ಜಿಲ್ಲಾಸುದ್ದಿ

ಎಎನ್ ದೇಸಾಯಿ ಪದವಿ ಕಾಲೇಜಿನಲ್ಲಿ ಸೆ.27ರಂದು ಸ್ವಾಗತ ಸಮಾರಂಭ, ನೇತ್ರದಾನ ಶಿಬಿರ

ಕಲಬುರಗಿ, ಸೆ.26: ನಗರದ ನ್ಯೂ ಜೇವರ್ಗಿ ರಸ್ತೆಯಲ್ಲಿರುವ ಕೊಠಾರಿ ಭವನದಲ್ಲಿ ಸೆ.27ರಂದು ಬೆಳಿಗ್ಗೆ 9.30ಕ್ಕೆ ಎಎನ್ ದೇಸಾಯಿ ಪದವಿ ಮಹಾವಿದ್ಯಾಲಯದ ಬಿಎ, ಬಿಎಸ್ಸಿ ಹಾಗೂ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ನೇತ್ರದಾನ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂದೀಪ್ ದೇಸಾಯಿ ಹಾಗೂ ಕಾರ್ಯದರ್ಶಿ ಜಗನ್ನಾಥ ಎಸ್. ನಾಗೂರ್ ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ವಿಜಯವಾಣಿ ಸ್ಥಳೀಯ ಸಂಪಾದಕ ಬಾಬುರಾವ್ ಯಡ್ರಾಮಿ ಹಾಗೂ ಡಾ. ಸಿದ್ದು ಪಾಟೀಲ ಅವರು ಜ್ಯೋತಿ ಬೆಳಗಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಾಹೇಬಗೌಡ ಎಂ. ಪಾಟೀಲ, ಪತ್ರಕರ್ತ ಬಸವರಾಜ ಚಿನಿವಾರ, ಆರ್.ಪಿ. ಜಾಧವ್, ರಾಘವೇಂದ್ರ ಕುಲಕರ್ಣಿ, ಗಣಪತಿ ಪೂಜಾರಿ, ದತ್ತಾತ್ರೇಯ ಪಾಟೀಲ ಹಾಗೂ ಶಂಕರಗೌಡ ಪಾಟೀಲ ಭಾಗವಹಿಸಲಿದ್ದಾರೆ. ಸುರೇಶ್ ಎಂ. ದೇಸಾಯಿ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ಗೌರವಾಧ್ಯಕ್ಷತೆಯನ್ನು ಚಂದ್ರಕಾಂತ ಎನ್. ದೇಸಾಯಿ ವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button