ಜಿಲ್ಲಾಸುದ್ದಿ

ಶಾಂತಶ್ರೀ ಪ್ರಶಸ್ತಿಗೆ ಬಾದವಡಗಿ, ಮುನ್ನೂರ್ ಆಯ್ಕೆ

ಕಲಬುರಗಿ, ಸೆ.9: ಕನ್ನಡದ ಅಸ್ಮಿತೆ ಹಾಗೂ ಕನ್ನಡದ ಗಟ್ಟಿ ಧ್ವನಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜೆವರಗಿ ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿ. ಶಾಂತಪ್ಪ ಪಾಟೀಲ ನರಿಬೋಳ ಅವರ ಪುಣ್ಯಸ್ಮರಣೆಯ ಅಂಗವಾಗಿ ನೀಡಲಾಗುವ ಶಾಂತಶ್ರೀ ಪ್ರಶಸ್ತಿಗೆ ಹಿರಿಯ ಲೇಖಕ, ಹೋರಾಟಗಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಸಂಗಮೇಶ ಬಾದವಡಗಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ತಿಳಿಸಿದ್ದಾರೆ.

ಸೆ.12ರಂದು ಬೆಂಗಳೂರಿನ ರಾಜಾಜಿನಗರದ ಕಾಯಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ದಿ. ಶಾಂತಪ್ಪ ಪಾಟೀಲ ನರಿಬೋಳ ಅವರ 13ನೇ ಪುಣ್ಯಸ್ಮರಣೆ ಹಾಗೂ ಶಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 20 ಸಾಧಕರಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button