ಶಿಕ್ಷಣ

ಶಿಕ್ಷಕರ ಸಿಇಟಿ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಜು.26ರಂದು ಉಚಿತ ಕಾರ್ಯಾಗಾರ

ಎಚ್‌ಎಸ್‌ಟಿಆರ್, ಜಿಪಿಎಸ್‌ಟಿಆರ್, ಪಿಎಸ್‌ಟಿಆರ್, ಕೆಇಎಸ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗಳ ಮಾರ್ಗದರ್ಶನ

ವಿನ್ನರ್ ಹಾಗೂ ಸ್ಪರ್ಧಾ ಜೀನಿಯಸ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ನಗರದ ತಾಯಿ-ಮಗು ವೃತ್ತ ಸಮೀಪದ ನರ್ಚರ್ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರದಲ್ಲಿ ಜುಲೈ 26ರಂದು ಶಿಕ್ಷಕರ ಸಿಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಚಿತ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕೇಂದ್ರದ ನಿರ್ದೇಶಕಿಯರಾದ ಪೂಜಾ ಎಚ್. ಪಾಟೀಲ ಹಾಗೂ ಮಹಾದೇವಿ ಎಂ. ಬುಕ್ಕಾ ತಿಳಿಸಿದ್ದಾರೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯುವ ಕಾರ್ಯಾಗಾರದಲ್ಲಿ ಎಚ್‌ಎಸ್‌ಟಿಆರ್ (HSTR), ಜಿಪಿಎಸ್‌ಟಿಆರ್ (GPSTR), ಪಿಎಸ್‌ಟಿಆರ್ (PSTR), ಕೆಇಎಸ್ ಶಿಕ್ಷಕರ ನೇಮಕಾತಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಕುರಿತು ಸಮಗ್ರ ಮಾರ್ಗದರ್ಶನ ನೀಡಲಾಗುತ್ತದೆ.

ಕಾರ್ಯಾಗಾರದಲ್ಲಿ ಧಾರವಾಡದ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿಜಯಕುಮಾರ್ ಎಂ.ವಿ. (ಮನೋವಿಜ್ಞಾನ ಹಾಗೂ ಇಂಗ್ಲಿಷ್), ಬಸವರಾಜ ಜನಕಟ್ಟಿ (ಬೌದ್ಧಿಕ ಸಾಮರ್ಥ್ಯ ಮತ್ತು ಗಣಿತ) ಹಾಗೂ ಸಂಜಯ ಪಾಟೀಲ (ಅರ್ಥಶಾಸ್ತ್ರ) ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ಜಿಲ್ಲೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಈ ಉಚಿತ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಣಿಗೆ 8970850873 ಅಥವಾ 9902580095 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button