ಗರ್ಬಾ, ದಾಂಡಿಯಾ ನೃತ್ಯದೊಂದಿಗೆ ಭಕ್ತಿ-ಸಂಸ್ಕೃತಿಯ ಸಂಭ್ರಮ

ಬೀದರ್, ಅ.5– ನಗರದ ಜ್ಞಾನಸುಧಾ ವಿದ್ಯಾಲಯ ಸಮೀಪದ ಜಗನ್ನಾಥ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ಅ.18ರಂದು ಸಂಜೆ ಗರ್ಬಾ ಹಾಗೂ ದಾಂಡಿಯಾ ನೃತ್ಯದೊಂದಿಗೆ ರಾಸ್ ಉತ್ಸವ ಆಯೋಜಿಸಲಾಗಿದೆ ಎಂದು ವೆಂಕಟೇಶ್ ಜಾಧವ್ ಹಾಗೂ ಭಕ್ತರಾದ ವಿಶಾಲ್ ಪೋಳ್ ತಿಳಿಸಿದ್ದಾರೆ.
ಸಂಜೆ ಅಂಬಾ ಭವಾನಿ ಮಹಾ ಆರತಿಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಖ್ಯಾತ ಕಲಾವಿದರು ಸಾಂಪ್ರದಾಯಿಕ ಗರ್ಬಾ ಹಾಗೂ ದಾಂಡಿಯಾ ನೃತ್ಯ ಪ್ರದರ್ಶಿಸಲಿದ್ದು, ಪ್ರೇಕ್ಷಕರಿಗೂ ನೃತ್ಯದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ನಂತರ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಇದಾದ ಬಳಿಕ ಜಹೀರಾಬಾದ್ನ ಖ್ಯಾತ ಕೀರ್ತನ್ ಬೀಟ್ಸ್ ತಂಡದಿಂದ ಭಜನೆ, ಜುಗಲ್ಬಂದಿ ಹಾಗೂ ಕೀರ್ತನೆ ಕಾರ್ಯಕ್ರಮ ನಡೆಯಲಿದೆ.
ಭಾರತೀಯ ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಉತ್ಸವ ಆಯೋಜಿಸಲಾಗಿದೆ. ಸಂಪೂರ್ಣ ಸಾಂಪ್ರದಾಯಿಕ ಹಾಗೂ ಭಕ್ತಿಭಾವದ ವಾತಾವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಗರದ ಜನರು ಗರ್ಬಾ, ದಾಂಡಿಯಾ ನೃತ್ಯ, ಸಂಗೀತ ಹಾಗೂ ಭಕ್ತಿಯ ಅನುಭವ ಪಡೆಯಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಉತ್ಸವದ ಕುರಿತು ಹೆಚ್ಚಿನ ಮಾಹಿತಿಗಾಗಿ ೯೩೯೮೦೭೪೭೫೬ ಅಥವಾ ೭೮೪೨೭೪೯೦೧೮ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.



