ಜಿಲ್ಲಾಸುದ್ದಿ

ಡಾ. ಅಪ್ಪ ಮೊದಲ ಪುಣ್ಯಸ್ಮರಣೋತ್ಸವ: ಮ್ಯಾರಥಾನ್ ಓಟ ಯಶಸ್ವಿ

ಕಲಬುರಗಿ, ಸೆ. 5: ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪ ಅವರ ಮೊದಲ ಪುಣ್ಯಸ್ಮರಣೋತ್ಸವದ ಅಂಗವಾಗಿ ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮ್ಯಾರಥಾನ್ ಓಟ ಯಶಸ್ವಿಯಾಗಿ ನಡೆಯಿತು.

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಶ್ರೀನಿವಾಸ ಸರಡಗಿ ಮಹಾಲಕ್ಷ್ಮೀ ಶಕ್ತಿಪೀಠದ ಅಪ್ಪಾರಾವ್ ದೇವಿ ಮುತ್ಯಾ, ಖ್ಯಾತ ವೈದ್ಯ ಡಾ. ನಿರಂಜನ್ ವಿ. ನಿಷ್ಠಿ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ದೇಶಮುಖ್, ಶರಣಬಸವೇಶ್ವರ ಸಂಸ್ಥಾನದ ಆಡಳಿತಾಧಿಕಾರಿ ಡಾ. ಅಲ್ಲಮಪ್ರಭು ದೇಶಮುಖ್, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ಅನಿಲ್‌ಕುಮಾರ್ ಬಿಡವೆ ಹಾಗೂ ರಾಜಕೀಯ ಮುಖಂಡ ಶ್ರೀಕಾಂತ್ ಮಹಾಜನ್ ಸೇರಿದಂತೆ ಗಣ್ಯರು ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು.

ನಗರದ ವಿವಿಧೆಡೆಗಳಿಂದ ಆರಂಭಗೊಂಡ ಮ್ಯಾರಥಾನ್ ಓಟವು ಜಗತ್ ವೃತ್ತದ ಮೂಲಕ ಸಾಗಿತು. ಬುದ್ಧ ಮಂದಿರ, ಕೋಟನೂರು ಮಠ, ಸ್ವಾಮಿ ಸಮರ್ಥ ಮಂದಿರ ಹಾಗೂ ಆಳಂದ ರಸ್ತೆಯಲ್ಲಿರುವ ವಿಶ್ವರಾಧ್ಯ ದೇವಸ್ಥಾನದ ಮಾರ್ಗವಾಗಿ ಸಾಗಿದ ಓಟವು ಶರಣಬಸವೇಶ್ವರ ದೇವಸ್ಥಾನದವರೆಗೆ ನಡೆಯಿತು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸುಮಾರು ಎರಡು-ಮೂರು ಸಾವಿರ ವಿದ್ಯಾರ್ಥಿಗಳು ಹಾಗೂ ಖ್ಯಾತ ಉದ್ಯಮಿಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

ಡಾ. ಶರಣಬಸವಪ್ಪ ಅಪ್ಪ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಿದ್ದ ಮ್ಯಾರಥಾನ್‌ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

Related Articles

Leave a Reply

Your email address will not be published. Required fields are marked *

Back to top button