ಜೇವರ್ಗಿಯಲ್ಲಿ ಫ.ಗು. ಹಳಕಟ್ಟಿಯವರ ಜಯಂತ್ಯುತ್ಸವ ಸಂಭ್ರಮ ವಚನ ಸಾಹಿತ್ಯದ ಬುತ್ತಿ ಕೊಟ್ಟ ಫ.ಗು. ಹಳಕಟ್ಟಿ: ನಮೋಶಿ

ಜೇವರ್ಗಿ, ಜು.೩- ಫ.ಗು. ಹಳಕಟ್ಟಿಯವರು ನಮಗೆ ವಚನ ಸಾಹಿತ್ಯದ ಬುತ್ತಿಯನ್ನು ಕಟ್ಟಿಕೊಟ್ಟಿದ್ದಾರೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ ಅವರು ಹೇಳಿದರು.
ಪಟ್ಟಣದಲ್ಲಿ ಜರುಗಿದ ಫ.ಗು. ಹಳಕಟ್ಟಿಯವರ ಜಯಂತ್ಯುತ್ಸವವನ್ನು ಸಜ್ಜನ್ ಕಲ್ಯಾಣ ಮಂಟಪದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಡಾ. ಫ.ಗು. ಹಳಕಟ್ಟಿಯವರ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.ದಿವ್ಯ ಸಾನಿಧ್ಯವನ್ನು ಮರೆಪ್ಪ ಮುತ್ಯಾ ಬಸವಪಟ್ಟಣ ಅವರು ವಹಿಸಿದ್ದರು. ಮಲ್ಲಿಕಾರ್ಜುನ್ ಲೋಣಿ ಅವರು ಗ್ರಂಥ ಬಿಡುಗಡೆ ಮಾಡಿದರು. ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಬಸವಕುಮಾರ್ ಪಾಟೀಲ್ ಅವರು ಹಳಕಟ್ಟಿಯವರ ಜೀವನ ಹಾಗೂ ಸಾಧನೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಪತ್ರಕರ್ತ ಮರೆಪ್ಪ ಬೇಗಾರ, ಸಂಪಾದಕ ಚಂದ್ರಶಾಗೌಡ ಮಾಲಿ ಪಾಟೀಲ್, ವರದಿಗಾರರಾದ ಸುರೇಶ ಹಿರೇಮಠ, ರವಿ ತಳವಾರ್, ರವಿಕುಮಾರ್ ಬೀರನಳ್ಳಿ, ಸಾಗರ್ ನೆಲೋಗಿ ಹಾಗೂ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಕನ್ನಡಾಭಿಮಾನಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ನೀಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭಗವಂತರಾಯ್ ಪಾಟೀಲ್ ಅಂಕಲಗಾ ಅವರು ಸ್ವಾಗತಿಸಿದರು. ರವೀಂದ್ರ ವೈ. ಕೋಳಕೂರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿತಾ ಹಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಹಣಮಂತರಾಯ್ ರಾಂಪೂರೆ ಅವರು ವಂದಿಸಿದರು.
ಇದಕ್ಕೂ ಮೊದಲು ಮಿನಿ ವಿಧಾನಸೌಧದಿಂದ ಸಜ್ಜನ ಕಲ್ಯಾಣ ಮಂಟಪದವರೆಗೆ ಬೃಹತ್ ಮಟ್ಟದಲ್ಲಿ ವಿವಿಧ ಕಲಾತಂಡಗಳೊAದಿಗೆ ವಿಜೃಂಭಣೆಯ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಅಗ್ರೋ ಇನ್ಪುಟ್ಸ್ ಅಧ್ಯಕ್ಷ ದಯಾನಂದ್ ದೇವರಮನಿ ಅವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ತಹಸಿಲ್ದಾರ್ ಮಲ್ಲಣ್ಣ ಯಲಗೋಡ್, ಮಲ್ಲಿಕಾರ್ಜುನ್, ಆಗ್ರೋ ಏಜೆನ್ಸಿಯ ಮಾಲಿಕ ಬಸನಗೌಡ ಎಂ. ಪಾಟೀಲ್ ಬಿರಾಳ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಕೆ. ಬಿರಾದಾರ್, ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ್, ಗೌರವ ಕಾರ್ಯದರ್ಶಿ ಕಲ್ಯಾಣಕುಮರ್ ಸಂಗಾವಿ ಗಂವ್ಹಾರ್, ಶ್ರೀಹರಿ ಕರಕಿಹಳ್ಳಿ, ಸಿದ್ದು ಕೆರೂರ್, ಬಂಗಾರೆಪ್ಪ ಆಡಿನ್ ಕೋಳಕೂರ್, ಚಂದ್ರಶೇಖರ್ ಪಾಟೀಲ್ ಗುಡೂರ್, ರಾಜಶೇಖರಯ್ಯ ಹಿರೇಮಠ್, ಸುರೇಶಕುಮಾರ್ ಹಿರೇಮಠ್ ಮುಂತಾದವರು ಪಾಲ್ಗೊಂಡಿದ್ದರು.
ವಿವಿಧ ಸಾಮಾಜಿಕ ಹೋರಾಟಗಾರರಾದ ರವಿಚಂದ್ರ ಗುತ್ತೇದಾರ್, ಸಂಗಮೇಶ್ ಸಂಕಾಲಿ, ಅನೀಲಕುಮಾರ್ ದೊಡಮನಿ, ಪ್ರಗತಿಪರ ಚಿಂತಕರಾದ ಭಗವಂತ್ರಾಯ ಬೆಣ್ಣೂರ್, ನಿಂಗಣ್ಣ ರದ್ದೆವಾಡಗಿ, ಹಿಂದೂಪರ ಸಂಘಟನೆಗಳಾದ ಮಲ್ಕಣ್ಣ ಹಿರೇಪೂಜಾರಿ, ಆನಂದ್ ದೇಸಾಯಿ, ಸಿದ್ದಲಿಂಗ ಪೂಜಾರಿ ಹಾಗೂ ಅಕ್ಕಮಹಾದೇವಿ ಕದಳಿವನ ವೇದಿಕೆ ಘಟಕದ ಮಹಿಳೆಯರು, ಸಾಹಿತಿಗಳು ಮತ್ತು ವಿದ್ಯಾರ್ಥಿನಿಯರು ಕನ್ನಡದ ಹಾಡುಗಳ ಮೂಲಕ ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು.



