ಜಿಲ್ಲಾಸುದ್ದಿ

ಆಳಂದ್ ಗಲಭೆ ಪ್ರಕರಣ: ಶಾಸಕ ಬಿ.ಆರ್. ಪಾಟೀಲ್ ವಿರುದ್ಧ ಗುತ್ತೇದಾರ್ ಗುಡುಗು

ಕಲಬುರ್ಗಿ, ಜು.೩- ಜಿಲ್ಲೆಯ ಆಳಂದ ಪಟ್ಟಣದ ಆರಾಧ್ಯ ದೈವ ಶ್ರೀ ರಾಘವ ಚೈತನ್ಯ ಶಿವಲಿಂಗ ಪೂಜೆವೇಳೆ ನಡೆದ ಆಳಂದ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವoತೆ ಪ್ರಿಯಾಂಕ್ ಖರ್ಗೆ ಅವರ ಮೂಲಕ ಗೃಹ ಸಚಿವರಿಗೆ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಪತ್ರ ಬರೆದಿದ್ದಾರೆ ಎಂಬ ಆರೋಪದೊಂದಿಗೆ ದಾಖಲೆ ಬಹಿರಂಗವಾಗಿದೆ ಎಂದು ಬಿಜೆಪಿ ಯುವ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಸುಭಾಷ್ ಗುತ್ತೇದಾರ್ ಅವರು ದೂರಿದ್ದಾರೆ.

ಹಿಂದೂಗಳ ಮೇಲೆ ಕಲ್ಲೆಸೆದವರ ಮೇಲಿನ ಪ್ರಕರಣ ವಾಪಸ್ಸು ಪಡೆಯುವ ಮೂಲಕ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದೀರಿ?, ಸಂವಿಧಾನದ ಆಶಯಗಳು ಎಲ್ಲಿಗೆ ಹೋದವು?, ಮನವಿ ಪತ್ರದಲ್ಲಿ ಅಸ್ತಿತ್ವದಲ್ಲಿಲ್ಲದ ಲಿಂಗ ಪೂಜೆ ಅಂತೆ ಬರೆದಿದ್ದಾರೆ ಹಾಗಾದ್ರೆ ೨೦೨೩ರ ಚುನಾವಣೆ ಗೆದ್ದ ನಂತರ ಇದೇ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದು ಯಾವ ತೋರ್ಪಡಿಕೆಗೆ? ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಈ ಹಿಂದೆ ಕೂಡ ರಾಘವ ಚೈತನ್ಯರ ಸಮಾಧಿ ಗುಂಜೋಟಿ ಅಲ್ಲಿದೆ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ನಿಮ್ಮ ಷಡ್ಯಂತ್ರದ ಆಟಗಳನ್ನು ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹರಿಹಾಯ್ದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button