ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಕಲಾವಿದ ರೆಹಮಾನ್ ಪಟೇಲ್‌ಗೆ ಸನ್ಮಾನ

ಕಲಬುರಗಿ, ಸೆ.21: ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಾಮುಲ್ಲಾ ಶರೀಫ್ ಅವರು ಕರ್ನಾಟಕ ಪ್ರವಾಸೋದ್ಯಮ ವೇದಿಕೆ, ಪ್ರವಾಸೋದ್ಯಮ ಇಲಾಖೆ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಇಂಟಕ್ ಘಟಕದ ಸಹಯೋಗದಲ್ಲಿ ಸೋಮವಾರ ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಪತಿ ಭವನದಲ್ಲಿ ಸನ್ಮಾನ ಸ್ವೀಕರಿಸಿದ ಕಲಾವಿದ ಹಾಗೂ ಸಂಶೋಧಕ ರೆಹಮಾನ್ ಪಟೇಲ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೇಬಿ ಮೊಘೇರಾ, ಪ್ಯಾಟ್ರಿಕ್ ಜಾರ್ಜ್, ಇತಿಹಾಸ ತಜ್ಞ ಡಾ. ಎಸ್.ಎಸ್. ವಾಣಿ, ಶಿಕ್ಷಣ ತಜ್ಞ ಸುನೀಲ್ ಕುಮಾರ್ ಹುಡುಗಿ, ಉರ್ದು ಸಾಹಿತಿ ಸೈಯದ್ ರೌಫ್ ಖಾದ್ರಿ, ಶಿಕ್ಷಣ ತಜ್ಞ ಶಂಕರಪ್ಪ ಎಸ್. ಹಟ್ಟಿ, ಡಾ. ಸದಾನಂದ ಪೇರ್ಲಾ, ಸಂದೀಪ್, ವಿನಯ ಚಿಕಟವಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕರ್ನಾಟಕ ಪ್ರವಾಸೋದ್ಯಮ ವೇದಿಕೆಯ ಸಂಯೋಜಕ ಸಂಧ್ಯಾರಾಜ್ ಸ್ಯಾಮುಯೆಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.



