ರಾಜಕೀಯಸಾಹಿತ್ಯ

ಸೋನಿಯಾ ಗಾಂಧಿ ಆತ್ಮಕಥನ ಬಿಡುಗಡೆ ಸಮಾರಂಭದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ ಭಾಗಿ

‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯಲ್ಲಿ ವೈಯಕ್ತಿಕ ಬದುಕು, ಕುಟುಂಬ ಮತ್ತು ದೇಶದೊಂದಿಗಿನ ಬಾಂಧವ್ಯದ ಅನಾವರಣ

ಕಲಬುರಗಿ, ನ.17: ನವದೆಹಲಿಯಲ್ಲಿ ಮಂಗಳವಾರ ನಡೆದ ಶ್ರೀಮತಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಭಾಗವಹಿಸಿದ್ದರು.

ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನ ಕಮಲ್ ಮಹಲ್‌ನಲ್ಲಿ ಸೋನಿಯಾ ಗಾಂಧಿ ಅವರು ರಚಿಸಿರುವ ಆತ್ಮಕಥನದ ಬಿಡುಗಡೆ ಸಮಾರಂಭ ನೆರವೇರಿತು.

ಈ ಸಂದರ್ಭದಲ್ಲಿ ಕೃತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ರಾಧಾಕೃಷ್ಣ ದೊಡ್ಡಮನಿ, ತಮ್ಮ ವೈಯಕ್ತಿಕ ಪಯಣ, ಜೀವನಾನುಭವಗಳು ಹಾಗೂ ಆಲೋಚನೆಗಳನ್ನು ಆತ್ಮಕಥನದ ಮೂಲಕ ಹಂಚಿಕೊಂಡಿರುವ ಸೋನಿಯಾ ಗಾಂಧಿ ಅವರನ್ನು ಅಭಿನಂದಿಸಿದರು.

‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯು ಕುಟುಂಬ, ಅಸ್ಮಿತೆ, ಸಂಬಂಧಗಳು ಹಾಗೂ ಒಂದು ದೇಶ ಮತ್ತು ಅಲ್ಲಿನ ಜನರೊಂದಿಗಿನ ಅವಿನಾಭಾವ ನಂಟನ್ನು ಕಟ್ಟಿಕೊಡುವ ಆತ್ಮೀಯ ಹಾಗೂ ಹೃದಯಸ್ಪರ್ಶಿ ನಿರೂಪಣೆಯಾಗಿದೆ ಎಂದು ಅವರು ಬಣ್ಣಿಸಿದರು.

ಸಾರ್ವಜನಿಕವಾಗಿ ಅಪರೂಪಕ್ಕೆ ಹಂಚಿಕೊಂಡಿರುವ ತಮ್ಮ ಬದುಕಿನ ಹಲವು ಮಜಲುಗಳು ಮತ್ತು ಅನುಭವಗಳನ್ನು ಸೋನಿಯಾ ಗಾಂಧಿ ಅವರು ಅತ್ಯಂತ ಪ್ರಾಮಾಣಿಕತೆ ಹಾಗೂ ಆತ್ಮೀಯತೆಯಿಂದ ಓದುಗರ ಮುಂದಿಟ್ಟಿರುವುದನ್ನು ರಾಧಾಕೃಷ್ಣ ದೊಡ್ಡಮನಿ ವಿಶೇಷವಾಗಿ ಶ್ಲಾಘಿಸಿದರು.

ಮಹತ್ವದ ಆತ್ಮಕಥನದ ಪ್ರಕಟಣೆಗಾಗಿ ಸೋನಿಯಾ ಗಾಂಧಿ ಅವರಿಗೆ ಶುಭಾಶಯ ಕೋರಿದ ಸಂಸದರು, ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಈ ಅರ್ಥಪೂರ್ಣ ಕೊಡುಗೆಯನ್ನು ಮೆಚ್ಚಿಕೊಂಡರು.

Related Articles

Leave a Reply

Your email address will not be published. Required fields are marked *

Back to top button