ಜಿಲ್ಲಾಸುದ್ದಿ

ಬಣಮಿಯಲ್ಲಿ ನಕಲಿ ಮ್ಯುಟೇಷನ್ ಆರೋಪ: ಆರ್‌ಐ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ದೀಪಾ ಅಮಾನತಿಗೆ ಆಗ್ರಹ

ರೈತರ ಜಮೀನು ದಾಖಲೆ ಬದಲಾವಣೆ ಕುರಿತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯ; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಜಿಲ್ಲೆಯ ಜೇವರ್ಗಿ ತಾಲೂಕಿನ ಬಣಮಿ ಗ್ರಾಮದ ರೈತರೊಬ್ಬರ ಜಮೀನಿನ ಹೆಸರನ್ನು ಮತ್ತೊಂದು ಸಮುದಾಯದ ವ್ಯಕ್ತಿಯ ಹೆಸರಿಗೆ ಬದಲಾವಣೆ ಮಾಡಿರುವುದು ನಕಲಿ ಮ್ಯುಟೇಷನ್ ಎಂದು ಆರೋಪಿಸಿರುವ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಯುವ ಘಟಕದ ಜಿಲ್ಲಾಧ್ಯಕ್ಷ ಅಭಿಷೇಕ್ ಚಕ್ರವರ್ತಿ, ಪ್ರಕರಣಕ್ಕೆ ಸಂಬಂಧಿಸಿದ ಕಂದಾಯ ನಿರೀಕ್ಷಕ ಚಂದ್ರಶೇಖರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ದೀಪಾ ಹೂಗಾರ ಅವರನ್ನು ಅಮಾನತುಗೊಳಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇವರ್ಗಿ ತಾಲೂಕಿನ ಬಣಮಿ ಗ್ರಾಮದ ನಿವಾಸಿ ದೊಂಡಪ್ಪ ತಂದೆ ಮಲ್ಲಪ್ಪ ನಾಲ್ಕೊಡಿ ಅವರು ಮೂಲತಃ ಪ್ರವರ್ಗ-1 ಕಬ್ಬಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಸರ್ವೇ ನಂ.77/ಹಿಸ್ಸಾ ನಂ.2ರ ಸುಮಾರು 32 ಗುಂಟೆ ಜಮೀನು ಹೊಂದಿದ್ದಾರೆ. ಆದರೆ 2024ರಲ್ಲಿ ಈ ಜಮೀನಿನ ಪೌತಿ/ಹೆಸರು ಬದಲಾವಣೆ ಪ್ರಕ್ರಿಯೆಯಲ್ಲಿ ಮತ್ತೊಂದು ಸಮುದಾಯದ ಮಲ್ಲಮ್ಮ ಕೊಂ. ಬಸವರಾಜ್ ಎಂಬವರ ಹೆಸರಿಗೆ ದಾಖಲೆ ಮಾಡಲಾಗಿದೆ ಎಂದು ಆರೋಪಿಸಿದರು.

ಇದು ನಕಲಿ ಮ್ಯುಟೇಷನ್ ಆಗಿರುವ ಸಾಧ್ಯತೆ ಇದ್ದು, ಕೂಡಲೇ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ಸಂಬಂಧಿಸಿದ ಕಂದಾಯ ನಿರೀಕ್ಷಕ ಚಂದ್ರಶೇಖರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ದೀಪಾ ಹೂಗಾರ ಅವರನ್ನು ಅಮಾನತುಗೊಳಿಸಿ ತನಿಖೆ ಕೈಗೊಳ್ಳಬೇಕು ಎಂದು ಅಭಿಷೇಕ್ ಚಕ್ರವರ್ತಿ ಒತ್ತಾಯಿಸಿದರು.

ಅಧಿಕಾರಿಗಳು ನಕಲಿ ಪ್ರತಿಗಳು ಅಥವಾ ಇತರ ದಾಖಲೆಗಳ ಆಧಾರದ ಮೇಲೆ ವಂಶಸ್ಥರ ದಾಖಲೆಗಳನ್ನು ಸೃಷ್ಟಿಸಿ ಹೆಸರು ಬದಲಾವಣೆಗೆ ಕಾರಣರಾಗಿದ್ದಾರೆ ಎಂಬ ಗಂಭೀರ ಆರೋಪವಿದೆ. ಹೀಗಾಗಿ ಜಮೀನಿನ ಮೂಲ ದಾಖಲೆಗಳು, ಪಹಣಿ, ಮ್ಯುಟೇಷನ್/ಪೌತಿ ದಾಖಲೆಗಳು ಹಾಗೂ ಹೆಸರು ಬದಲಾವಣೆಗೆ ಸಲ್ಲಿಸಲಾಗಿರುವ ದಾಖಲೆಗಳ ನೈಜತೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಜಮೀನಿನ ಮೂಲ ದಾಖಲೆಗಳು, ಪಹಣಿ, ಮ್ಯುಟೇಷನ್ ಮತ್ತು ಪೌತಿ ದಾಖಲೆಗಳು ಸೇರಿದಂತೆ ಹೆಸರು ಬದಲಾವಣೆಗೆ ಸಲ್ಲಿಸಿರುವ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಯಾವುದೇ ಅಕ್ರಮ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದ ಆರ್‌ಐ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಕರ್ತವ್ಯಲೋಪದ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಇಬ್ಬರನ್ನೂ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ರೈತರ ಮೂಲ ಜಮೀನಿನ ಹಕ್ಕುಗಳನ್ನು ರಕ್ಷಿಸಬೇಕು. ಪಹಣಿ ಹಾಗೂ ಕಂದಾಯ ದಾಖಲೆಗಳಲ್ಲಿ ನಡೆದಿರುವ ಹೆಸರು ಬದಲಾವಣೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ಅಭಿಷೇಕ್ ಚಕ್ರವರ್ತಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶರಣಪ್ಪ ಎಂ. ವಾಡೇಕರ್, ದತ್ತು ಹೀರಾಪುರ, ಬಸವರಾಜ್ ದೊಡ್ಡಮನಿ, ಶಿವರಾಜ್ ನಾಯ್ಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button