ವಿಠ್ಠಲ್ ಹೇರೂರ ಪ್ರತಿಮೆಗೆ ಪುಷ್ಪಾರ್ಚನೆ ಎಸ್‌ಎಸ್‌ಡಬ್ಲ್ಯೂ ನ್ಯೂಸ್ ಕನ್ನಡ ಬಳಗದಿಂದ ಗೌರವ

ಅಫಜಲಪುರ, ಸೆ.27: ತಾಲ್ಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕ ಹಾಗೂ ಅಭಿನವ ಅಂಬಿಗರ ಚೌಡಯ್ಯ ಎಂದೇ ಗುರುತಿಸಿಕೊಂಡಿದ್ದ ದಿವಂಗತ ವಿಠ್ಠಲ್ ಹೇರೂರ ಅವರ ಶಕ್ತಿ ಕೇಂದ್ರದಲ್ಲಿರುವ ಭವ್ಯ ಪ್ರತಿಮೆಗೆ ಎಸ್‌ಎಸ್‌ಡಬ್ಲ್ಯೂ ನ್ಯೂಸ್ ಕನ್ನಡ ಕಲಬುರಗಿ ಬಳಗದ ವತಿಯಿಂದ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಠ್ಠಲ್ ಹೇರೂರ ಅವರ ಸಹೋದರ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಹೇರೂರ ಅವರು ಎಸ್‌ಎಸ್‌ಡಬ್ಲ್ಯೂ ನ್ಯೂಸ್ ಕನ್ನಡ ಬಳಗದ ವತಿಯಿಂದ ದೇವಲ ಗಾಣಗಾಪುರದ ಯುವಕ, ಸಾಹಿತಿ ಹಾಗೂ ಸಮಾಜ ಸೇವಕ ಮಲ್ಲಿಕ್ ಪಟೇಲ್, ಶಾಹೇಬ್ ಪಟೇಲ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಡಬ್ಲ್ಯೂ ನ್ಯೂಸ್ ಕನ್ನಡದ ಲೋಗೋವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಯುವಕರು ಹಾಗೂ ಎಸ್‌ಎಸ್‌ಡಬ್ಲ್ಯೂ ನ್ಯೂಸ್ ಕನ್ನಡ ಬಳಗದ ಸದಸ್ಯರು ಉಪಸ್ಥಿತರಿದ್ದರು.


