ಜಾನಪದ ಸಿರಿ ರಾಜ್ಯ ಪ್ರಶಸ್ತಿಗೆ ಕಲಬುರಗಿಯ 11 ಕಲಾವಿದರು ಆಯ್ಕೆ

ಕಲಬುರಗಿ, ಸೆ.10: ಕಾವೇರಿ ಚಾರಿಟಬಲ್ ಟ್ರಸ್ಟ್ (ರಿ), ಕರ್ನಾಟಕ ವತಿಯಿಂದ ಆಯೋಜಿಸಲಾಗುತ್ತಿರುವ ಕಾವೇರಿ ಶಿಕ್ಷಕರ ಸಾಹಿತ್ಯ ಸಮ್ಮೇಳನ–2026ರ ಅಂಗವಾಗಿ ನೀಡಲಾಗುವ ‘ಜಾನಪದ ಸಿರಿ ರಾಜ್ಯ ಪ್ರಶಸ್ತಿ’ಗೆ ಕಲಬುರಗಿ ಜಿಲ್ಲೆಯ 11 ಮಂದಿ ಜಾನಪದ ಕಲಾವಿದರು ಹಾಗೂ ಒಬ್ಬ ಸಂಗೀತ ಕಲಾವಿದರು ಆಯ್ಕೆಯಾಗಿದ್ದಾರೆ.
ಈ ಕುರಿತು ಕಾವೇರಿ ಚಾರಿಟಬಲ್ ಟ್ರಸ್ಟ್‌ನ ರಾಜ್ಯ ಅಧ್ಯಕ್ಷ ಡಾ. ಜಿ. ಶಿವಣ್ಣ ಅವರು ಮಾಹಿತಿ ನೀಡಿದ್ದಾರೆ.
ಕಲಾ ಹಾಗೂ ಜಾನಪದ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಜಿಲ್ಲೆಯ ಕಲಾವಿದರನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆ.12ರಂದು ಧಾರವಾಡದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದವರು
ಕಲಬುರಗಿ ಜಿಲ್ಲೆಯ ಶರಣಪ್ಪ ದೊಡ್ಡಮನಿ (ತೊಟ್ನಳ್ಳಿ), ಬಸವಲಿಂಗಪ್ಪ ಎಸ್. (ಹಲಗಿ ದಂಡೋತಿ), ಭೀಮರಾಯ ವಾಲಿಕಾರ (ಚಿತ್ತಾಪುರ), ಶಿವರಾಜ ಕಾಂಬಳೆ (ಶಹಾಬಜಾರ್), ಲಕ್ಕಪ್ಪ ಹರವಾಳ (ಜೇವರ್ಗಿ), ಸಾಯಿಕುಮಾರ ಮಾಂಗ್ (ಮಳಖೇಡ), ಪರಶುರಾಮ ಜವಳಕರ (ಕುಸನೂರ), ಸಾಯಿಕುಮಾರ ಮಂಗ್ (ಶಿವಾಜಿನಗರ), ನಾಗರಾಜ ಮೇಳಕುಂದಿ (ರಾಜಾಪುರ), ವಿಶ್ವನಾಥ ತೊಟ್ನಳ್ಳಿ (ಕುಸನೂರ) ಹಾಗೂ ಸಂಗೀತ ಕ್ಷೇತ್ರದ ಚೇತನ ಬಿ. ಕೋಬಾಳ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಕಲಾವಿದರಿಗೆ ರಾಜ್ಯಮಟ್ಟದ ಗೌರವ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿನಂದನೆ ಸಲ್ಲಿಸಿದವರು ತಿಳಿಸಿದ್ದಾರೆ.
ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗುಡ್ಕರ್, ವೇದಮೂರ್ತಿ ವೀರೇಶ್ ಶಾಸ್ತ್ರೀ (ಮಲಕೂಡ), ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ, ಆಕಾಶವಾಣಿ ಕಲಾವಿದ ಬಲಭೀಮ್ ನೆಲೋಗಿ, ಜಗದೀಶ್ ಮಾನು, ದೇವೇಂದ್ರ ಯಡ್ರಾಮಿ, ಶ್ರೀಧರ್ ಹೊಸಮನಿ, ಅಭಿಷೇಕ್ ವಿಶ್ವಕರ್ಮ, ನಾಗೇಂದ್ರ ಸಪ್ಪನಗೋಳ, ಅನೀಲ್ ಮಠಪತಿ, ಸಾಗರ್ ಭೀಮಳ್ಳಿ ಹಾಗೂ ಶಿವರಾಯ ಉಳ್ಳಿ ಸೇರಿದಂತೆ ಹಲವರು ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದ್ದಾರೆ.



