ಜಿಲ್ಲಾಸುದ್ದಿ

ವಿದ್ಯುತ್ ಅವಘಡದಲ್ಲಿ ಯುವಕ ಸಾವು: ಕುಟುಂಬಕ್ಕೆ ₹5 ಲಕ್ಷ ಪರಿಹಾರದ ಚೆಕ್ ವಿತರಿಸಿದ ಶಾಸಕ

ಬೀದರ್, ನ. 9: ದಕ್ಷಿಣ ವಿಧಾನಸಭಾ ಕ್ಷೇತ್ರದ ಬರೂರು ಗ್ರಾಮದ ರೋಷನ್ ಎಂಬ ಯುವಕ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಯುವಕನ ಕುಟುಂಬಕ್ಕೆ ಜೆಸ್ಕಾಂ ಇಲಾಖೆಯಿಂದ ₹5 ಲಕ್ಷ ಪರಿಹಾರ ಮಂಜೂರಾಗಿದೆ.

ಈ ಹಿನ್ನೆಲೆಯಲ್ಲಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ನಗರದ ಪ್ರತಾಪ ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಮೃತ ಯುವಕನ ತಾಯಿಗೆ ₹5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಮೃತ ಯುವಕನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಶಾಸಕರು, ಮಗನನ್ನು ಕಳೆದುಕೊಂಡ ತಾಯಿಯ ನೋವಿನಲ್ಲಿ ಭಾಗಿಯಾಗಿ, ಕುಟುಂಬಕ್ಕೆ ಧೈರ್ಯ ತುಂಬಿದರು. ವಿದ್ಯುತ್ ಅವಘಡದಿಂದ ಯುವಕನ ಅಕಾಲಿಕ ಸಾವು ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನೊಂದ ಕುಟುಂಬಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಮೂಲಕ ಅಗತ್ಯ ಪರಿಹಾರ ಮತ್ತು ನೆರವು ದೊರೆಯುವುದು ಮುಖ್ಯ ಎಂದು ಹೇಳಿದರು.

ಜೆಸ್ಕಾಂ ಇಲಾಖೆಯಿಂದ ಮಂಜೂರಾದ ಪರಿಹಾರದ ಮೊತ್ತವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮೃತ ರೋಷನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಜೆಸ್ಕಾಂನ ಜೆಇ ಶಶಿರೇಖಾ ಪಾಟೀಲ, ಅಧಿಕಾರಿ ಎಂ.ಡಿ. ಸಯ್ಯದ್, ಅನೀಲಕುಮಾರ ಪನ್ನಾಳೆ, ಶಿವಕುಮಾರ ಸ್ವಾಮಿ, ಬಾಬುರಾವ ಕಾರಬಾರಿ, ದಯಾನಂದ ರೆಡ್ಡಿ, ರಾಜಕುಮಾರ ಪಾಟೀಲ, ಶಿವಶರಣಪ್ಪ ತಗಾರೆ, ದೇವೇಂದ್ರ ಚಾಂಗಳೇರಾ, ಇಂದ್ರಾರೆಡ್ಡಿ, ಉಲ್ಲಾಸ ರೆಡ್ಡಿ, ಸಂತೋಷ, ಶ್ರೀನಿವಾಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button