ಜಿಲ್ಲಾಸುದ್ದಿ

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಮಂಗಲೋತ್ಸವ ಇಂದು

ಕಲಬುರಗಿ, ಸೆ. 11: ನಗರದ ಸಂಪಿಗೆನಗರದ ಶ್ರೀ ಈಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣದ ಮಂಗಲೋತ್ಸವ ಹಾಗೂ ತೊಟ್ಟಿಲು ಹರಾಜು ಕಾರ್ಯಕ್ರಮ ಶುಕ್ರವಾರ (ಸೆ. 11) ನಡೆಯಲಿದೆ.

ಬೆಳಿಗ್ಗೆ 11 ಗಂಟೆಗೆ ನಡೆಯುವ ಮಂಗಲೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಶ್ರೀ ಈಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಅಪ್ಪಾಜಿ ರಾಜಶೇಖರ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.ಒಂದು ತಿಂಗಳ ಕಾಲ ಪುರಾಣ ಪ್ರವಚನ ನಡೆಸಿದ ವೇದಮೂರ್ತಿ ವೀರೇಶ ಶಾಸ್ತ್ರಿ, ಸಂಗೀತ ಸೇವೆ ಸಲ್ಲಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ, ತಬಲಾ ಸೇವೆ ನೀಡಿದ ಅಭಿಷೇಕ ವಿಶ್ವಕರ್ಮ ಹಾಗೂ ವೀರೇಶ ಕ್ಷತ್ರಿಯ ಸೇರಿದಂತೆ ಕಾಲೋನಿಯ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮಂಗಲೋತ್ಸವದ ಅಂಗವಾಗಿ ತೊಟ್ಟಿಲು ಹರಾಜು ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸ್ವಾಮಿಗಳಿಗೆ ಪ್ರಸಾದ ಹಾಗೂ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಸಂಪಿಗೆನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀ ಈಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಚಂದ್ರಕಾಂತ ಎಸ್. ಗುತ್ತೇದಾರ ಹಾಗೂ ಚಂದ್ರಶೇಖರ ಮಡಿವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button