ಜಿಲ್ಲಾಸುದ್ದಿ

ಸ್ಪೋರ್ಟ್ಸ್ ಹಬ್ಬ: ಈಜು ಸ್ಪರ್ಧೆಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಚಾಲನೆ

ಕಲಬುರಗಿ, ನ.13: ಕಲಬುರಗಿ ಸ್ಪೋರ್ಟ್ಸ್ ಹಬ್ಬದ ಅಂಗವಾಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಈಜುಕೊಳದಲ್ಲಿ ಶುಕ್ರವಾರ ಆಯೋಜಿಸಿದ್ದ ಈಜು ಸ್ಪರ್ಧೆಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಚಾಲನೆ ನೀಡಿದರು.

ನಂತರ ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳದಲ್ಲಿ ವಿವಿಧ ವಿಭಾಗಗಳಲ್ಲಿ ಈಜು ಸ್ಪರ್ಧೆಗಳು ನಡೆದವು. ಕಲಬುರಗಿ ನಗರದ ಸುಮಾರು 100 ಸ್ಥಳೀಯ ಈಜುಗಾರರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಪಿ. ಶ್ರವಣಕುಮಾರ, ಸಹಾಯಕ ಆಯುಕ್ತೆ ರಿತಿಕಾ ವರ್ಮಾ, ಕ್ರೀಡಾ ಹಬ್ಬದ ನೋಡಲ್ ಅಧಿಕಾರಿ ಸಂಗಮೇಶ, ಅಕ್ವಾ ಅಸೋಸಿಯೇಷನ್‌ನ ಭರತ್ ಭೂಷಣ್, ಸ್ಪ್ರೆನ್ಜೋ ಸಂಸ್ಥೆಯ ಪ್ರವೃತ್, ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುಂದರೇಶ, ಸ್ಥಳೀಯ ಈಜು ತರಬೇತುದಾರರಾದ ಮಚೇಂದ್ರ ಠಾಕೂರ, ರೇಣುಕಾ ಬಿರಾದಾರ ಹಾಗೂ ಬ್ಯಾಸ್ಕೆಟ್‌ಬಾಲ್ ತರಬೇತುದಾರ ಪ್ರವೀಣ ಪುಣೆ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button