ಚಿತ್ರ ಸುದ್ದಿ

ಸಂಗೀತಕ್ಕೆ ಯಾವುದೇ ಭಾಷೆ, ಜಾತಿ ಮತ್ತು ಧರ್ಮದ ಎಲ್ಲೆಗಳಿಲ್ಲ. ಇದು ಜನರ ಭಾವನೆಗಳನ್ನು ಬೆಸೆಯುವ ಬಹು ದೊಡ್ಡ ಶಕ್ತಿಯುತ ಮಾಧ್ಯಮವಾಗಿದೆ: ತೇಗಲತಿಪ್ಪಿ

ಕಲಬುರಗಿ : ಸಂಗೀತಕ್ಕೆ ಯಾವುದೇ ಭಾಷೆ, ಜಾತಿ ಮತ್ತು ಧರ್ಮದ ಎಲ್ಲೆಗಳಿಲ್ಲ. ಇದು ಜನರ ಭಾವನೆಗಳನ್ನು ಬೆಸೆಯುವ ಬಹು ದೊಡ್ಡ ಶಕ್ತಿಯುತ ಮಾಧ್ಯಮವಾಗಿದೆ. ಶಾಸ್ತ್ರೀಯ ಸಂಗೀತ ಅಥವಾ ಹಿತವಾದ ಜಾನಪದ ಗೀತೆಗಳನ್ನು ಆಲಿಸುವುದರಿಂದ ನಮ್ಮಲ್ಲಿನ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಏಕಾಗ್ರತೆಯೂ ಹೆಚ್ಚಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ವತಿಯಿಂದ ನಗರದ ಕಲಾ ಮಂಡಳದಲ್ಲಿ ಗುರುವಾರ ಹಮ್ಮಿಕೊಂಡ ಜಾನಪದ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾವಿದರ ಸೃಜನಶೀಲತೆಗೆ ನಿರಂತರವಾಗಿ ಪ್ರೋತ್ಸಾಹ ನೀಡಬೇಕಾಗಿದೆ. ಅನೇಕ ಕಲಾವಿದರು ಇಂದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಆದರೂ ಅವರು ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ. ಹನುಮಂತರಾವ ದೊಡ್ಡಮನಿ ಮಾತನಾಡಿ, ಜಾನಪದ ಸಾಹಿತ್ಯವು ಕೇವಲ ಜನಪದರ ಕಥೆಯಷ್ಟೇ ಅಲ್ಲ, ಅದು ಇಡೀ ಕನ್ನಡ ಭಾಷೆ ಮತ್ತು ಶಿಷ್ಟ ಸಾಹಿತ್ಯದ ತಾಯಿ ಬೇರು ಆಗಿದೆ。 ಬಾಯಿಯಿಂದ ಬಾಯಿಗೆ ಹರಿದುಬಂದ ಈ ಮೌಖಿಕ ಪರಂಪರೆ, ಕನ್ನಡ ಸಂಸ್ಕೃತಿಯ ಜೀವನಾಡಿಯಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಬಸವರಾಜ ತೋಟದ ಮಾತನಾಡಿ, ಕಲಾವಿದರಿಗೆ ಅವಕಾಶ ಕೊಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದೆ. ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದರು.

ಹಿರಿಯ ಪತ್ರಕರ್ತ ದೇವೇಂದ್ರಪ್ಪ ಕಪನೂರ, ಹೋರಾಟಗಾರ ದತ್ತು ಭಾಸಗಿ, ಮಲ್ಲಿಕಾರ್ಜುನ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಶರಣಪ್ಪ ಶಿಂಪಿ ಅಧ್ಯಕ್ಷತೆ ವಹಿಸಿದ್ದರು.

ಜಾನಪದ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಸಾದರ ಪಡಿಸಿದ ಕಲಾವಿದರು. ವಿರಗಾಸಿ ಪುರವಂತಿಗೆ. ಶಿವಕುಮಾರ್ ಡಬರಾಬಾದ ತಂಡ. ಶಹನಾಯಿ ಚಂದ್ರಕಾಂತ ಡಿಗ್ಗಿ ತಂಡ. ಜಾನಪದ ಗಾಯನ ಬಸವರಾಜ ಶ್ರೀಂಗೆರಿ ತಂಡ. ಸುಗಮ ಸಂಗೀತ ಸಿದ್ಧಲಿಂಗ ಮಾವೂರ ತಂಡ. ತತ್ವ ಪದ ಗಾಯನ ಮಹಾಂತಪ್ಪ ಕಾಂಬಳೆ ತಂಡ. ಹಂತಿ ಪದ ಮಲ್ಲಪ್ಪ ಎಸ್ ದೊಡ್ಡಿ. ಜಾನಪದ ನ್ರತ್ಯ ಕು.ಸಾನ್ವಿ ಯನಗುಂಟಿ. ಭರತ ನಾಟ್ಯ ಕು. ಅಕ್ಷತಾ ನಂದೂರ.

ವಾದ್ಯ ಸಜಕಾರ

ತಬಲಾ ಸಾತ ಶ್ರೀ ಲಕ್ಷ್ಮಣ ಹೇರೂರ. ಹಾರ್ಮೋನಿಯಂ ಸಾತ ಶ್ರೀಧರ ಹೊಸಮನಿ ನೀಡಿದರು

Related Articles

Leave a Reply

Your email address will not be published. Required fields are marked *

Back to top button