ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ‘ದೇಗುಲಗಳ ಧರ್ಮ, ಧರ್ಮದೊಳಗಿನ ದೇಗುಲ’ ಕೃತಿ ಬಿಡುಗಡೆ.

ವಾಡಿ:ದೇವರುಗಳ ಧರ್ಮ ಹಾಗೂ ಧರ್ಮದ ದೇಗುಲಗಳು ಪುಸ್ತಕದ ಮೂಲಕ ಸಾಹಿತಿ ಪ್ರಬೋಧನಕಾರ ಠಾಕರೆ ಅವರು, ನಾವು ಗುಡಿ ಕಟ್ಟುವ ಮೊದಲು ದೇವರುಗಳು ಎಲ್ಲಿದ್ದವು ಎನ್ನುವ ಪ್ರಶ್ನೆಗಳನ್ನು ಹಾಕುತ್ತಾರೆ ಎಂದು ಹಿರಿಯ ಸಾಹಿತಿ ಡಿ. ಎಂ. ನದಾಫ್ ಹೇಳಿದರು.
ವಾಡಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿಯ ಸಿದ್ದಾರ್ಥ ಭವನದಲ್ಲಿ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಡಾ. ಸೂರ್ಯಕಾಂತ ಸುಜ್ಯಾತ್ ಅವರು ಅನುವಾದಿಸಿರುವ ‘ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸರ್ವವ್ಯಾಪಿಯಾದ ದೇವರು ನಾಲ್ಕು ಗೋಡೆಗಳ ನಡುವೆ ಪುಟ್ಟ ಗುಂಬಜದ ಒಳಗೆ ಇರುವ ಅನಿವಾರ್ಯತೆ ಏನಿತ್ತು ಎಂಬ ಸವಾಲು ಕರತಿಕಾರರು ಎತ್ತುತ್ತಾರೆ ಎಂದರು.
ಸತ್ಯ, ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಹೇಳುವ ಚಾರ್ವಾಕ ಪಂಥದ ಬಗ್ಗೆ ಪಂಡಿತ ಪಾಮರರು ಅಲಕ್ಷ್ಯ ತೋರಿದ್ದಾರೆ. ಆದರೆ, ಪ್ರಬೋಧನಕಾರ ಠಾಕರೆ ಅವರಂತಹ ವೈಚಾರಿಕ ಲೇಖಕರು ಆಗಾಗ ಸತ್ಯದ ಮೇಲೆ ಬೆಳಕು ಬಂದಿದ್ದ ಕಾರಣಕ್ಕೆ ಮುಚ್ಚಿಹೋದ ನೈಜ ಇತಿಹಾಸ ನಮಗೆ ದಕ್ಕುತ್ತಿದೆ ಎಂದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿಯ ಸಿದ್ದಾರ್ಥ ಭವನದಲ್ಲಿ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಡಾ. ಸೂರ್ಯಕಾಂತ ಸುಜ್ಯಾತ್ ಅವರು ಅನುವಾದಿಸಿರುವ ‘ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸರ್ವವ್ಯಾಪಿಯಾದ ದೇವರು ನಾಲ್ಕು ಗೋಡೆಗಳ ನಡುವೆ ಪುಟ್ಟ ಗುಂಬಜದ ಒಳಗೆ ಇರುವ ಅನಿವಾರ್ಯತೆ ಏನಿತ್ತು ಎಂಬ ಸವಾಲು ಕರತಿಕಾರರು ಎತ್ತುತ್ತಾರೆ ಎಂದರು.ಸತ್ಯ, ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಹೇಳುವ ಚಾರ್ವಾಕ ಪಂಥದ ಬಗ್ಗೆ ಪಂಡಿತ ಪಾಮರರು ಅಲಕ್ಷ್ಯ ತೋರಿದ್ದಾರೆ. ಆದರೆ, ಪ್ರಬೋಧನಕಾರ ಠಾಕರೆ ಅವರಂತಹ ವೈಚಾರಿಕ ಲೇಖಕರು ಆಗಾಗ ಸತ್ಯದ ಮೇಲೆ ಬೆಳಕು ಬಂದಿದ್ದ ಕಾರಣಕ್ಕೆ ಮುಚ್ಚಿಹೋದ ನೈಜ ಇತಿಹಾಸ ನಮಗೆ ದಕ್ಕುತ್ತಿದೆ ಎಂದರು.
ಈ ಸಂದರ್ಭದಲ್ಲಿ ಖೇಮಲಿಂಗ ಬೆಳಮಗಿ, ಹರಿಶ್ಚಂದ್ರ ಕರಣಿಕ, ದೇವಿಂದ್ರ ಕರದಳ್ಳಿ, ದೊಡ್ಡಶ ಬಡಿಗೇರ, ಸಂತೋಷ ಜೋಗೂರ, ಭೀಮಾ ನಾಟೇಕರ, ಬಸವರಾಜ ಜೋಗೂರ, ಜಗನ್ನಾಥ ಹಂದರ್ಕಿ, ಆನಂದಕುಮಾರ ನಿಂಬರ್ಗಾ, ನಾಗಮ್ಮ ಧನ್ನೇಕರ, ಶಕುಂತಲಾ ಕಟ್ಟಿ, ಲಕ್ಷ್ಮೀ ಕೋಳಕೂರ, ಅಶ್ವಿನಿ, ಗೀತಾ, ಭೀಮಬಾಯಿ ಸುರಪುರ, ಮನೋರಮಾ ದನ್ನೇಕರ, ಸುನೀತಾ ಖಜೂರಿ, ರೇಣು ಪ್ರದಾನಿ, ಸುಲೋಚನಾ ಕೋಳಕೂರ, ಶಿವಲೀಲಾ ಬಂದಳ್ಳಿ, ಮಲ್ಲಮ್ಮ, ಶರಣು ಯರಗೋಳ, ವಿಜಯ ಅನ್ವರಕರ, ದಿಲೀಪ ಮೈನಾಳಕರ, ಮಹೇಶ ರಾಜಳ್ಳಿ, ಸಂತೋಷ ಕೋಮಟೆ, ವಿಶಾಲ ಬಡಿಗೆರ, ವಿನಯ.ಕೆ, ಗೌತಮ, ಮಿಲಿಂದ ಸೇರಿದಂತೆ ಹಲವರಿದ್ದರು. ಸಂಚಲನ ವೇದಿಕೆ ಪ್ರಧಾನ ಕಾರ್ಯದರ್ಶಿ ರವಿ ಕೋಳಕೂರ ಸ್ವಾಗತಿಸಿದರು. ದಯಾನಂದ ಖಜೂರಿ ನಿರೂಪಿಸಿದರ. ರಘುವೀರ ಪವಾರ ವಂದಿಸಿದರು.



