ಜಿಮ್ಸ್ ಆಸ್ಪತ್ರೆ ಕಲಬುರಗಿ ಯಲ್ಲಿ 80 ನೇಯ ಸ್ವಾತಂತ್ರ್ಯ ದಿನಾಚರಣೆ

ಕಲಬುರಗಿ, ಆ.15: ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಸಿ.ಆರ್. ಹಾಗೂ ಜಿಲ್ಲಾ ಶಸ್ತ್ರಜ್ಞರು ಮತ್ತು ಅಧೀಕ್ಷಕರಾದ ಡಾ. ರೂಕಿಯ ಆಸ್ನಾ ರಬಾ ಅವರು ಜಂಟಿಯಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪ ವೈದ್ಯಕೀಯ ಅಧೀಕ್ಷಕ ಡಾ. ರೇವಣಸಿದ್ದಪ್ಪ ಬೋಸ್ಗಿ, ಎಂಸಿಎಚ್ ಸ್ತ್ರೀರೋಗ ತಜ್ಞರು ಹಾಗೂ ಮುಖ್ಯಸ್ಥರಾದ ಡಾ. ಉಷಾ ದೊಡ್ಡಮನಿ, ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ. ಓಂಪ್ರಕಾಶ್ ಅಂಬೂರೆ, ಡಾ. ನಾಗರಾಜ್ ಪಾಟೀಲ, ನಿಶಾಂತ್ ಪಾಣೆಗಾಂವ್, ಡಾ. ಸುರೇಶಕುಮಾರ ಸುಂಬಡ, ಓಪಿಡಿ ಸರ್ಜನ್ ಡಾ. ಶಾಲಿನಿ ಸಜ್ಜನಶೆಟ್ಟಿ, ಡಾ. ರವೀಂದ್ರ ನಾಗಲೇಕಾರ್, ಡಾ. ಜಗದೀಶ್ ಎಂ.ಬಿ., ಜಿಲ್ಲಾ ದಂತ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಡಿ. ಹಾಗೂ ಜಿಲ್ಲಾ ಎನ್ಒಎಚ್ಪಿ ನೋಡಲ್ ಅಧಿಕಾರಿ ಡಾ. ರಾಜು ಬಿ. ರಾಂಪುರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಹಾಯಕ ಆಡಳಿತ ಅಧಿಕಾರಿ ಅಂಬಾರಾಯ ಸಂಕಾ, ತಂಬಾಕು ವ್ಯಸನ ಕೇಂದ್ರದ ಮನೋವಿಜ್ಞಾನಿ ಹಾಗೂ ಸಮಾಲೋಚಕ ಮಂಜುನಾಥ್ ಕಂಬಾಳಿಮಠ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ರಾಚಣ್ಣ ಬಿಸಗೊಂಡೆ ಅವರು ಭಾಗವಹಿಸಿದ್ದರು.
ಜಿಮ್ಸ್ ಆಸ್ಪತ್ರೆಯ ವಿವಿಧ ವಿಭಾಗಗಳ ನಿಯಮಿತ ಹಾಗೂ ಗುತ್ತಿಗೆ ವೈದ್ಯರು, ಪ್ರಾಧ್ಯಾಪಕರು, ವಿಭಾಗಗಳ ಮುಖ್ಯಸ್ಥರು, ಘಟಕ ಮುಖ್ಯಸ್ಥರು ಹಾಗೂ ವೈದ್ಯಕೀಯ ಸಿಬ್ಬಂದಿ, ಕಚೇರಿ ಅಧೀಕ್ಷಕರು ಮತ್ತು ಲಿಪಿಕ ಸಿಬ್ಬಂದಿ, ಮುಖ್ಯ ಔಷಧ ತಜ್ಞರು, ಫಾರ್ಮಾಸಿಸ್ಟ್ಗಳು, ಶುಶ್ರೂಷಾ ಅಧೀಕ್ಷಕರು, ಶುಶ್ರೂಷಾ ಸಿಬ್ಬಂದಿ ಹಾಗೂ ಗ್ರೂಪ್ ‘ಡಿ’ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇದಲ್ಲದೆ ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಸಿಬ್ಬಂದಿ, ಎಎನ್ಎಂ/ಎಲ್ಎಚ್ವಿ/ಸ್ಕೂಲ್ ಆಫ್ ನರ್ಸಿಂಗ್ನ ಪ್ರಾಂಶುಪಾಲರು, ವಿದ್ಯಾರ್ಥಿಗಳು, ಎಎಂಆರ್ಒ, ಎಂಆರ್ಡಿ ವಿಭಾಗದ ಸಿಬ್ಬಂದಿ, ಟೆಲಿಮೆಡಿಸಿನ್ ವಿಭಾಗ, ಮಾನಸಿಕ ರೋಗ ವಿಭಾಗ, ಆಯುಷ್ ವಿಭಾಗದ ವೈದ್ಯರು ಹಾಗೂ ಸಿಬ್ಬಂದಿ, ಎಆರ್ಟಿ, ವಿಸಿಟಿಸಿ, ಪಿಪಿಟಿಸಿಟಿ ವಿಭಾಗಗಳ ವೈದ್ಯರು, ಸಮಾಲೋಚಕರು, ಗ್ರೂಪ್ ‘ಡಿ’ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ವಿವಿಧ ವಿಭಾಗಗಳ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರಧ್ವಜಾರೋಹಣದ ಬಳಿಕ ಎಲ್ಲರೂ ರಾಷ್ಟ್ರಗೀತೆ ಹಾಡಿ ದೇಶದ ಏಕತೆ, ಸಾರ್ವಭೌಮತೆ ಹಾಗೂ ಸ್ವಾತಂತ್ರ್ಯದ ಮೌಲ್ಯಗಳನ್ನು ಸ್ಮರಿಸಿದರು. ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಹಾಗೂ ವಿವಿಧ ಹಂತದ ಸಿಬ್ಬಂದಿ ಒಗ್ಗೂಡಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.



