ಪ್ರಭಾತ್ ಫೇರಿ ಮಾಡಿಸುವುದು
ಕರೂನಾದಲ್ಲಿ ಪೋನ್ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ.

ವಿವಿಧ ಸಂಘಟನೆಗಳಲ್ಲಿ
*ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಉಪಾಧ್ಯಕ್ಷ
*ಕರ್ನಾಟಕ ಮಕ್ಕಳ ಸಾಹಿತ್ಯ ವೇದಿಕೆ ಆಳಂದ ಘಟಕದ ಅಧ್ಯಕ್ಷ
*ಕರ್ನಾಟಕ ಸರಕಾರಿ ಬಡ್ತಿ ಶಿಕ್ಷಕರ ಸಂಘದ ಆಳಂದ ತಾಲುಕು ಘಟಕದ ಅಧ್ಯಕ್ಷ
*ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯ.

*ಕಲಬುರಗಿ ತಾಲುಕಿನ ದಕ್ಷಿಣ ವಿಧಾನ ಸಭಾ ಮತಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ
*ಮಾದನ ಹಿಪ್ಪರಗಾದ ಕನ್ನಡ ಸಾಹಿತ್ಯ ಪರಿಷತ್ತಿನ ವಲಯ ಘಟಕದ ಕೋಶಾಧ್ಯಕ್ಷ
*ಕನ್ನಡ ಸಾಹಿತ್ಯ ಪರಿಷತ್ತಿನ ಆಳಂದ ತಾಲೂಕದ ಸಲಹಾ ಸಮಿತಿ ಸದಸ್ಯ
ಕರ್ನಾಟಕ ರಾಜ್ಯ ಬಡ್ತಿ ಶಿಕ್ಷಕರ ಸಂಘದ ಕಲಬುರಗಿ ತಾಲೂಕ ಘಟಕದ ಅಧ್ಯಕ್ಷ.

 ಸಂಘ ಸಂಸ್ಥೆಗಳಿಂದ ಸನ್ಮಾನ

*ಬಿಜಾಪುರ ಜಿಲ್ಲೆಯ ಆಯೆರಿ ಸಂಸ್ಥಾನದ ವತಿಯಿಂದ ರಾಷ್ಟ್ರೀಯ ಬಸವ ರತ್ನ ಪ್ರಶಸ್ತಿ
*ಸೇಡಂ ತಾಲೂಕಿನ ಮೆದಕ್ ದಲ್ಲಿ ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಶಸ್ತಿ
*ಮೈಸೂರಿನಲ್ಲಿ ಗುರು ಭೂಷಣ ಪ್ರಶಸ್ತಿ
*ಉರ್ದು ಆಕಾಡೆಮಿ ಯಾದಗಿರಿ ಇವರಿಂದ ಆದರ್ಶ ಶಿಕ್ಷಕ ಪ್ರಶಸ್ತಿ
*ಕಲಬುರಗಿ ಉತ್ತರ ವಲಯದ ರೋಜಾ ತೈನ್ ಉರ್ದು ಕ್ಲಸ್ಟ್ ರಿನ ಮಕ್ಕಳ ಪ್ರತಿಭಾ ಕಾರಂಜಿಯಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ
*ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ರಾಜ್ಯೋತ್ಸವ ಪ್ರಶಸ್ತಿ
ಕಲಬುರಗಿ ಜಿಲ್ಲಾ ರೋಟರಿ ಕ್ಲಬ್ ವತಿಯಿಂದ ನ್ಯಾಷನಲ್ ಬಿಲ್ಡರ್ ಅವಾರ್ಡ್
*೨೦೨೫ ರಲ್ಲಿ ಕಲಬುರಗಿಯಲ್ಲಿ ನಡೆದ ಜಿಲ್ಲಾ ೨೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರ ಸನ್ಮಾನದಲ್ಲಿ ಸನ್ಮಾನ
*ಇನ್ನೂ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರು.

ಹೀಗೆ ಸುದೀರ್ಘವಾಗಿ ಶಿಕ್ಷಕ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ,ಸಂಘ ಸಂಸ್ಥೆಗಳಲ್ಲಿ ಸಾಕಷ್ಟು ಕೃಷಿ ಮಾಡಿದ ಮಾಡುತ್ತಿರುವ ಇನ್ನೂ ಒಂಬ ತ್ತೇ ತಿಂಗಳಲ್ಲಿ ವೃತ್ತಿಯಿಂದ ನಿವೃತಿಯಾಗುತ್ತಿರುವ ರಾಜೇಂದ್ರ ಝಳಕಿ ಕೋರಬಾ ಅವರನ್ನು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕಲಬುರಗಿಯವರು ಗುರುತಿಸಿ ಜಿಲ್ಲೆಯ ವತಿಯಿಂದ ಪ್ರಪ್ರಥಮವಾಗಿ ನಡೆಯುತ್ತಿರುವ ಶಿಕ್ಷಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಇಡೀ ಶಿಕ್ಷಕ ಬಳಗಕ್ಕೆ ಈ ಮೂಲಕ ಗೌರವಿಸಿದಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button