ಕಲಬುರಗಿಯಲ್ಲಿ ನಾಳೆಯಿಂದ ರಥಸಪ್ತಮಿವರೆಗೆ ಪ್ರತಿ ಭಾನುವಾರ ಜಪಯಜ್ಞ
ಲೋಕಕಲ್ಯಾಣ, ಆರೋಗ್ಯ, ಶಾಂತಿ ಮತ್ತು ಸಮೃದ್ಧಿಗಾಗಿ ಕೋಟಿ ಸೂರ್ಯನಾರಾಯಣ ನಾಮಜಪ ಯಜ್ಞ

ಕಲಬುರಗಿ, ಅ. 30: ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯಾಜ್ಞವಲ್ಕ್ಯ ಭವನದಲ್ಲಿ ಲೋಕಕಲ್ಯಾಣ, ಸಕಲರ ಆರೋಗ್ಯ, ಶಾಂತಿ ಹಾಗೂ ಸಮೃದ್ಧಿಗಾಗಿ ಕೋಟಿ ಸೂರ್ಯನಾರಾಯಣ ನಾಮಜಪ ಯಜ್ಞ ಆಯೋಜಿಸಲಾಗಿದೆ.
ವಿದ್ಯಾ ಕಣವಿರಾಜ ತೀರ್ಥ ಶ್ರೀಪಾದಂಗಳವರ ಕೃಪಾಶೀರ್ವಾದದೊಂದಿಗೆ 2026ರ ನವೆಂಬರ್ 1ರಿಂದ 2027ರ ಫೆಬ್ರುವರಿ 13ರಂದು ನಡೆಯುವ ರಥಸಪ್ತಮಿವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 8 ಗಂಟೆಗೆ ಜಪಯಜ್ಞ ನಡೆಯಲಿದೆ.
“ಓಂ ಶ್ರೀ ಸೂರ್ಯನಾರಾಯಣಾಯ ನಮಃ” ಎಂಬ ಪವಿತ್ರ ಮಂತ್ರದೊಂದಿಗೆ ನಡೆಯುವ ಈ ಜಪಯಜ್ಞದಲ್ಲಿ ಲೋಕಕಲ್ಯಾಣ ಹಾಗೂ ಸರ್ವರ ಒಳಿತಿಗಾಗಿ ಪ್ರಾರ್ಥಿಸಲಾಗುತ್ತದೆ. ಭಕ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಸಮಸ್ತ ಹಿಂದೂ ಬಾಂಧವರು ಜಪಯಜ್ಞದಲ್ಲಿ ಭಾಗವಹಿಸಿ, ಭಗವಾನ್ ಶ್ರೀ ಸೂರ್ಯನಾರಾಯಣ ಹಾಗೂ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಗಾರಂಪಳ್ಳಿ, ಕಾರ್ಯದರ್ಶಿ ರಾಘವೇಂದ್ರ ವಕೀಲ, ಮಾರ್ಗದರ್ಶಕ ಶಾಮಾಚಾರ್ಯ ಬೈಚಬಾಳ, ಉಪಾಧ್ಯಕ್ಷ ಶೇಷಗಿರಿರಾವ್ ಕುಲಕರ್ಣಿ, ಖಜಾಂಚಿ ಅಶೋಕ ಮಳ್ಳಿ ಹಾಗೂ ಸಮಿತಿ ಸದಸ್ಯರಾದ ಭೀಮಸೇನರಾವ್ ಸಿಂಧಗೇರಿ, ವಿನುತ ಜೋಶಿ ಮತ್ತು ಮಾರ್ತಾಂಡ ಕುಲಕರ್ಣಿ ಸೇರಿದಂತೆ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.
